
ಇಂದು ದೇಶಾದಾದ್ಯಂತ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ರ್ತಿಯವರ ಜಯಂತಿಯನ್ನ ಅದ್ದೂರಿಯಾಗಿ ಆಚರಿಸಲಾಗ್ತಿದೆ. ಇತ್ತ ನಾಡಿನೆಲ್ಲೆಡೆ ವಿಜಯದಶಮಿಯನ್ನ ಸಹ ಆಚರಿಸಲಾಗ್ತಾ ಇದ್ದು, ಸರ್ಕಾರ ಮಾಂಸ ಮತ್ತು ಮದ್ಯ ಮಾರಾಟದ ಮೇಲೆ ನಿಷೇಧ ಹೇರಿದ್ರೂ, ಅದನ್ನ ಲೆಕ್ಕಿಸದೇ, ಹಾಡಹಗಲೇ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಹಾಗೂ ಮಾಂಸ ಮಾರಾಟ ಮಾಡುತ್ತಿರುವ ದೃಶ್ಯಗಳು ಕಂಡುಬಂದಿದೆ.
ಹೀಗೆ ರಸ್ತೆ ಮದ್ಯದಲ್ಲೇ ದ್ವಿಚಕ್ರ ವಾಹನ ನಿಲ್ಲಿಸಿಕೊಂಡು ರಾಜಾರೋಷವಾಗಿ ಮದ್ಯ ಮಾರಾಟ ಮಾಡುತ್ತಿರುವ ದೃಶ್ಯ ಕಂಡು ಬಂದಿರೋದು ಬೇರೆಲ್ಲೂ ಅಲ್ಲ ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣದ ಸಂತೆ ಮೈದಾನದ ರಸ್ತೆಯಲ್ಲಿ. ಇಂದು ದೇಶದ ಸ್ವಾತಂತ್ರ್ಯಕ್ಕೆ ಹಗಲಿರುಡು ಶ್ರಮಿಸಿ ಹುತಾತ್ಮರಾದ ಮಹನೀಯರಾದ ಲಾಲ್ ಬಹದ್ದೂರ್ ಶಾಸ್ತ್ರಿ ಸೇರಿದಂತೆ ಮಹಾತ್ಮ ಗಾಂಧಿ ಜಯಂತಿಯ ಜನ್ಮ ದಿನವಾಗಿದ್ದು, ಯಾವುದೇ ಮಾಂಸಹಾರ ಸೇರಿದಂತೆ ಮದ್ಯ ಮಾರಾಟ ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದ್ರೂ ಸಹ, ಗುಬ್ಬಿ ಪಟ್ಟಣದಲ್ಲಿ ಕೋಳಿ ಅಂಗಡಿಗಳು ಮುಂದಿನ ಬಾಗಿಲು ಮುಚ್ಚಿ, ಹಿಂದಿನ ಬಾಗಿಲು ಓಪನ್ ಇದ್ದು, ಕೇಳಿದ್ರೆ ಮಾರಾಟ ಮಾಡ್ತಾ ಇಲ್ಲಾ. ಸುಮ್ಮನೆ ಕೂತಿದ್ದೇವೆ ಎನ್ನುತ್ತಾರೆ.
ಇನ್ನಾದ್ರೂ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಇಂತಹ ಕೃತ್ಯ ಎಸಗುತ್ತಿರುವವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ತಾರಾ ಕಾದು ನೋಡ್ಬೇಕಿದೆ.




