ಶಿರಾ ಅಭಿವೃದ್ಧಿಯೇ ನನ್ನ ಗುರಿ ಶಾಸಕ ಜಯಚಂದ್ರ

ಶಿರಾ ನಗರದ ತುಮಕೂರು ಜಿಲ್ಲಾ ಕೇಂದ್ರದಿಂದ ಸುಮಾರು 50 ಕಿಲೋ ಮೀಟರ್ ದೂರದಲ್ಲಿರೋ ತಾಲೂಕು ಕೇಂದ್ರವಾಗಿದೆ. ಶಿರಾ ನಗರ ಅಲ್ಪ ಸ್ವಲ್ಪ ಅಭಿವೃದ್ಧಿ ಆಗ್ತಾ ಇದೆ, ಆದ್ರೆ ಶಿರಾದ ಬಹುತೇಕ ಹಳ್ಳಿಗಳ ಸ್ಥಿತಿ ದುಸ್ಥರವಾಗಿದ್ದು, ಈ ಬಗ್ಗೆ ನಿಮ್ಮ ಪ್ರಜಾಶಕ್ತಿ ಟಿವಿ ಹಲವು ಬಾರಿ ಸುದ್ದಿಗಳನ್ನು ಬಿತ್ತರ ಮಾಡುವ ಮೂಲಕ ಅಧಿಕಾರಿಗಳ ಗಮನ ಸೆಳೆಯುವ ಪ್ರಯತ್ನವನ್ನು ಮಾಡಿತ್ತು. ಈ ಬೆನ್ನಲ್ಲೇ ಶಿರಾ ಶಾಸಕರಾದ ಟಿ.ಬಿ ಜಯಚಂದ್ರ ಅವರು ಕ್ಷೇತ್ರ ಸಂಚಾರ ಮಾಡಿ, ಗ್ರಾಮಸ್ಥರಿಂದ ಅಹವಾಲುಗಳನ್ನು ಸ್ವೀಕರಿಸ್ತಾ ಇದ್ದಾರೆ.
ನಿನ್ನೆ ವಿಜಯದಶಮಿ ಹಬ್ಬ ಇದ್ರು ನಗರದಲ್ಲಿ ಜಂಬೂಸವಾರಿ ವೀಕ್ಷಣೆ ಬಳಿಕ ನಾನಾ ಕಾರ್ಯಕ್ರಮಗಳನ್ನು ಮುಗಿಸಿ, ತಮ್ಮ ಕ್ಷೇತ್ರಕ್ಕೆ ತೆರಳಿ, ಹಳ್ಳಿಗಳಲ್ಲಿ ಸಂಚಾರ ನಡೆಸಿದ್ರು. ಶಿರಾ ತಾಲೂಕಿನ ನಾದೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಉದ್ದರಾಮನಹಳ್ಳಿ ಕ್ರಾಸ್ನಿಂದ ಸೀಗಲಹಳ್ಳಿ ರಸ್ತೆಯನ್ನು ಶಾಸಕ ಜಯಚಂದ್ರ ಅವರು ವೀಕ್ಷಣೆ ಮಾಡಿದ್ರು. ಈ ವೇಳೆ ಶಾಸಕ ಜಯಚಂದ್ರ ಅವರ ಬಳಿ ನಮ್ಮ ಗ್ರಾಮಕ್ಕೆ ರಸ್ತೆ ವ್ಯವಸ್ಥೆ ಹಾಗೂ ಚರಂಡಿ ವ್ಯವಸ್ಥೆ ಸರಿಯಾಗಿಲ್ಲ ಎಂದು ಸಮಸ್ಯೆಗಳನ್ನು ಹೇಳಿಕೊಂಡರು. ಅಲ್ದೇ ಶಾಸಕರ ಬಳಿ ಸುಮಾರು ಎರಡು ಕಿಲೋ ಮೀಟರ್ ದೂರದ ರಸ್ತೆ ನಿರ್ಮಿಸಲು ಶಾಸಕರ ಬಳಿ ಮನವಿ ಮಾಡಿದರು. ಈ ವೇಳೆ ಗ್ರಾಮಸ್ಥರ ಅಹವಾಲು ಸ್ವೀಕರಿಸಿದ ಶಾಸಕ ಜಯಚಂದ್ರ ಅವರು ಸಮಸ್ಯೆಗಳನ್ನು ಪರಿಹರಿಸುವ ಭರವಸೆಯನ್ನು ನೀಡಿದ್ರು.
ಇನ್ನು ಇದೇ ವೇಳೆ ಸಿದ್ದನಹಳ್ಳಿ ಗ್ರಾಮದ ಶ್ರೀ ತಿಮ್ಮಪ್ಪ ಸ್ವಾಮಿ ದೇವಾಲಯಕ್ಕೆ ಶಾಸಕ ಜಯಚಂದ್ರ ಅವರು ಭೇಟಿ ನೀಡಿ ದೇವರ ದರ್ಶನ ಪಡೆದು, ಪ್ರಾರ್ಥನೆ ಸಲ್ಲಿಸಿದ್ರು. ಈ ವೇಳೆ ಜಯಚಂದ್ರ ಅವರಿಗೆ ಗ್ರಾಮಸ್ಥರು ಸನ್ಮಾನ ಮಾಡಿದ್ದು, ಮುಖಂಡರಾದ ಶಿವಣ್ಣ, ಶ್ರೀನಿವಾಸ್, ಮಧುಸೂದನ್ ಸೇರಿ ಹಲವು ಉಪಸ್ಥಿತರಿದ್ದರು.




