
ಆರೋಗ್ಯ ತಜ್ಞರ ಪ್ರಕಾರ, ತೂಕ ಇಳಿಕೆ ಮತ್ತು ಹೊಟ್ಟೆಯ ಸುತ್ತಲಿನ ಕೊಬ್ಬು ಕಡಿಸಲು ಕುಂಬಳಕಾಯಿ ಬೀಜಗಳು ಪರಿಣಾಮಕಾರಿ ಔಷಧಿಯಂತಿವೆ. ಸಾಮಾನ್ಯವಾಗಿ ಅಡುಗೆಯಲ್ಲಿ ಕೇವಲ ಕುಂಬಳಕಾಯಿ ಬಳಕೆ ಆಗುತ್ತಿದ್ದು, ಅದರ ಬೀಜಗಳನ್ನು ವ್ಯರ್ಥವಾಗಿ ಎಸೆಯಲಾಗುತ್ತದೆ. ಆದರೆ, ಇವು ಸೂಪರ್ಫುಡ್ ಆಗಿದ್ದು ದೇಹಕ್ಕೆ ಅನೇಕ ಆರೋಗ್ಯಕರ ಲಾಭಗಳನ್ನು ಒದಗಿಸುತ್ತವೆ.
ಕುಂಬಳ ಬೀಜಗಳಲ್ಲಿ ಪ್ರೋಟೀನ್, ಫೈಬರ್, ಆರೋಗ್ಯಕರ ಕೊಬ್ಬುಗಳು, ಮೆಗ್ನೀಸಿಯಮ್, ಕಬ್ಬಿಣ, ಸೆಲೆನಿಯಮ್, ವಿಟಮಿನ್ ಇ ಹಾಗೂ ಆಂಟಿಆಕ್ಸಿಡೆಂಟ್ಗಳು ಹೇರಳವಾಗಿವೆ. ಇವು ತೂಕ ಇಳಿಕೆ ಮಾತ್ರವಲ್ಲದೆ, ರಕ್ತದಲ್ಲಿನ ಶುಗರ್ ನಿಯಂತ್ರಣ, ಹೃದಯದ ಆರೋಗ್ಯ ಕಾಪಾಡುವುದು, ರೋಗನಿರೋಧಕ ಶಕ್ತಿ ಹೆಚ್ಚಿಸುವುದು ಹಾಗೂ ಕ್ಯಾನ್ಸರ್ ಮುಂತಾದ ರೋಗಗಳ ತಡೆಗಟ್ಟುವಿಕೆಯಲ್ಲಿ ಸಹಕಾರಿ.

ಪ್ರತಿದಿನ ಕೇವಲ 20-30 ಗ್ರಾಂ ಕುಂಬಳ ಬೀಜ ಸೇವನೆ ಸಾಕಷ್ಟು. ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುವ ಅನುಭವ ನೀಡುವ ಜೊತೆಗೆ ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ.
ಸೇವನೆ ವಿಧಾನ:
- ಲಘುವಾಗಿ ಹುರಿದು ನೇರವಾಗಿ ತಿನ್ನಬಹುದು.
- ತರಕಾರಿ ಸಲಾಡ್ಗಳೊಂದಿಗೆ ಮಿಶ್ರಣ ಮಾಡಬಹುದು.
- ಸ್ಮೂತಿ ಅಥವಾ ಶೇಕ್ನಲ್ಲಿ ಬಳಸಬಹುದು.
“ಕುಂಬಳಕಾಯಿ ಬೀಜಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಹೊಟ್ಟೆಯ ಕೊಬ್ಬು ಬೆಣ್ಣೆಯಂತೆ ಕರಗುತ್ತದೆ” ಎಂದಿದ್ದಾರೆ.




