
Skeleton Found In Bengaluru Apartment : ಬೆಂಗಳೂರಿನ (Bengaluru) ಕೊತ್ತನೂರು ಬಳಿಯ ನಿರ್ಮಾಣ ಹಂತದ ಕಟ್ಟಡದಲ್ಲಿ ಅಸ್ಥಿಪಂಜರ (Skeleton found) ಪತ್ತೆಯಾಗಿದೆ. ಕೊತ್ತನೂರು ಬಳಿಯ ಸಮೃದ್ಧಿ ಅಪಾರ್ಟ್ ಮೆಂಟ್ ನಲ್ಲಿ (Samruddhi Apartment) ಅಸ್ಥಿಪಂಜರ ಕಂಡುಬಂದಿದೆ.ಅಂದಾಜು 6ರಿಂದ 8 ತಿಂಗಳ ಹಿಂದೆ ಮೃತಪಟ್ಟಿರ ಬಹುದಾದ ವ್ಯಕ್ತಿಯ ಅಸ್ಥಿಪಂಜರವಿರಬಹುದು ಎನ್ನಲಾಗಿದೆ. ನಿನ್ನೆ (ಅ.3) ಸಂಜೆ, ಕಟ್ಟಡ ಕಾರ್ಮಿಕರ ಕಣ್ಣಿಗೆ ಅಸ್ತಿಪಂಜರ ಬಿದ್ದಿದೆ.
ನಿನ್ನೆ ಅಪಾರ್ಟ್ ಮೆಂಟ್ Security Guard ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಕೊತ್ತನೂರು ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಅಸ್ಥಿಪಂಜರವನ್ನು FSL ಗೆ ರವಾನೆ ಮಾಡಿದ್ದಾರೆ. ಮೇಲ್ನೋಟಕ್ಕೆ 35ರಿಂದ 40 ವರ್ಷದ ಪುರುಷನ ಅಸ್ಥಿಪಂಜರವಿರಬಹುದೆಂದು ಶಂಕಿಸಲಾಗಿದೆ. ವ್ಯಕ್ತಿಯ ಸಾವಿನ ಕಾರಣ FSL ವರದಿಯ ಬಳಿಕ ಗೊತ್ತಾಗಲಿದೆ.




