
Madhugiri Drinking water unit problem : ಬರದ ನಾಡು ಎಂದೇ ಖ್ಯಾತಿ ಗಳಿಸಿರುವ ಮಧುಗಿರಿಯಲ್ಲಿ ಇಂದಿಗೂ ಅದೆಷ್ಟೋ ಜ್ವಲಂತ ಸಮಸ್ಯೆಗಳು ಜನರನ್ನು ಕಾಡುತ್ತಿವೆ. ಅದೆಷ್ಟೇ ಬಾರಿ ಸಮಸ್ಯೆಗಳ ಕುರಿತಾಗಿ ಅಧಿಕಾರಿಗಳಿಗೆ ಮನವಿ ಮಾಡಿದ್ರು ಅದ್ಯಾಕೋ ಬೇಜವಾಬ್ದಾರಿ ತೋರುತ್ತಿದ್ದಾರೆ. ಇದೇ ಕಾರಣಕ್ಕೆ ಇಂದಿಗೂ ಕೂಡ ಹಲವು ಗ್ರಾಮಗಳಲ್ಲಿ ಸರಿಯಾದ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ಜನರು ಪರದಾಡುತ್ತಿದ್ದಾರೆ. ಇಲ್ಲೊಂದು ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವಿದೆ. ಆದ್ರೆ ಘಟನ Open ಮಾಡಿ 2 ವರ್ಷಕ್ಕೆ ಕೆಟ್ಟು ನಿಂತು, ಗ್ರಾಮದ ಜನರು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ.
ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಹೋಬಳಿಯ ದೊಡ್ಡಮಾಲೂರು ಗ್ರಾಪಂ ವ್ಯಾಪ್ತಿಯ ಸೂರನಾಗೇನಹಳ್ಳಿ ಗ್ರಾಮದಲ್ಲಿ ಬರೀ ನಾಮಕಾವಾಸ್ಥೆಗೆ ಮಾತ್ರ ಶುದ್ದ ನೀರಿನ ಘಟಕವಿದೆ. ಆದ್ರೆ, ಈ ಶುದ್ಧ ಕುಡಿಯುವ ನೀರಿನ ಘಟಕ 6 ತಿಂಗಳಿಗೊಮ್ಮೆ ಮಾತ್ರ ಕಾರ್ಯನಿರ್ವಹಿಸ್ತಾ ಇದ್ದು, ಎರಡು ವರ್ಷಕ್ಕೊಮ್ಮೆ ದುರಸ್ಥಿಕಾರ್ಯ ಮಾಡಲಾಗ್ತ ಇದ್ಯಂತೆ. ಇನ್ನ ಈ ಬಗ್ಗೆ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದ್ರು, ಅಧಿಕಾರಿಗಳು ಮಾತ್ರ ಸರಿಪಡಿಸುವ ಗೋಜಿಗೆ ಮಾತ್ರ ಹೋಗ್ತಾ ಇಲ್ಲ. ಇದ್ರಿಂದ ಇಲ್ಲಿನ ನಿವಾಸಿಗಗಳು ಅಶುದ್ಧ ನೀರನ್ನೇ ಕುಡಿಯುತ್ತಿದ್ದು, ಆನಾರೋಗ್ಯ ಕ್ಕೆ ತುತ್ತಾಗೋ ಭೀತಿಯಲ್ಲಿದ್ದಾರೆ.
ಇನ್ನ ಈ ಘಟಕ 2017 ರಲ್ಲಿ ಮಾಜಿ ಶಾಸಕ ರಾಜಣ್ಣ ಅವ್ರು ಅವಧಿಯಲ್ಲಿ ಮಂಜೂರಾಗಿದ್ದು, 2018ರಲ್ಲಿ ಶಾಸಕ ರಾಗಿದ್ದ ವೀರಭದ್ರಯ್ಯ ಅವರು ಈ ಘಟಕವನ್ನ ಉದ್ಘಾಟಿಸಿದ್ರು. ಆದ್ರೆ ಉದ್ಘಾಟನೆಯಾಗಿ ಎರಡೇ ವರ್ಷಕ್ಕೆ ಈ ಘಟಕ ಕೆಟ್ಟು ಹಾಳಾಗಿದೆ. 2021 ರಲ್ಲಿ ಗ್ರಾಪಂ ಸದಸ್ಯರ ಒತ್ತಾಯದ ಮೇರೆಗೆ ಸುಮಾರು 1 ಲಕ್ಷ ವೆಚ್ಚದಲ್ಲಿ ದುರಸ್ಥಿ ಮಾಡಲಾಗಿತ್ತು. ನಂತರ ಇದನ್ನ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಸುರ್ಪದಿಗೆ ಪಡೆದಿದ್ದು, ಇದುವರೆಗೂ ಅದನ್ನು ದುರಸ್ಥಿ ಮಾಡಿಸುವ ಗೋಜಿಗೆ ಹೋಗಿಲ್ಲ. ಇದ್ರಿಂದ ಜನರು ಸುಮಾರು 3 ಕಿಲೋಮೀಟರ್ ಹೋಗಿ ಬೇರೆ ಕಡೆಯಿಂದ ನೀರು ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಅಧಿಕಾರಿಗಳಿಗೆ ಮನವಿ ಮಾಡಿದ್ರೂ ಕ್ಯಾರೆ ಎನ್ನುತ್ತಿಲ್ಲ ಅಂತ ಸಾರ್ವಜನಿಕರು ಅಕ್ರೋಶ ಹೊರಹಾಕಿದ್ರು.
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು, ಸೂರನಾಗೇನಹಳ್ಳಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಸರಿಪಡಿಸಿ, ಜನರ ಆರೋಗ್ಯವನ್ನು ಕಾಪಾಡಬೇಕಿದೆ.




