
2025 World Weightlifting Championships : ಮಹಿಳೆಯರ 48 ಕೆಜಿ ವಿಭಾಗದ World Weightlifting Championship ನಲ್ಲಿ ಭಾರತದ ಮೀರಾಬಾಯಿ ಚಾನು ( Mirabai Chanu ) ಬೆಳ್ಳಿ ಪದಕ ಗೆಲ್ಲುವ ಮೂಲಕ ಭರ್ಜರಿ Come Back ಮಾಡಿದ್ದಾರೆ. ಮೂರು ವರ್ಷಗಳ ಬಳಿಕ ಈ ಮಹತ್ವದ ಸ್ಪರ್ಧೆಯಲ್ಲಿ ಕಣಕ್ಕಿಳಿದ ಚಾನು, 199 ಕೆಜಿ ಭಾರ ಎತ್ತುವ ಮೂಲಕ ತಮ್ಮ ಸಾಧನೆ ಮುಂದುವರಿಸಿದರು.
ಚಾನು 84 ಕೆಜಿ ಸ್ನ್ಯಾಚ್ ಹಾಗೂ 115 ಕೆಜಿ ಕ್ಲೀನ್ ಮತ್ತು ಜರ್ಕ್ ಮೂಲಕ ಒಟ್ಟು 199 ಕೆಜಿ ಭಾರ ಎತ್ತಿದ್ದು, ಉತ್ತರ ಕೊರಿಯಾದ ರಿ ಸಾಂಗ್ ಗಮ್ ಅವರು 213 ಕೆಜಿ ಭಾರ ಎತ್ತುವ ಮೂಲಕ ಚಿನ್ನದ ಪದಕವನ್ನು ತಮ್ಮದಾಗಿಸಿ ಕೊಂಡರು. ರಿಯು ಈ ಸ್ಪರ್ಧೆಯಲ್ಲಿ ಸ್ನ್ಯಾಚ್ನಲ್ಲಿ 91 ಕೆಜಿ ಹಾಗೂ ಕ್ಲೀನ್ ಮತ್ತು ಜರ್ಕ್ನಲ್ಲಿ 122 ಕೆಜಿ ಎತ್ತಿ ಎರಡು ಹೊಸ World Record ಗಳನ್ನು ಸ್ಥಾಪಿಸಿದರು. ಥೈಲ್ಯಾಂಡ್ನ ಥಾನ್ಯಾಥೋನ್ ಸುಕ್ಚರೋಯೆನ್ ಒಟ್ಟು 198 ಕೆಜಿ (88 ಕೆಜಿ ಸ್ನ್ಯಾಚ್, 110 ಕೆಜಿ ಕ್ಲೀನ್ ಮತ್ತು ಜರ್ಕ್) ಎತ್ತಿ ಕಂಚಿನ ಪದಕ ಪಡೆದರು.
ಇದೀಗ ಚಾನು ಅವರು ವಿಶ್ವ ಚಾಂಪಿಯನ್ಶಿಪ್ನಲ್ಲಿ ತಮ್ಮ ಮೂರನೇ ಪದಕವನ್ನೂ ಗೆದ್ದಿದ್ದಾರೆ. 2017ರಲ್ಲಿ ಚಿನ್ನ, 2022ರಲ್ಲಿ ಬೆಳ್ಳಿ, ಮತ್ತು 2025ರಲ್ಲಿ ಮತ್ತೊಂದು ಬೆಳ್ಳಿ ಪದಕ. ಈ ಸಾಧನೆಯೊಂದಿಗೆ ಭಾರತಕ್ಕೆ ವಿಶ್ವ ಚಾಂಪಿಯನ್ಶಿಪ್ನಲ್ಲಿ ಒಟ್ಟು ಪದಕಗಳ ಸಂಖ್ಯೆ 18ಕ್ಕೆ ಏರಿದೆ.
ಕಳೆದ ತಿಂಗಳು ಅಹಮದಾಬಾದ್ನಲ್ಲಿ ನಡೆದ 2025 Commonwealth Weightlifting Championships ನಲ್ಲಿ ಚಾನು 193 ಕೆಜಿ ಭಾರ ಎತ್ತಿ ಚಿನ್ನ ಗೆದ್ದಿದ್ದರು. ಇದರೊಂದಿಗೆ ಅವರು 2026 ರ Glasgow to the Commonwealth Games ಗೆ ನೇರ ಅರ್ಹತೆ ಗಳಿಸಿದ್ದರು.
ಮೀರಾಬಾಯಿ ಚಾನು ಅವರ ನಿರಂತರ ಸಾಧನೆ ಭಾರತಕ್ಕೆ ಹೆಮ್ಮೆ ತಂದಿದ್ದು, ಮುಂದಿನ International Tournament ಗಳಲ್ಲಿ ಉತ್ತಮ ಪ್ರದರ್ಶನ ನಿರೀಕ್ಷೆ ಮೂಡಿಸಿದೆ.




