
Khantara chapter 1
ರಿಷಭ್ ಶೆಟ್ಟಿ ನಿರ್ದೇಶಿಸಿ ಅಭಿನಯಿಸಿರುವ ‘ಕಾಂತಾರ ಚಾಪ್ಟರ್ 1’ ಸಿನಿಮಾ ಭರ್ಜರಿ ದಾಖಲೆ ಬರೆದಿದ್ದು, BOOKMYSHOWನಲ್ಲಿ 24 ಗಂಟೆಗಳಲ್ಲಿ 1.28 million(12.8 ಲಕ್ಷ) ಟಿಕೆಟ್ ಮಾರಾಟವಾಗಿದೆ. ಇದು 2025ರ ಅತ್ಯಧಿಕ ಟಿಕೆಟ್ ಮಾರಾಟದ ದಾಖಲೆಯೊಂದಿಗೆ ಹೊಸ ಮೈಲಿಗಲ್ಲು ಸ್ಥಾಪಿಸಿದೆ.
ಚಿತ್ರದ ನಿರ್ಮಾಪಕರಾದ Hombale Films ಈ ಮಾಹಿತಿಯನ್ನು Share ಮಾಡಿದ್ದು, ಶುಕ್ರವಾರ ಹಾಗೂ ಶನಿವಾರದ ಟಿಕೆಟ್ಗಳು ಮುಂಗಡವಾಗಿ ಭರ್ಜರಿಯಾಗಿ ಮಾರಾಟವಾಗಿರುವುದರಿಂದ, ಇದೀಗ ‘ಕಾಂತಾರ’ 100 crore ಕ್ಲಬ್ ಸೇರುವ ಸಾಧ್ಯತೆಯು ಬಹಳ ಜಾಸ್ತಿಯಿದೆ ಎಂದು ಹೇಳಿದ್ದಾರೆ.
ಇನ್ನು ಈ ಸಿನಿಮಾ ಭಾರತದೆಲ್ಲೆಡೆ 6,500 Theater ಗಳಲ್ಲಿ 12,511ಕ್ಕೂ ಹೆಚ್ಚು ಶೋಗಳನ್ನು ಪ್ರದರ್ಶನೆಗೆ ತಂದಿದ್ದು, ಅಕ್ಟೋಬರ್ 1ರ ರಿಲೀಸ್ಗೆ ಒಂದು ದಿನ ಮೊದಲು ನಡೆದ Premiere Showಗಳೆಲ್ಲವೂ Housefull ಆಗಿದ್ದವು. ಈ ಶೋಗಳಿಂದಲೇ ಸಿನಿಮಾಗೆ ಭರ್ಜರಿ ಹೈಪ್ ಬಂದಿದೆ.
BOOKMYSHOWನಲ್ಲಿ ಈಗಾಗಲೇ 47,000ಕ್ಕೂ ಹೆಚ್ಚು ಕಾಮೆಂಟ್ಗಳು ಬಂದಿದ್ದು, 72,000ಕ್ಕೂ ಹೆಚ್ಚು ಮಂದಿ 10ಕ್ಕೆ 9.4 ರೇಟಿಂಗ್ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.




