
ಎಲ್ಲರಿಗೂ ಇಷ್ಟವಾಗುವ ರುಚಿಕರವಾದ Paneer Cutlet ..!
👉 ಬೇಕಾಗುವ ಪದಾರ್ಥಗಳು:
- ಪನ್ನೀರ್ – 400 ಗ್ರಾಂ (ಪುಡಿ ಮಾಡಿಕೊಂಡದ್ದು)
- ಈರುಳ್ಳಿ – 1 (ಚಿಕ್ಕದಾಗಿ ಹೆಚ್ಚಿದ್ದು)
- ಕ್ಯಾರೆಟ್ – 1 (ತುರಿದದ್ದು)
- ಎಲೆಕೋಸು – 1 ಬಟ್ಟಲು (ಚಿಕ್ಕದಾಗಿ ಹೆಚ್ಚಿದ್ದು)
- ಕ್ಯಾಪ್ಸಿಕಂ – ½ (ಚಿಕ್ಕದಾಗಿ ಹೆಚ್ಚಿದ್ದು)
- ಆಲೂಗಡ್ಡೆ – 2 (ಬೇಯಿಸಿ ನುಣ್ಣಗೆ ಪುಡಿ ಮಾಡಿಕೊಂಡದ್ದು)
- ಹಸಿಮೆಣಸು – 2 (ಚಿಕ್ಕದಾಗಿ ಕತ್ತರಿಸಿದ್ದು)
- ಕೊತ್ತಂಬರಿ ಸೊಪ್ಪು – ಸ್ವಲ್ಪ
- ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
- ಚಾಟ್ ಮಸಾಲ – 1 ಚಮಚ
- ಗರಂ ಮಸಾಲ – ½ ಚಮಚ
- ಜೀರಿಗೆ ಪುಡಿ – ½ ಚಮಚ
- ಅಚ್ಚಖಾರದ ಪುಡಿ – 1 ಚಮಚ
- ಆಮ್ ಚೂರ್ ಪುಡಿ – ½ ಚಮಚ
- ಅರಿಶಿನ – ½ ಚಮಚ
- ಉಪ್ಪು – ರುಚಿಗೆ ತಕ್ಕಷ್ಟು
👉 ಕೋಟ್ ಮಾಡಲು:
- ಕಾರ್ನ್ ಫ್ಲೋರ್ – 4 ಟೇಬಲ್ ಚಮಚ
- ಚಿಲ್ಲಿ ಫ್ಲೇಕ್ಸ್ – ½ ಚಮಚ
- ಬ್ರೆಡ್ ಕ್ರಂಬ್ಸ್ – ಸ್ವಲ್ಪ
- ಎಣ್ಣೆ – ಕರಿಯಲು ಬೇಕಾಗುವಷ್ಟು
👉 ಮಾಡುವ ವಿಧಾನ:
1️⃣ ಮೊದಲು ಪನ್ನೀರ್ ಅನ್ನು ಪುಡಿ ಮಾಡಿಕೊಂಡು, ಅದರ ಜೊತೆಗೆ ಎಲ್ಲಾ ತರಕಾರಿಗಳು ಹಾಗೂ ಮಸಾಲೆಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
2️⃣ ಮಿಶ್ರಣದಿಂದ ಉಂಡೆಗಳನ್ನು ಮಾಡಿ, ಸಮತಟ್ಟಾಗಿ ತಟ್ಟಿಕೊಳ್ಳಿ.
3️⃣ ಈಗ ಕಾರ್ನ್ ಫ್ಲೋರ್, ಚಿಲ್ಲಿ ಫ್ಲೇಕ್ಸ್ ಹಾಗೂ ಸ್ವಲ್ಪ ನೀರನ್ನು ಹಾಕಿ ದೋಸೆ ಹಿಟ್ಟಿನ ಹದಕ್ಕೆ ಮಿಶ್ರಣ ಮಾಡಿ.
4️⃣ ತಯಾರಿಸಿದ ಕಟ್ಲೆಟ್ಗಳನ್ನು ಮೊದಲು ಈ ಹಿಟ್ಟಿನಲ್ಲಿ ಮುಕ್ಕಿಸಿ, ನಂತರ ಬ್ರೆಡ್ ಕ್ರಂಬ್ಸ್ ಹಚ್ಚಿ ತಟ್ಟೆಯಲ್ಲಿಡಿ.
5️⃣ ಬಿಸಿ ಎಣ್ಣೆಯಲ್ಲಿ ಮಧ್ಯಮ ಉರಿಯಲ್ಲಿ ಎರಡೂ ಬದಿಯೂ ಕೆಂಪಾಗುವವರೆಗೆ ಕರಿಯಿರಿ.
🔥 ಹೀಗಾಗಿ ಹೊರಗೆ ಗರಿಗರಿ, ಒಳಗೆ ಮೃದುವಾದ ರುಚಿಕರವಾದ Paneer Cutlet ಸವಿಯಲು ಸಿದ್ಧ..! 🍽️✨




