Womenʼs ODI World Cup 2025: ಮತ್ತೆ ಪಾಕಿಸ್ತಾನ ಬಗ್ಗು ಬಡಿದ ಭಾರತ ಮಹಿಳಾ ತಂಡ 43ನೇ ಓವರ್ನಲ್ಲಿ ಪಾಕ್ ತಂಡ ಆಲ್ಔಟ್. ಕೊಲಂಬೊದಲ್ಲಿ ನಡೆದ ಮಹಿಳಾ ಏಕದಿನ ವಿಶ್ವಕಪ್ ಪಂದ್ಯದಲ್ಲಿ, ಭಾರತ ತಂಡವು ಪಾಕಿಸ್ತಾನ ತಂಡವನ್ನು 88 ರನ್ ಗಳ ಮೂಲಕ ಸೋಲಿಸಿ ಭರ್ಜರಿ ಜಯ ದಾಖಲಿಸಿದೆ.

Womenʼs ODI World Cup 2025 : ಪ್ರೇಮದಾಸ ಅಂತರಾಷ್ಟ್ರೀಯ Cricket Stadium ನಲ್ಲಿ ನಡೆದ ಮಹಿಳಾ ಏಕದಿನ ವಿಶ್ವಕಪ್ ಕ್ರಿಕೆಟ್ (ODI World Cup) ಪಂದ್ಯದಲ್ಲಿ ಭಾರತ ಮಹಿಳಾ ತಂಡ ಪಾಕಿಸ್ತಾನ ವಿರುದ್ಧ 88 ರನ್ಗಳ ಭರ್ಜರಿ ಗೆಲುವು ದಾಖಲಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ TEAM INDIA, ಉತ್ತಮ ಆರಂಭ ಪಡೆಯುತ್ತಾ 248 ರನ್ಗಳ ಗುರಿ ನೀಡಿತು. ನಂತರ ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡ, ಭಾರತೀಯ ಬೌಲರ್ಗಳ ಕುಸಿತದ ಮುಂದೆ ನಿಲ್ಲಲಾರದೆ 43 ಓವರ್ಗಳಲ್ಲಿ 159 ರನ್ಗಳಿಗೆ ಆಲೌಟ್ ಆಯಿತು.
ಭಾರತದ ಬಲಿಷ್ಠ ಆರಂಭ
ಭಾರತದ ಪರ ಆರಂಭಿಕ ಜೋಡಿಗಳಾದ ಸ್ಮೃತಿ ಮಂಧನಾ ಮತ್ತು ಪ್ರತಿಕಾ ರಾವಲ್ ಉತ್ತಮ ಆರಂಭ ನೀಡಿ ತಂಡಕ್ಕೆ ಬಲ ನೀಡಿದರು. ಇವರು 54 ಎಸೆತಗಳಲ್ಲಿ 48 ರನ್ಗಳ ಜೋಡಿಯನ್ನು ದಾಖಲಿಸಿದರು. ಭಾರತದ ಬೌಲರ್ಗಳು ಪಾಕಿಸ್ತಾನ ಬ್ಯಾಟಿಂಗ್ ಸಾಲಿನಲ್ಲಿ ಆತಂಕ ಸೃಷ್ಟಿಸಿದ್ದು, ನಿಯಮಿತ ಅಂತರದಲ್ಲಿ ವಿಕೆಟ್ಗಳನ್ನು ಕಬಳಿಸಿ ಅವರನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸಿದರು.
ಇನ್ನು ಈ ಪಂದ್ಯದಲ್ಲಿ ಭಾರತೀಯ ಆಟಗಾರರು ಎದುರಾಳಿ ಆಟಗಾರರಿಗೆ ಹಸ್ತಲಾಘವ ನೀಡಲು ನಿರಾಕರಿಸಿದ್ದು, ಟಾಸ್ ವಿವಾದ ಸೇರಿದಂತೆ ಕೀಟಗಳ ಸಮಸ್ಯೆಯಿಂದ ಪಾಕ್ ಆರಂಭ ಆಟಗಾರ್ತಿಯ ರೋಚಕ ರನೌಟ್ ಹೀಗೆ ಹಲವು ವಿವಾದಾತ್ಮಕ ಅಂಶಗಳಿಗೆ ಸಾಕ್ಷಿಯಾಯಿತು.




