
777 Charlie Movie
2021ನೇ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ (State Awards 2025) ಘೋಷಣೆಯಾಗಿದ್ದು, ‘777 ಚಾರ್ಲಿ’ ಚಿತ್ರ ನಾಲ್ಕು ಪ್ರಮುಖ ಪ್ರಶಸ್ತಿಗಳನ್ನು ಆಯ್ದುಕೊಂಡಿದೆ. ನಟ ರಕ್ಷಿತ್ ಶೆಟ್ಟಿಗೆ ಈ ಚಿತ್ರದಲ್ಲಿ ನೀಡಿದ ಭಾವನಾತ್ಮಕ ಅಭಿನಯಕ್ಕೆ ಅತ್ಯುತ್ತಮ ನಟ (BEST ACTOR) ಪ್ರಶಸ್ತಿ ಲಭಿಸಿದ್ದು, ಎರಡನೇ ಅತ್ಯುತ್ತಮ ಚಲನಚಿತ್ರ, ಅತ್ಯುತ್ತಮ ಸಂಕಲನ (Best Editing) (ಪ್ರತೀಕ್ ಶೆಟ್ಟಿ) ಮತ್ತು ಅತ್ಯುತ್ತಮ ಗೀತರಚನೆ (Best Songwriting) (ನಾಗಾರ್ಜುನ ಶರ್ಮಾ) ಪ್ರಶಸ್ತಿಗಳು ಘೋಷಣೆಯಾಗಿ
777 Charlie Movie
ಈ ಯಶಸ್ಸಿನ ಬಗ್ಗೆ ನಟ ರಕ್ಷಿತ್ ಶೆಟ್ಟಿ ಎಕ್ಸ್ (ಹಳೆಯ ಟ್ವಿಟರ್) ನಲ್ಲಿ ಸಂತೋಷ ವ್ಯಕ್ತಪಡಿಸಿದ್ದು, ನಮ್ಮ 777 ಚಾರ್ಲಿ’ 4 ರಾಜ್ಯ ಪ್ರಶಸ್ತಿಗಳನ್ನು ಗೆದ್ದಿದೆ. 2 ನೇ ಅತ್ಯುತ್ತಮ ಚಲನಚಿತ್ರ, ಅತ್ಯುತ್ತಮ ನಟ, ಅತ್ಯುತ್ತಮ ಗೀತರಚನೆಕಾರ ಮತ್ತು ಅತ್ಯುತ್ತಮ ಸಂಪಾದನೆ ವಿಭಾಗಕ್ಕೆ ಸಿನಿಮಾವನ್ನು ಆಯ್ಕೆ ಮಾಡಿದ ತೀರ್ಪುಗಾರರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ನಮ್ಮ ಸಿನಿಮಾ ತಂಡ ಮತ್ತು ಪ್ರೇಕ್ಷಕರಿಗೂ ಧನ್ಯವಾದ. ಕಿರಣ್ರಾಜ್ ಅವರ ವಿಷನ್, ಪ್ರಥೀಕ್ ಅವರ ಎಡಿಟಿಂಗ್, ನಾಗಾರ್ಜುನ್ ಶರ್ಮಾ ಅವರ ಅತ್ಯುತ್ತಮ ಪದಗಳ ಗೀತರಚನೆಯು ನನ್ನ ಹೃದಯ ಮುಟ್ಟಿದೆ ಎಂದು ತಮ್ಮ ಪೋಸ್ಟ್ (POST) ನಲ್ಲಿ ಬರೆದುಕೊಂಡಿದ್ದಾರೆ.




