
ತುಮಕೂರಿನಲ್ಲಿ ದಸರಾ ಸಂಭ್ರಮದ ಕಳಗಟ್ಟಿದ್ದು, ಕಳೆದ ಸೆಪ್ಟೆಂಬರ್ 22 ರಂದು ಪ್ರಾರಂಭವಾಗಿದ್ದ ದಸರಾ ಮಹೋತ್ಸಕ್ಕೆ ಭರಪೂರ ಮೆಚ್ಚುಗೆ ವ್ಯಕ್ತವಾಗಿತ್ತು. ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಶ್ರೀಗಳು ಹಾಗೂ ವಿವಿಧ ಮಠದ ಮಠಾಧೀಶರು ವಿಶೇಷ ಪೂಜೆ ನಡೆಸಿ ದಸರಾ ಉತ್ಸವಕ್ಕೆ ಚಾಲನೆ ನೀಡಿದ್ರು. ದಸರಾ ಉತ್ಸವದ ನೇತೃತ್ವವನ್ನು ಗೃಹ ಸಚಿವ ಪರಮೇಶ್ವರ್ ಹೊತ್ತುಕೊಂಡಿದ್ರು. ಇತ್ತ ದಸರಾ ಸಮಿತಿಯೂ ಕೂಡ ಅಷ್ಟೇ ಉತ್ಸುಕತೆಯಿಂದ ದಸರಾ ಆಚರಿಸುವಲ್ಲಿ ಪಾಲ್ಗೊಂಡಿತ್ತು. ಮಹಾನಗರ ಪಾಲಿಕೆ, ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ರು. ಇಂದು ತುಮಕೂರು ದಸರಾಗೆ ಮತ್ತೊಂದು ಕಳೆತಂದದ್ದು ಜಂಬೂ ಸವಾರಿ.

ದಸರಾ ಸಂಭ್ರಮಕ್ಕೆ ಮೆರುಗು ನೀಡಲು ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ವೇದಿಕೆಗಳು ಸಿದ್ಧಗೊಂಡಿದ್ದವು. ದಸರಾ ಮಂಟಪದಲ್ಲಿ ಚಾಮುಂಡೇಶ್ವರಿ ದೇವಿಯನ್ನು ಪ್ರತಿಷ್ಟಾಪಿಸಿ, ಪ್ರತಿದಿನ ಒಂದೊಂದು ಇಲಾಖೆಯ ಅಧಿಕಾರಿಗಳು ಪೂಜೆ, ಹವನ, ಹೋಮ ಸಲ್ಲಿಸುವ ಮೂಲ ತಾಯಿ ಚಾಮುಂಡೇಶ್ವರಿಗ ಪುಷ್ಪ ನಮನ ಸಲ್ಲಿಸಿದರು. ಮೊದಲ ದಿನ ಗೃಹ ಸಚಿವ ಪರಮೇಶ್ವರ ದಂಪತಿಗಳು ಪೂಜೆಯನ್ನು ಮಾಡುವ ಮೂಲಕ ಚಾಲನೆ ನೀಡಿದ್ರು. ಆದಾದ ಬಳಿಕ ಒಂದೊಂದು ಇಲಾಖೆಯಿಂದ ಪೂಜಾ ಕಾರ್ಯಕ್ರಮಗಳು ನೆರವೇರಿದವು.

ಇತ್ತ ಸಂಜೆಯಾಗುತ್ತಿದ್ದಂತೆ ವೇದಿಕೆ ಕಾರ್ಯಕ್ರಮಗಳು ಪ್ರಾರಂಭವಾಗುತ್ತಿದ್ದವು. ಪ್ರತಿನಿತ್ಯವೂ ಒಂದೊಂದು ಕಲಾತಂಡದಿಂದ ನೃತ್ಯ, ರಸ ಸಂಜೆ ಕಾರ್ಯಕ್ರಮಗಳು ನಡೆದವು. ಅದೆಲ್ಲದರ ಜೊತೆಗೆ ಇಂದು ಜಂಬೂ ಸವಾರಿ ತುಮಕೂರಿಗರ ಗಮನ ಸೆಳೆಯಿತು. ಯಾಕೆಂದ್ರ ಇಂದು ಮೂರು ಆನೆಗಳಿಂದ ಜಂಬೂ ಸವಾರಿ ನಡೆಸಲಾಯಿತು. ಮೂರು ಆನೆಗಳಿಗೆ ಹಲವು ದಿನಗಳಿಂದಲೂ ತಾಲೀಮು ನೀಡಲಾಗಿತ್ತು. ಈ ಬಾರಿ ಅಂಬಾರಿ ಹೊರಲು ವಿಶೇಷವಾಗಿ ಶ್ರೀರಾಮ ಆನೆಯನ್ನು ಕರೆತರಲಾಗಿತ್ತು. ನಗರದ ಸುತ್ತಲು ಆನೆಗಳ ಮೆರವಣಿಗೆ ಮಾಡುವ ಮೂಲ ಜಂಬೂ ಸವಾರಿಗೆ ಸಿದ್ಧಗೊಳಿಸಿದ್ರು. ಇಂದು ಟೌನ್ ಹಾಲ್ ವೃತ್ತದಲ್ಲಿ ಬೃಹತ್ ವೇದಿಕೆಯೂ ಸಿದ್ಧಗೊಂಡಿತ್ತು. ವೇದಿಕೆ ಮೇಲಿಂದ ಡಾ.ಜಿ.ಪರಮೇಶ್ವರ್ ದಂಪತಿ, ಟಿ.ಬಿ.ಜಯಚಂದ್ರ ದಂಪತಿ, ಶಾಸಕ ಜ್ಯೋತಿಗಣೇಶ್, ಗ್ರಾಮಾಂತರ ಶಾಸಕ ಸುರೇಶ್ ಗೌಡ, ಡಿಸಿ ಶುಭ ಕಲ್ಯಾಣ್, ಜಿ.ಪಂ ನ ಸಿಇಓ ಜಿ.ಪ್ರಭು ಹಾಗೂ ಪಾಲಿಕೆಯ ಕಮಿಷನರ್ ಅಶ್ವಿಜಾ ಅವರು ಅಂಬಾರಿ ಹೊತ್ತ ಶ್ರೀರಾಮನಿಗೆ ಪುಷ್ಪ ನಮನ ಸಲ್ಲಿಸಿದ್ರು. ಇನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಪರಮೇಶ್ವರ್ ನೇತೃತ್ವದಲ್ಲಿ ದಸರಾವನ್ನು ಆಯೋಜನೆ ಮಾಡಲಾಗಿದ್ದು, ಪಕ್ಷಾತೀತವಾಗಿ ಶಾಸಕರಾದ ಜ್ಯೋತಿ ಗಣೇಶ್, ಸುರೇಶ್ ಗೌಡ ಸೇರಿ ಹಲವು ಮಂದಿ ನಾಯಕರು ಭಾಗಿಯಾಗಿದ್ದು, ವಿಶೇಷವಾಗಿತ್ತು. ಇತ್ತ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದ ಪರಂರನ್ನ ಶಾಸಕರಾದ ಜ್ಯೋತಿಗಣೇಶ್, ಹಾಗೂ ಸುರೇಶ್ ಗೌಡ ಅವರು ಹಾಡಿ ಹೊಗಳಿದ್ರು.

ಇನ್ನು ಇದೇ ವೇಳೆ ಟೌನ್ ಹಾಲ್ ವೃತ್ತದಲ್ಲಿ ವಿವಿಧ ಕಲಾಪ್ರಕಾರಗಳ ನೃತ್ಯವೂ ದಸರಾ ಜಂಬೂ ಸವಾರಿ ಹಾಗೂ ಮೆರವಣಿಗೆಗೆ ಮೆರಗು ತಂದವು. ಇತ್ತ ಅಂಬಾರಿ ಹೊತ್ತ ಶ್ರೀರಾಮ ಟೌನ್ ಹಾಲ್ ಗೆ ಬರುತ್ತಿದ್ದಂತೆ ಎಲ್ಲೆಡೆ ಹರ್ಷೋದ್ಘಾರ ಮನೆ ಮಾಡಿತ್ತು. ಶಿಳ್ಳೆ, ಚಪ್ಪಾಳೆಗಳನ್ನು ಹಾಕಿ ದಸರಾವನ್ನು ಸಂಭ್ರಮಿಸಿದ್ರು. ಇತ್ತ ಹೆಲಿಕಾಪ್ಟರ್ ಮೂಲಕವೂ ಪುಷ್ಟ ನಮನ ಸಲ್ಲಿಸಲಾಯಿತು. ಜೊತೆಗೆ ಹಸುಗಳನ್ನು ಸಿಂಗರಿಸಿ ಟೌನ್ ಹಾಲ್ ವೃತ್ತಕ್ಕೆ ಕರೆತರಲಾಯಿತು. ಹಸುಗಳಿಗೂ ಕೂಡ ಪುಷ್ಟ ನಮವನ್ನು ಸಲ್ಲಿಸಲಾಯಿತು. ದಸರಾ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ತುಮಕೂರು ಜನ ಅಷ್ಟೇ ಉತ್ಸುಕತೆಯಿಂದ ಮುಗಿಬಿದ್ದರು. ಅಂಬಾರಿ ಹೊತ್ತ ಆನೆಗಳನ್ನು ಕಂಡು ಕಣ್ತುಂಬಿಕೊಂಡರು. ಇತ್ತ ಎಸ್.ಪಿ.ಅಶೋಕ್ ಹಾಗೂ ತಂಡದಿಂದ ಗೌರವ ಸಮರ್ಪಣೆ ಮಾಡಿದ್ರು. ಇನ್ನು ಸಾರೋಟಿನಲ್ಲಿ ತುಮಕೂರಿನ ವಿವಿಧ ಗ್ರಾಮದೇವತೆಗಳನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. ನೆರದಿದ್ದವರು ಗ್ರಾಮದೇವತೆಗಳನ್ನು ಭಕ್ತಿಯಿಂದ ನಮಸ್ಕರಿಸಿದ್ರು

ಇದೇ ವೇಳೆ ಸಾರ್ವಜನಿಕರು ಮಾತನಾಡಿ, ನಾವುಗಳು ಇಷ್ಟು ದಿನ ದಸರಾ ನೋಡಲು ಮೈಸೂರಿಗೆ ತೆರಳುತ್ತಿದ್ದೇವು. ಆದ್ರೆ ಈ ಬಾರಿಯಿಂದ ಮೈಸೂರಿನಷ್ಟೇ ಸಂಭ್ರಮ ತುಮಕೂರಿನಲ್ಲಿ ಮನೆ ಮಾಡಿದೆ. ಅತ್ಯಂತ ಅದ್ದೂರಿಯಾಗಿ ನಮ್ಮ ತುಮಕೂರಿನ ದಸರಾ ನಡೆದಿದೆ ಎಂದು ಸಂತಸ ಪಟ್ರು.
ನಂತರ ಅಂಬಾರಿ ಹೊತ್ತ ಆನೆಗಳ ಮೆರವಣಿಗೆಯು ಬಿಜಿಎಸ್ ವೃತ್ತದಿಂದ ಆರಂಭವಾಗಿ ಅಶೋಕ ರಸ್ತೆ, ಜಿಲ್ಲಾಧಿಕಾರಿ ಕಚೇರಿ ವೃತ್ತ, ಅಮಾನಿಕೆರೆ ರಸ್ತೆ, ಕೆಇಬಿ ರಸ್ತೆ, ಕೋತಿತೋಪು, ಎಸ್.ಎಸ್.ವೃತ್ತದ ಮೂಲಕ ಕಾಲೇಜು ಮೈದಾನಕ್ಕೆ ಬಂದು ತಲುಪಿತು. ರಸ್ತೆಯ ಉದ್ದಕ್ಕೂ ಅಂಬಾರಿ ಉತ್ಸವ ಕಂಡ್ರು ಸಂಭ್ರಮಿಸಿದರು. ಅಂಬಾರಿ ಹೊತ್ತ ಶ್ರೀರಾಮ ಆನೆ ಕೂಡ ಅಷ್ಟೇ ಗಾಂಭೀರ್ಯದಿಂದ ನಡೆದು, ನೋಡುಗರನ್ನು ರಂಜಿಸಿದನು. ನಂತರ ಜೂನಿಯರ್ ಕಾಲೇಜು ಮೈದಾನದಲ್ಲಿ ವಿಜಯದಶಮಿ ಧಾರ್ಮಿಕ ಪೂಜೆ, ಶಮಿ ಪೂಜೆ ನೆರವೇರಿಸಲಾಯಿತು
https://prajashakthitv.com/?cat=48




