
Good news for Namma Metro Yellow Line passengers : ಬೆಂಗಳೂರು ನಗರದ Metro ಪ್ರಯಾಣಿಕರಿಗೆ Good News ಸಿಕ್ಕಿದೆ. R.V ರಸ್ತೆದಿಂದ ಬೊಮ್ಮಸಂದ್ರವರೆಗೆ ಸಂಪರ್ಕಿಸುವ YELLOW LINE ಮಾರ್ಗಕ್ಕೆ ಐದನೇ ಮೆಟ್ರೋ ರೈಲು ಇದೀಗ ಬೆಂಗಳೂರು ತಲುಪಿದೆ. ಈ ರೈಲು ಕೋಲ್ಕತ್ತಾದ ಟಿಟಾಗರ್ ರೈಲ್ವೇ ಸಿಸ್ಟಮ್ಸ್ ಲಿಮಿಟೆಡ್ ನಿಂದ ಹೊರಟು ಸೆಪ್ಟೆಂಬರ್ 19 ರಂದು ಬೆಂಗಳೂರಿಗೆ ಆಗಮಿಸಿತ್ತು. ಇದೀಗ ಅಕ್ಟೋಬರ್ 4ರಿಂದ ಈ ರೈಲು Testing ಹಂತ ಪ್ರವೇಶಿಸಿದೆ.
BMRCL (ಬೆಂಗಳೂರು ಮೆಟ್ರೋ ರೈಲು ನಿಗಮ) ಈ ಬಗ್ಗರ ಮಾಹಿತಿ ನೀಡಿದೆ. ಈ ರೈಲು ಮೇಲೆ ಸಿಗ್ನಲ್, ಟೆಲಿಕಮ್ಯೂನಿಕೇಶನ್, ಪವರ್ ಸಪ್ಲೈ ಮುಂತಾದ ಅಂಶಗಳ ಪರೀಕ್ಷೆ ನಡೆಯಲಿದೆ. ಈ ಪರೀಕ್ಷೆಯು 20 ದಿನಗಳವರೆಗೆ ನಡೆಯಲಿದ್ದು, ಯಶಸ್ವಿಯಾಗಿ ಮುಕ್ತಾಯವಾದ ಬಳಿಕ ರೈಲು ವಾಣಿಜ್ಯ ಸೇವೆಗೆ ಸೇರಿಸಲಾಗುತ್ತದೆ.
ಈ ಮೊದಲು, ಯೆಲ್ಲೋ ಲೈನ್ನಲ್ಲಿ ಕೇವಲ ನಾಲ್ಕು ರೈಲುಗಳು ಮಾತ್ರ ಇದ್ದ ಕಾರಣದಿಂದಾಗಿ 19 ನಿಮಿಷಕ್ಕೊಮ್ಮೆ ಮಾತ್ರ ಮೆಟ್ರೋ ಸಂಚಾರವಾಗುತ್ತಿತ್ತು. ಆದರೆ ಐದನೇ ರೈಲು ಸೇವೆಗೆ ಬರಲು ಸಿದ್ಧವಾದ ಬಳಿಕ, ಈ ಅಂತರವನ್ನು 15 ನಿಮಿಷಕ್ಕೊಮ್ಮೆ ಎಂಬಂತೆ ಕಡಿಮೆ ಮಾಡಲಾಗುತ್ತದೆ.
ಪ್ರಧಾನಮಂತ್ರಿ Narendra Modi ಅವರು ಆಗಸ್ಟ್ 10ರಂದು ಈ ಮಾರ್ಗಕ್ಕೆ ಅಧಿಕೃತ ಚಾಲನೆ ನೀಡಿದ ಮೇಲೆ, ಪ್ರಯಾಣಿಕರಿಂದ ಉತ್ತಮ ಪ್ರತಿಸ್ಪಂದನೆ ವ್ಯಕ್ತವಾಗಿದೆ. ಈ ಹಿನ್ನಲೆಯಲ್ಲಿ, BMRCL ಒಟ್ಟು 15 ರೈಲುಗಳನ್ನು Order ಮಾಡಿದ್ದು, ಈಗಾಗಲೇ ಐದು ರೈಲುಗಳು ಬೆಂಗಳೂರಿಗೆ ಆಗಮಿಸಿವೆ.
ಉಳಿದ ಹತ್ತು ರೈಲುಗಳ ಪೈಕಿ ಒಂದು ರೈಲು ಈ ತಿಂಗಳಲ್ಲಿ, ಎರಡು ರೈಲುಗಳು ನವೆಂಬರ್ನಲ್ಲಿ ಬರಲಿವೆ. ಹೀಗೆ ಪ್ರತಿ ತಿಂಗಳು ಒಂದರಂತೆ ರೈಲುಗಳು ತಲುಪುವ ನಿರೀಕ್ಷೆ ಇದೆ. ಎಲ್ಲಾ 15 ರೈಲುಗಳು Bengaluru Metro ಗೆ ಲಭ್ಯವಾದ ಬಳಿಕ, ಯೆಲ್ಲೋ ಲೈನ್ನಲ್ಲೂ ಪ್ರತಿ 5 ನಿಮಿಷಕ್ಕೊಮ್ಮೆ ರೈಲು ಸಂಚಾರಗೊಳ್ಳಲಿದೆ.




