KOLAR ACCIDENT : ಕೋಲಾರ ಜಿಲ್ಲೆಯ ಶ್ರೀನಿವಾಸ್ಪುರ ತಾಲೂಕಿನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ದಂಪತಿಗಳಿಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.

ಕೋಲಾರದಲ್ಲಿ ಭೀಕರ ರಸ್ತೆ ಅಪಘಾತ: ದಂಪತಿಗಳ ದುರ್ಮರಣ
ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಅಪಘಾತದ ಕುರಿತಾಗಿ ಪೊಲೀಸ್ ಇಲಾಖೆ, ಆರ್ ಟಿಓ ಇಲಾಖೆಯ ಮುನ್ನೆಚ್ಚರಿಕೆ ವಹಿಸುವಂತೆ ಅರಿವು ಮೂಡಿಸಿದ್ರು. ಅದ್ಯಾಕೋ ಈ ಅಪಘಾತ ಪ್ರಕರಣಗಳು ಕಡಿಮೆಯಾಗುತ್ತಿ.. ಪ್ರತಿನಿತ್ಯ ಈ ಆಕ್ಸಿಡೆಂಟ್ ಪ್ರಕರಣಗಳು ಪೊಲೀಸ್ ಠಾಣೆಯಲ್ಲಿ ದಾಖಲಾಗುತ್ತಿವೆ. ಇತ್ತ KOLAR ಜಿಲ್ಲೆಯ ಶ್ರೀನಿವಾಸ್ ಪುರ ತಾಲೂಕಿನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ದಂಪತಿಗಳಿಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.

TT ವಾಹನ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ
ಟಿಟಿ ವಾಹನ ಹಾಗೂ ದ್ವಿಚಕ್ರ ವಾಹನ ನಡುವೆ ಅಪಘಾತ ಸಂಭವಿದ್ದು, ಮೃತ ದಂಪತಿಗಳನ್ನು 36 ವರ್ಷ ರಾಮಾಮಜಲು ಹಾಗೂ 27 ವರ್ಷದ ಕಲಾವತಿ ಎನ್ನಲಾಗಿದೆ. ಈ ದಂಪತಿಗಳಿಬ್ಬರು ಮೂಲತಃ ಅಂದ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಯರಂವಾರಪಲ್ಲಿ ಗ್ರಾಮದ ನಿವಾಸಿಗಳು ಎನ್ನಲಾಗಿದೆ.
ಇದನ್ನು ಓದಿ : Kolar Girls Suicide Case : 7ನೇ ತರಗತಿ ಬಾಲಕಿಯರ ಆತ್ಮಹತ್ಯೆ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್

ಊರಿಗೆ ಹೋಗಿ ವಾಪಾಸು ಬರುವಾಗ ದುರಂತ
ದಂಪತಿಗಳು ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಕೆಲಸದ ನಿಮಿತ್ತ ತಮ್ಮ ಊರಿಗೆ ತೆರಳಿದ್ದರಂತೆ, ಕೆಲಸ ಮುಗಿಸಿ ಬೆಂಗಳೂರಿಗೆ ವಾಪಾಸಾಗುವ ವೇಳೆ ಶ್ರೀನಿವಾಸಪುರ ತಾಲ್ಲೂಕಿನ ಸುಣ್ಣಕಲ್ಲು ಕ್ರಾಸ್ ನಲ್ಲಿ ಅಪಘಾತ ಸಂಭವಿಸಿದ್ದು ದಂಪತಿಗಳಿಬ್ಬರು ಮೃತಪಟ್ಟಿದ್ದಾರೆ. ಈ ಸಂಬಂಧ ರಾಯಲ್ಪಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
WATCH THIS : TUMAKURU DIVISION BUZZ | TUMAKURU DISTRICT DIVIDE ಆಗ್ತಾ ಇದೆಯಾ? ಯಾವ ತಾಲೂಕುಗಳು ಹೊಸ ಜಿಲ್ಲೆ ಆಗತ್ತವೆ?




