
ಕ್ಯಾರೆಟ್ ಖೀರ್ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು:
- ತುಪ್ಪ – 1 ಚಮಚ
- ಗೋಡಂಬಿ, ದ್ರಾಕ್ಷಿ – ಸ್ವಲ್ಪ
- ತುರಿದ ಕ್ಯಾರೆಟ್ – 1 ಬಟ್ಟಲು
- ಹಾಲು – 4 ಬಟ್ಟಲು
- ಕೇಸರಿ – ಸ್ವಲ್ಪ
- ಸಕ್ಕರೆ – 2 ಬಟ್ಟಲು
- ಏಲಕ್ಕಿ ಪುಡಿ – ಸ್ವಲ್ಪ
- ಪಿಸ್ತಾ – ಸ್ವಲ್ಪ
- ಹಾಲಿನ ಪುಡಿ – ಅರ್ಧ ಬಟ್ಟಲು
ಮಾಡುವ ವಿಧಾನ:
ಮೊದಲು ಬಾಣಲೆಗೆ ತುಪ್ಪ ಹಾಕಿ, ಅದರಲ್ಲಿ ಗೋಡಂಬಿ ಹಾಗೂ ದ್ರಾಕ್ಷಿಯನ್ನು ಬಂಗಾರ ಬಣ್ಣ ಬರುವವರೆಗೆ ಹುರಿದು ತೆಗೆದುಕೊಳ್ಳಿ. ನಂತರ ಅದೇ ಬಾಣಲೆಯಲ್ಲಿ ತುರಿದ ಕ್ಯಾರೆಟ್ ಹಾಕಿ, ಹಸಿ ವಾಸನೆ ಹೋಗಿ ಬಣ್ಣ ಬದಲಾಯುವವರೆಗೆ ಚೆನ್ನಾಗಿ ಹುರಿದುಕೊಳ್ಳಿ.
ಇದಕ್ಕೆ 2 ಬಟ್ಟಲು ಹಾಲು ಹಾಗೂ ಕೇಸರಿ ಸೇರಿಸಿ ಮಧ್ಯಮ ಉರಿಯಲ್ಲಿ ಕುದಿಸಬೇಕು. ಹಾಲು ದಪ್ಪವಾಗುವವರೆಗೆ ಚೆನ್ನಾಗಿ ಕುದಿಯಲು ಬಿಡಿ.
ಮತ್ತೊಂದು ಪಾತ್ರೆಯಲ್ಲಿ ಉಳಿದ 2 ಬಟ್ಟಲು ಹಾಲಿಗೆ ಹಾಲಿನ ಪುಡಿ ಸೇರಿಸಿ ದಪ್ಪ ಮಿಶ್ರಣ ಮಾಡಿಕೊಳ್ಳಿ. ನಂತರ ಇದನ್ನು ಕ್ಯಾರೆಟ್ ಹಾಲಿನ ಮಿಶ್ರಣಕ್ಕೆ ಸೇರಿಸಿ ಚೆನ್ನಾಗಿ ಕಲೆಸಬೇಕು.
ಕೊನೆಯಲ್ಲಿ ಸಕ್ಕರೆ, ಏಲಕ್ಕಿ ಪುಡಿ, ಹುರಿದ ಗೋಡಂಬಿ, ದ್ರಾಕ್ಷಿ ಹಾಗೂ ಪಿಸ್ತಾ ಸೇರಿಸಿ 5 ನಿಮಿಷ ಕುದಿಸಿದರೆ ಸುವಾಸನೆಯ, ರುಚಿಕರವಾದ ಕ್ಯಾರೆಟ್ ಖೀರ್ ಸವಿಯಲು ಸಿದ್ಧ!




