
ಬೀಟ್ರೂಟ್ ಕಬಾಬ್. ಚಹಾ ಸಮಯಕ್ಕೆ, ಪಾರ್ಟಿಗೆ ಅಥವಾ ಸಂಜೆ ತಿಂಡಿಗೆ ಸೂಪರ್ ಐಟಂ. ಬೀಟ್ರೂಟ್ನ ಸ್ವಾದ ಹಾಗೂ ಆಕರ್ಷಕ ಬಣ್ಣ ಈ ಕಬಾಬ್ಗೆ ಇನ್ನಷ್ಟು ಸೊಗಸು ತರುತ್ತದೆ.
ಬೇಕಾಗುವ ಪದಾರ್ಥಗಳು:
- ಬೀಟ್ರೂಟ್ – 2
- ಆಲೂಗಡ್ಡೆ – 2 (ಬೇಯಿಸಿ, ಪೇಸ್ಟ್ ಮಾಡಿದ್ದು)
- ರವೆ – 3 ಚಮಚ
- ಮೈದಾ ಹಿಟ್ಟು – 1 ಬಟ್ಟಲು
- ಅಕ್ಕಿ ಹಿಟ್ಟು – 4 ಚಮಚ
- ಕಡಲೆ ಹಿಟ್ಟು – 4 ಚಮಚ
- ಕಾರ್ನ್ ಫ್ಲೋರ್ – 4 ಚಮಚ
- ಈರುಳ್ಳಿ – 1 ದೊಡ್ಡ ಗಾತ್ರದ್ದು (ಸಣ್ಣಗೆ ಹೆಚ್ಚಿದ್ದು)
- ಶೆಜ್ವಾನ್ ಸಾಸ್ – 2 ಚಮಚ
- ಕೊತ್ತಂಬರಿ ಸೊಪ್ಪು – ಸ್ವಲ್ಪ
- ಜೀರಿಗೆ – 1 ಚಮಚ
- ಉಪ್ಪು – ರುಚಿಗೆ ತಕ್ಕಷ್ಟು
- ಬೆಣ್ಣೆ – 1 ಚಮಚ
- ಎಣ್ಣೆ – ಕರಿಯಲು
ಮಾಡುವ ವಿಧಾನ:
ಸ್ಟೆಪ್ 1:
ಮೊದಲು ಆಲೂಗಡ್ಡೆಯನ್ನು ಬೇಯಿಸಿ ಸಿಪ್ಪೆ ತೆಗೆದು ಪೇಸ್ಟ್ ಮಾಡಿ. ಇದಕ್ಕೆ ತುರಿದ ಬೀಟ್ರೂಟ್ ಹಾಕಿ, ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. 15-20 ನಿಮಿಷ ಬಿಟ್ಟು ಬಿಡಿ.
ಸ್ಟೆಪ್ 2:
ಈಗ ಅದಕ್ಕೆ ರವೆ, ಮೈದಾ, ಅಕ್ಕಿ ಹಿಟ್ಟು, ಕಡಲೆ ಹಿಟ್ಟು, ಕಾರ್ನ್ ಫ್ಲೋರ್ ಸೇರಿಸಿ ಮಿಶ್ರಣ ಮಾಡಿ.
ಸ್ಟೆಪ್ 3:
ನಂತರ ಸಣ್ಣಗೆ ಹೆಚ್ಚಿದ ಈರುಳ್ಳಿ, ಬೆಣ್ಣೆ, ಕೊತ್ತಂಬರಿ ಸೊಪ್ಪು, ಜೀರಿಗೆ ಹಾಗೂ ಶೆಜ್ವಾನ್ ಸಾಸ್ ಸೇರಿಸಿ ಚೆನ್ನಾಗಿ ಕಲೆಸಿ.
ಸ್ಟೆಪ್ 4:
ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿ, ಕಬಾಬ್ ಆಕಾರ ಕೊಡಿ.
ಸ್ಟೆಪ್ 5:
ಕಾದ ಎಣ್ಣೆಯಲ್ಲಿ ಹಾಕಿ ಕಂದು ಬಣ್ಣ ಬರುವವರೆಗೆ ಕರಿಯಿರಿ.
ಹಾಟ್ ಹಾಟ್ ಬೀಟ್ರೂಟ್ ಕಬಾಬ್ ರೆಡಿಯಾಗಿದೆ! ಚಟ್ನಿ ಅಥವಾ ಟೊಮಾಟೊ ಸಾಸ್ ಜೊತೆ ಸವಿಯಿರಿ.




