
SANDALWOOD : ರಾಕಿಂಗ್ ಸ್ಟಾರ್ ಯಶ್ (Rocking Star Yash) ಅವರ ತಾಯಿ ಮತ್ತು PA PRODUCTIONS ನಿರ್ಮಾಪಕಿ ಪುಷ್ಪ ಅರುಣ್ ಕುಮಾರ್ (Pushpa Arun Kumar) ಅವರು ತಮ್ಮ ನಿರ್ಮಾಣದಲ್ಲಿ ಎರಡನೇ ಚಲನಚಿತ್ರದ ಘೋಷಣೆಯನ್ನು ವಿಜಯದಶಮಿ ಹಬ್ಬದ ಶುಭ ಸಂದರ್ಭದಲ್ಲಿ ಮಾಡಿದ್ದಾರೆ.
ಇದಕ್ಕೂ ಮುನ್ನ, ಪುಷ್ಪ ಅರುಣ್ ಕುಮಾರ್ ನಿರ್ಮಿಸಿದ್ದ Kothalavadi ಚಿತ್ರವನ್ನು ಪ್ರೇಕ್ಷಕರು ಹಾರೈಸಿದ್ದರು. ಕಥಾ ಶೈಲಿ, ತಂತ್ರಜ್ಞರ ಕುಶಲತೆ, ಹಾಗೂ ನಿರ್ದೇಶಕ ಶ್ರೀರಾಜ್ ಅವರ ನಾಟಕೀಯ ಸಂವೇದನೆಗೆ ಹಾರೈಸಿದ ಜನತೆ, ಈಗ ಮುಂದಿನ ಚಿತ್ರಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ.
ಇನ್ನು ಹೊಸ ಚಿತ್ರವನ್ನೂ ನಿರ್ದೇಶಕ ಶ್ರೀರಾಜ್ (Sree Raj) ಅವರೇ ಮುನ್ನಡೆಸಲಿದ್ದಾರೆ, ಮತ್ತು ಕೊತ್ತಲವಾಡಿ ತಂಡದ ಬಹುತೇಕ ತಂತ್ರಜ್ಞರು ಮತ್ತೊಮ್ಮೆ ಒಂದಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದು ಈ ಸಿನಿಮಾಕ್ಕೆ ಮತ್ತಷ್ಟು ಆಸಕ್ತಿ ಹುಟ್ಟಿಸುತ್ತಿದೆ.
ನಿರ್ಮಾಪಕಿ ಪುಷ್ಪ ಅರುಣ್ ಕುಮಾರ್ ಅವರು “ಸದ್ಯದಲ್ಲೇ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಹಿರಂಗ ಪಡಿಸುತ್ತೇವೆ” ಎಂದಿದ್ದಾರೆ.




