Hotel Style Rava Idli Recipe : ಬೆಳಗಿನ ಉಪಹಾರಕ್ಕೆ ತ್ವರಿತವಾಗಿ ಸಿದ್ಧಮಾಡಬಹುದಾದ ಹೋಟೆಲ್ ಸ್ಟೈಲ್ ರವೆ ಇಡ್ಲಿ ಕರ್ನಾಟಕದ ಜನಪ್ರಿಯ ಸೌತ್ ಇಂಡಿಯನ್ ಬ್ರೇಕ್ಫಾಸ್ಟ್.

Hotel Style Rava Idli ಬೇಕಾಗುವ ಪದಾರ್ಥಗಳು (Ingredients)
ರವೆ – 1 ಬಟ್ಟಲು
ಮೊಸರು – 1 ಬಟ್ಟಲು
ಉಪ್ಪು – ರುಚಿಗೆ ತಕ್ಕಷ್ಟು
ಅಡುಗೆ ಎಣ್ಣೆ – 2 ಚಮಚ
ಬೇಕಿಂಗ್ ಸೋಡಾ – ಸ್ವಲ್ಪ
ನೀರು – ಅಗತ್ಯವಿರುವಷ್ಟು
( ಕರಿ ಬೇವು, ಸಾಸಿವೆ, ಶುಂಠಿ ತುರಿ, ಕಡಲೆಬೇಳೆ, ಹುರಿದ ಕಾಜುಗಳು)
ಇದನ್ನೂ ಓದಿ: Kaju Mushroom Masala Recipe in Kannada ಕಾಜು ಮಶ್ರೂಮ್ ಮಸಾಲಾ

Hotel Style Rava Idli ಮಾಡುವ ವಿಧಾನ (Preparation Method)
1: ಮೊದಲು ಒಂದು ಪಾತ್ರೆಯಲ್ಲಿ ರವೆ, ಉಪ್ಪು ಹಾಗೂ ಮೊಸರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
2: ಈ ಮಿಶ್ರಣವನ್ನು ಸುಮಾರು 10–15 ನಿಮಿಷ ನೆನೆಯಲು ಬಿಡಿ.
3: ನಂತರ ಸ್ವಲ್ಪ ಬೇಕಿಂಗ್ ಸೋಡಾ ಹಾಗೂ ನೀರು ಸೇರಿಸಿ ಇಡ್ಲಿ ಹಿಟ್ಟಿನ ಹದಕ್ಕೆ ತರಬೇಕು.
4: ಇಡ್ಲಿ ಪಾತ್ರೆಗೆ ಎಣ್ಣೆ ಸವರಿ, ಹಿಟ್ಟನ್ನು ಹಾಕಿ.
5: ಸ್ಟೀಮರ್ನಲ್ಲಿ ನೀರನ್ನು ಕುದಿಸಿ, ಇಡ್ಲಿಗಳನ್ನು ಸುಮಾರು 14–15 ನಿಮಿಷಗಳ ಕಾಲ ಬೇಯಿಸಿ.
6: ತಂಪಾದ ಮೇಲೆ ಇಡ್ಲಿಗಳನ್ನು ತೆಗೆಯಿರಿ ಮತ್ತು ಚಟ್ನಿ ಅಥವಾ ಸಾಂಬಾರ್ ಜೊತೆ ಸವಿಯಿರಿ.
ಟಿಪ್ಸ್
ಈ ರವೆ ಇಡ್ಲಿಯನ್ನು ಕೋಕೋನಟ್ ಚಟ್ನಿ, ಟೊಮ್ಯಾಟೋ ಚಟ್ನಿ, ಅಥವಾ ಸಾಂಬಾರ್ ಜೊತೆಗೆ ನೀಡಿದರೆ ರುಚಿ ಡಬಲ್ ಆಗುತ್ತದೆ!




