
IND vs WI Test Match : ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಭಾರತ ಭಾರೀ ಮುನ್ನಡೆ ಸಾಧಿಸಿದೆ. ವೆಸ್ಟ್ ಇಂಡೀಸ್ ಅನ್ನು ಕೆವಲ 162 ರನ್ಗಳಿಗೆ ಆಲೌಟ್ ಮಾಡಿದ ಭಾರತ, ಎರಡನೇ ದಿನದ ಆಟದ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 448 ರನ್ ಗಳಿಸಿ, 286 ರನ್ಗಳ ಮುನ್ನಡೆ ಪಡೆದುಕೊಂಡಿದೆ.
ಭಾರತದ ಬ್ಯಾಟಿಂಗ್ ಪಟುಗಳು ಒಂದೇ ದಿನದಲ್ಲಿ ಮೂವರು ಶತಕಗಳನ್ನು ಸಿಡಿಸಿದ ಕ್ಷಣವೂ ಇದಾಗಿದ್ದು, ತಂಡದ ಸ್ಥಿತಿ ಭದ್ರವಾಗಿದೆ. ಕೆಎಲ್ ರಾಹುಲ್ ತಮ್ಮ ಟೆಸ್ಟ್ ವೃತ್ತಿಜೀವನದ 11ನೇ ಶತಕವನ್ನು ದಾಖಲಿಸಿದ್ದು, ಅವರು 197 ಎಸೆತಗಳಲ್ಲಿ 12 ಬೌಂಡರಿಗಳ ಸಹಿತ 100 ರನ್ ಗಳಿಸಿ ಶತಕದ ನಂತರ ವಿಕೆಟ್ ಕಳೆದುಕೊಂಡರು.
ಇನ್ನು ಟೀಂ ಇಂಡಿಯಾದ ಮೊದಲ ಇನ್ನಿಂಗ್ಸ್ ನಲ್ಲಿ ತಂಡದಿಂದ 3 ಶತಕ ಹಾಗೂ 1ಅರ್ಧಶತಕ ಸಿಡಿದಿದೆ. ನಾಯಕ ಶುಭ್ಮನ್ ಗಿಲ್ ಕೂಡ ವಿಂಡೀಸ್ ವಿರುದ್ಧ ಅರ್ಧಶತಕದ ಕಾಣಿಕೆ ನೀಡಿದ್ದಾರೆ. ಉಳಿದಂತೆ ಯಶಸ್ವಿ ಜೈಸ್ವಾಲ್ 36 ರನ್, ಸಾಯಿ ಸುದರ್ಶನ್ 7 ರನ್ ಹಾಗೂ ವಾಷಿಂಗ್ಟನ್ ಸುಂದರ್ ಅಜೇಯ 9 ರನ್ ಬಾರಿಸಿ ಮೂರನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.




