ಹುಳಿಯಾರು ಪಟ್ಟಣದ ನಾಡಕಚೇರಿ ಎದುರು ಪ್ರತಿದಿನ ಬೆಳಿಗ್ಗೆ ನಡೆಯುವ ತರಕಾರಿ ಹಾಗೂ ಸೊಪ್ಪಿನ ಮಾರುಕಟ್ಟೆಯಲ್ಲಿ ರೈತರಿಂದ ಸುಂಕ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ರೈತರು ಗುತ್ತಿಗೆದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿಕ್ಕನಾಯಕನಹಳ್ಳಿ ಜಿಲ್ಲೆಯ ಹುಳಿಯಾರು ಪಟ್ಟಣದ ನಾಡಕಚೇರಿ ಎದುರು ಪ್ರತಿದಿನ ಬೆಳಿಗ್ಗೆ ನಡೆಯುವ ತರಕಾರಿ ಹಾಗೂ ಸೊಪ್ಪಿನ ಮಾರುಕಟ್ಟೆಯಲ್ಲಿ ರೈತರಿಂದ ಸುಂಕ ವಸೂಲಿ ಮಾಡಲಾಗುತ್ತಿದೆ. ವಸೂಲಿ ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘದ ಚಂದ್ರಪ್ಪ ಬಣದ ನೇತೃತ್ವದಲ್ಲಿ ರೈತರು ಮತ್ತು ಮಾರಾಟಗಾರರು ಗುತ್ತಿಗೆದಾರರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ರು.
ಇನ್ನು ರೈತ ಸಂಘದ ರಾಜ್ಯಾಧ್ಯಕ್ಷ ಹೊಸಹಳ್ಳಿ ಚಂದ್ರಪ್ಪ ಮಾತನಾಡಿ, ಇಲ್ಲಿ ಸಂತೆ ನಡೆತೀಲ್ಲ ಎಂಬ ಕಾರಣಕ್ಕೆ ರೈತರಿಗೆ ಅನುಕೂಲವಾಗಲೆಂದು, ನಾವು ನಮ್ಮದೇ ವೆಚ್ಚದಲ್ಲಿ ಸಹಾಯಧನದ ಮೂಲಕ ಈ ಮಾರುಕಟ್ಟೆಯನ್ನ ನಿರ್ಮಿಸಿದ್ದೇವೆ. ಯಾರೇ ರೈತರು ಬಂದ್ರೂ, ಇಲ್ಲಿ ನೇರ ವ್ಯಾಪಾರ ಅಂತ ನಿರ್ಮಿಸಿದ್ದೇವೆ. ಇಲ್ಲಿ ರೈತರಿಂದ ಯಾವುದೇ ಸುಂಕ ವಸೂಲಿಗೆ ಅವಕಾಶವಿಲ್ಲ, ಹೀಗಾಗಿ ಯಾವುದೇ ಕಾರಣಕ್ಕೂ ಸುಂಕವಿಲ್ಲ ಅಂತ ಅಕ್ರೋಶ ಹೊರಹಾಕಿದ್ರು.
ಇನ್ನು ಗುತ್ತಿಗೆದಾರ ಚೆನ್ನಕೇಶವ ಅವರು ಮಾತನಾಡಿ “ನಾನು ರೈತರಿಂದ ಹಣ ವಸೂಲಿ ಮಾಡಿಲ್ಲ. ಕೇವಲ ಕಮರ್ಷಿಯಲ್ ಅಂಗಡಿಗಳಿಂದ ಮಾತ್ರ ವಸೂಲಿ ಮಾಡ್ತಾ ಇದ್ದು, ಪಟ್ಟಣ ಪಂಚಾಯಿತಿ ಅನುಮತಿ ನೀಡಿದೆ. ಅಲ್ಧೇ ಗುತ್ತಿಗೆ ಬಾಕಿಯಿರುವ ಆರು ತಿಂಗಳ ಹಣವನ್ನ ಹಿಂದಿರುಗಿಸಿದ್ರೆ ಮಾತ್ರ ವಸೂಲಿ ನಿಲ್ಲಿಸ್ತೀವಿ ಎಂದ್ರು
ಈ ವೇಳೆ ಹೊಸಹಳ್ಳಿ ಚಂದ್ರಪ್ಪ, ಕರಿಯಪ್ಪ, ಪುಟ್ಟಯ್ಯ, ಪುಷ್ಪಾಭಾಯಿ, ನಾಗಪ್ಪ, ಕಲ್ಲಳ್ಳಿ ಕುಮಾರ್, ಬಿ. ಲಕ್ಷ್ಮಿ, ಈರಣ್ಣ ಹಲವರು ಹಾಜರಿದ್ರು.




