ಸಿಟಿ ಕ್ರೆಡಿಟ್ ಸೌಹಾರ್ದ ಸಹಕಾರಿ ಬ್ಯಾಂಕ್ನಲ್ಲಿ ದಸರಾ ಸಂಭ್ರಮ _ ಬ್ಯಾಂಕ್ನ ಕಚೇರಿಯಲ್ಲಿ ವಿಶೇಷ ಪೂಜೆ ನೆರವೇರಿಸಿದ ಸಿಬ್ಬಂದಿ

ನಾಡಿನಾದ್ಯಂತ ದಸರಾ ಸಂಭ್ರಮ ಸಡಗರ ಜೋರಾಗಿದ್ದು, ಎಲ್ಲೆಲ್ಲೂ ಆಯುಧ ಪೂಜೆ ನೇರವೇರಿಸಲಾಗ್ತಿದೆ. ದೊಡ್ಡ ದೊಡ್ಡ ಕಂಪನಿಗಳಲ್ಲಿ ದಸರಾ ಅಂಗವಾಗಿ ತಮ್ಮ ಕಂಪನಿಗಳಲ್ಲಿ ವಿಶೇಷ ಪೂಜೆ ಕೈಗೊಳ್ಳುವ ಮೂಲಕ ವಿಶೇಷ ಪ್ರಾರ್ಥನೆ ಸಲ್ಲಿಸ್ತಿದ್ದಾರೆ. ಇತ್ತ ತುಮಕೂರು ನಗರದಲ್ಲಿರೋ ಸಿಟಿ ಕ್ರೆಡಿಟ್ ಸೌಹಾರ್ದ ಸಹಕಾರಿ ಬ್ಯಾಂಕ್ನಲ್ಲೂ ದಸರಾ ಹಬ್ಬವನ್ನು ವಿಶೇಷವಾಗಿ ಆಚರಿಸಲಾಯ್ತು.
ತುಮಕೂರು ನಗರದ ವಿದ್ಯಾನಗರದಲ್ಲಿರುವ ಸಿಟಿ ಕ್ರೆಡಿಟ್ ಸೌಹಾರ್ದ ಸಹಕಾರಿ ಬ್ಯಾಂಕ್ನಲ್ಲಿ ದಸರಾ ಹಬ್ಬದ ಸಂಭ್ರಮ ಕಳೆಗಟ್ಟಿತ್ತು. ಆಯುಧ ಪೂಜೆ ಅಂಗವಾಗಿ ಸಿಟಿ ಕ್ರೆಡಿಟ್ ಸೌಹಾರ್ದ ಸಹಕಾರಿ ಬ್ಯಾಂಕ್ನ ಕೇಂದ್ರ ಕಚೇರಿಯನ್ನು ತಳಿರು ತೋರಣದಿಂದ ಸಿಂಗಾರ ಮಾಡಲಾಗಿತ್ತು. ಬಳಿಕ ಬ್ಯಾಂಕ್ನ ಆಡಳಿತ ಕಚೇರಿಯಲ್ಲಿ ಸರಸ್ವತಿ ಹಾಗೂ ಶ್ರೀದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗಿದ್ದು, ಬ್ಯಾಂಕ್ ಮತ್ತಷ್ಟು ಲಾಭದಾಯವಾಗಿ ಬೆಳೆಯಲಿ ಎಂದು ಪ್ರಾರ್ಥಿಸಿದ್ರು.
ಇನ್ನು, ಈ ವೇಳೆ ಸಿಟಿ ಕ್ರೆಡಿಟ್ ಸೌಹಾರ್ದ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಶಶೀಧರ್ ಮಾತನಾಡಿ, ಸಿಟಿ ಕ್ರೆಡಿಟ್ ಸೌಹಾರ್ದ ಸಹಕಾರಿ ಬ್ಯಾಂಕ್ ಸುಮಾರು 2 ಸಾವಿರ ಮಂದಿ ಸದಸ್ಯರನ್ನು ಒಳಗೊಂಡಿದ್ದು, ಲಾಭದಾಯವಾಗಿ ಬೆಳೆದುಕೊಂಡು ಬರ್ತಾ ಇದೆ. ಹೀಗೆ ಲಾಭದಾಯಕವಾಗಿ ಬೆಳೆಯಲಿ ಎಂದು ಪ್ರಾರ್ಥಿಸಿದ್ರು.
ಇನ್ನು ಈ ವೇಳೆ ಮಾತನಾಡಿದ ಆಡಿಟರ್ ವಿಶ್ವನಾಥ್, ಶಶೀಧರ್ ಹಾಗೂ ಅವರ ಟೀಂ ತುಂಬಾ ಶ್ರಮ ವಹಿಸಿ, ಸಂಸ್ಥೆಯನ್ನು ಬೆಳೆಸಿಕೊಂಡು ಹೋಗ್ತಾ ಇದ್ದಾರೆ…ಹೀಗೆ ಅವರ ಸಹಕಾರಿ ಸಂಘ ಬೆಳೆಯಲಿ ಎಂದು ಆಶಿಸಿದ್ರು.
ಇನ್ನು ತುಮಕೂರು ಸಿಟಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದಲ್ಲಿ ಹಬ್ಬದ ಕಳೆ ಮೂಡಿದ್ದು, ಬ್ಯಾಂಕ್ನ ಸಿಬ್ಬಂದಿ ಪಿಂಕ್ ಕಲರ್ ಸೀರೆಯನ್ನು ಹುಟ್ಟಿ ಮಿರಿ ಮಿರಿ ಮಿಂಚಿ, ಹಬ್ಬದಲ್ಲಿ ಭಾಗಿಯಾಗಿ ಸಂಭ್ರಮಿಸಿದ್ರು. ಇನ್ನು ಕಾರ್ಯಕ್ರಮದಲ್ಲಿ ಸಿಟಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಎಲ್ಲಾ ಸಿಬ್ಬಂದಿ ಹಾಗೂ ಶಶಿಧರ್ ಅವರ ಕುಟುಂಬ ಭಾಗಿಯಾಗಿತ್ತು.




