
ಪಾವಗಡ ಪಟ್ಟಣದಲ್ಲಿ ದಸರಾ ಜಂಬೂಸವಾರಿ ಅದ್ದೂರಿಯಾಗಿ ವೈಭವದಿಂದ ನೇರವೇರಿತು. ಶಮೀ ವೃಕ್ಷಕ್ಕೆ ಆಂಬು (ಬಾಣ) ಹೊಡೆಯುವ ಮೂಲಕ ತಹಶೀಲ್ದಾರ್ ರವಿ.ವೈ ಅವರು ಉತ್ಸವಕ್ಕೆ ಚಾಲನೆ ನೀಡಿದ್ರು. ಗುರುವಾರ ಸಂಜೆ 5 ಗಂಟೆಯಿಂದ ಸಂತಾನ ವೇಣು ಗೋಪಾಲಸ್ವಾಮಿ ದೇವಾಲಯದಿಂದ ಪ್ರಾರಂಭವಾದ ಮೆರವಣಿಗೆಯಲ್ಲಿ ತಹಶೀಲ್ದಾರ್ ರವಿ.ವೈ ಅವರನ್ನ ಮದುವೆ ಗಂಡಿನಂತೆ ಸಿಂಗರಿಸಿ ರಾಜಬೀದಿಗಳ ಮೂಲಕ ಕರೆತರಲಾಯ್ತು.
ಇನ್ನು ಮೆರವಣಿಗೆಯಲ್ಲಿ ಸಂತಾನ ವೇಣುಗೋಪಾಲಸ್ವಾಮಿ ಸೇರಿದಂತೆ ಅನೇಕ ಗ್ರಾಮದೇವತೆಗಳು ಭಾಗವಹಿಸಿದ್ವು. ದಂಡಾಧಿಕಾರಿಗಳ ನೇತೃತ್ವದಲ್ಲಿ ಮೆರವಣಿಗೆಯು ಶನಿ ಮಹಾತ್ಮ ದೇವಸ್ತಾನದಿಂದ ಹಿಡಿದು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿರುವ ಶಮಿ ವೃಕ್ಷದವರೆಗೂ ನಡೀತು. ಬಳಿಕ ವೇದಬ್ರಹ್ಮ ಅನಂತರಾಮ್ ಭಟ್ ಅವರ ನೇತೃತ್ವದಲ್ಲಿ ತಹಸೀಲ್ದಾರ್ ರವಿ.ವೈ ಅವ್ರು ಶಮೀ ವೃಕ್ಷಕ್ಕೆ ವಿಶೇಷ ಪೂಜೆ ನೇರವೇರಿಸಿ, ಸಂಪ್ರದಾಯದಂತೆ ಬಾಣ ಹಾರಿಸಿದ್ರು. ಇನ್ನು ಈ ವೇಳೆ ನೂರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ರು




