DHRUVA SARJA ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಸದ್ಯ ನಟನ ಹುಟ್ಟುಹಬ್ಬಕ್ಕೆ, ಸಿನಿಮಾ ನಟ- ನಟಿಯರು ಹಾಗೂ ಫ್ಯಾನ್ಸ್ ಕಾಮೆಂಟ್ ಮೂಲಕ ಶುಭ ಹಾರೈಸುತ್ತಿದ್ದಾರೆ.

ಕನ್ನಡ ಚಿತ್ರರಂಗದ ಜನಪ್ರಿಯ ನಟ, ‘ಆ್ಯಕ್ಷನ್ ಪ್ರಿನ್ಸ್’ (Action Price) ಎಂದೇ ಖ್ಯಾತಿ ಪಡೆದ DHRUVA SARJA ಇಂದು ತಮ್ಮ 37ನೇ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ವಿಶೇಷವಾಗಿ ಆಚರಿಸುತ್ತಿದ್ದಾರೆ. ಕಳೆದ 3 ವರ್ಷಗಳಿಂದ ಹುಟ್ಟುಹಬ್ಬದ ಸಂದರ್ಭದಲ್ಲಿ ಅಭಿಮಾನಿಗಳಿಂದ ದೂರವಿದ್ದ ಧ್ರುವ , ಈ ಬಾರಿ ಅಭಿಮಾನಿ ಗಳೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿ ಕೊಳ್ಳುತ್ತಿದ್ದಾರೆ.
ಧ್ರುವ ವಿಶೇಷ ಮನವಿ
“ಇಷ್ಟು ವರ್ಷ ನೀವು ದುಡಿದ ಹಣದಲ್ಲಿ ಹೂವಿನ ಹಾರ, ಕೇಕ್, ಬ್ಯಾನರ್ ಹಾಕಿಸಿದ್ರಿ. ಆದರೆ ಈ ಬಾರಿ ನಿಮ್ಮ ಹಣದಿಂದ ಹಾರ ತರುವ ಬದಲು, ಮಕ್ಕಳಿಗೆ ಉಪಯೋಗವಾಗುವ ಪುಸ್ತಕ, ಪೆನ್ನು, ಜಾಮಿಟ್ರಿ ಇತ್ಯಾದಿ ಕೊಡಿ. ಅದು ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೆ ಬಹಳ ಉಪಯೋಗವಾಗುತ್ತದೆ” ಎಂದು ಧ್ರುವ ಸರ್ಜಾ ಮನವಿ ಮಾಡಿದ್ದಾರೆ. ಈ ಕೋರಿಕೆಗೆ ಅಭಿಮಾನಿಗಳಿಂದ ಉತ್ತಮ ಸ್ಪಂದನೆ ಕೂಡ ದೊರಕುತ್ತಿದೆ.

ಚಲನಚಿತ್ರ ಪಯಣದಲ್ಲಿ ಯಶಸ್ಸು ಹಿಡಿದ ನಟ
2012ರಲ್ಲಿ ‘ಅದ್ಧೂರಿ’ ಚಿತ್ರದ ಮೂಲಕ Sandalwood ಗೆ ಪದಾರ್ಪಣೆ ಮಾಡಿದ ಧ್ರುವ ಸರ್ಜಾ, ಮೊದಲ ಚಿತ್ರದಲ್ಲೇ ಅತ್ಯುತ್ತಮ ಚೊಚ್ಚಲ ನಟನಾಗಿ SIIMA, SUVARNA, UDAYA FILM ಅವಾರ್ಡ್ಗಳನ್ನು ಗೆದ್ದಿದ್ದರು. ಆ ನಂತರ ‘ಬಹುದ್ಧೂರ್’, ‘ಭರ್ಜರಿ’, ‘ಪೊಗರು’ ಚಿತ್ರಗಳ ಮೂಲಕ ತಮ್ಮ “ಮಾಸ್” ಇಮೇಜ್ನ್ನು ಗಟ್ಟಿಗೊಳಿಸಿದರು. ಧ್ರುವ ಸರ್ಜಾ ಸದ್ಯಕ್ಕೆ ಬಹುಕೋಟಿ ರೂ. ವೆಚ್ಚದ ‘ಕೆಡಿ: ದಿ ಡೆವಿಲ್’ ಚಿತ್ರಗಳಲ್ಲಿ ನಟಿಸುತ್ತಿದ್ದು, ಈ ಸಿನಿಮಾ ಬಿಡುಗಡೆ ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಸದ್ಯ ಶೂಟಿಂಗ್ ಪೂರ್ಣಗೊಂಡಿದ್ದು, ಸದ್ಯದಲ್ಲೇ ಬಿಡು ಗಡೆಯಾಗಲಿದೆ.
ವೈಯಕ್ತಿಕ ಜೀವನವೂ ಅದ್ಧೂರಿ
ಧ್ರುವ ಸರ್ಜಾ ಅವರು ತಮ್ಮ ಬಾಲ್ಯದ ಗೆಳತಿ ಪ್ರೇರಣಾ ಶಂಕರ್ ಅವರನ್ನು 2019ರ ನವೆಂಬರ್ 24 ರಂದು ಮದುವೆಯಾದರು. ಪ್ರೇಮದಿಂದ ಪ್ರಾರಂಭವಾದ ಈ ಸಂಬಂಧ ಇಂದು ಇಬ್ಬರು ಮಕ್ಕಳೊಂದಿಗೆ ಸಂತೋಷದ ಕುಟುಂಬವಾಗಿದೆ.

ಸಾಮಾಜಿಕ ಹೊಣೆಗಾರಿಕೆಗೆ ಆದರ್ಶ ನಟ
ಹುಟ್ಟುಹಬ್ಬದ ದಿನವನ್ನು ಸಾಂಪ್ರದಾಯಿಕವಾಗಿ ಆಚರಿಸುವ ಬದಲು, ಧ್ರುವ ಸರ್ಜಾ ಅವರು ಸಾಮಾಜಿಕ ಜವಾ ಬ್ದಾರಿಯ ದಿಕ್ಕಿನಲ್ಲಿ ಹೆಜ್ಜೆ ಇಟ್ಟಿರುವುದು ನಟನಾಗಿ ಮಾತ್ರವಲ್ಲ, ವ್ಯಕ್ತಿತ್ವದ ದೃಷ್ಠಿಯಿಂದಲೂ ಅಭಿನಂದ ನೀಯವಾಗಿದೆ.

