
Cricketer Ajinkya Rahane visits Bappanadu Durgaparameshwari Temple : ಭಾರತ ತಂಡದ ಖ್ಯಾತ ಕ್ರಿಕೆಟಿಗ ಅಜಿಂಕ್ಯ ರಹಾನೆ (Ajinkya Rahane) ಅವರು ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಯಲ್ಲಿರುವ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಾಲಯಕ್ಕೆ (Bappanadu Durga parameshwari Temple) ಭೇಟಿ ನೀಡಿ ದೇವಿ ದರ್ಶನ ಪಡೆದರು.
ಈ ವೇಳೆ ದೇವಾಲಯದಲ್ಲಿ ಅರ್ಚಕ ಗೋಪಾಲಕೃಷ್ಣ ಭಟ್ ಅವರು ಪ್ರಾರ್ಥನೆ ಸಲ್ಲಿಸಿ ರಹಾನೆಗೆ ದೇವಿ ಪ್ರಸಾದ ನೀಡಿದರು. ಈ ಸಂದರ್ಭದಲ್ಲಿ ಹಲವು ಗಣ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು.
ಅಜಿಂಕ್ಯ ರಹಾನೆ ಮಂಗಳೂರಿನ ಕರಾವಳಿ ಮೈದಾನದಲ್ಲಿ ನಡೆದ 10ನೇ ವರ್ಷದ ‘ಪಿಲಿನಲಿಕೆ’ (‘Pilinalike’) ಸಂಭ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ನಂತರ, Mumbai Cricket Association ನ ಕಾರ್ಯದರ್ಶಿ ಡಾ. ಪಿ.ವಿ. ಶೆಟ್ಟಿಯವರ ಜೊತೆಯಲ್ಲಿ ಬಪ್ಪನಾಡು ಕ್ಷೇತ್ರಕ್ಕೆ ಆಗಮಿಸಿದರು.
ಈ ವೇಳೆ ಕ್ಷೇತ್ರದ ಅನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತ ಅರಸರು, ಕಾರ್ಯನಿರ್ವಾಹಣಾಧಿಕಾರಿ ಶ್ವೇತಾ ಪಳ್ಳಿ, ನಾಗಸ್ವರ ವಾದಕ ನಾಗೇಶ್ ಬಪ್ಪನಾಡು, ಅಕೌಂಟೆಂಟ್ ಶಿವಶಂಕರ್, ಮುಲ್ಕಿ ವಿಜಯ ರೈತ ಸಹಕಾರ ಸೊಸೈಟಿಯ ನಿರ್ದೇಶಕ ದೇವಿಪ್ರಸಾದ್ ಕೆಂಪುಗುಡ್ಡೆ, ಕಾರ್ತಿಕ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.




