
ಕಡಿಮೆ ಖರ್ಚಿನಲ್ಲಿ ಬ್ಯೂಟಿ ಪಾರ್ಲರ್ಫೇಶಲ್ಗೆ ಹೋಲುವಷ್ಟು ಹೊಳೆಯುವ ಚರ್ಮವನ್ನು ಪಡೆಯಲು ಆಲೂಗಡ್ಡೆ ಫೇಸ್ಪ್ಯಾಕ್ ಉತ್ತಮ ಪರಿಹಾರ. ಮನೆಮದ್ದುಗಳನ್ನು ಬಳಸಿದಾಗ ಯಾವುದೇ ಅಡ್ಡಪರಿಣಾಮಗಳಿಲ್ಲದೆ ನೈಸರ್ಗಿಕ ಕಾಂತಿ ತಲುಪಬಹುದು.
ಬೇಕಾಗುವ ಪದಾರ್ಥಗಳು:
- ಆಲೂಗಡ್ಡೆ – 1
- ಮುಲ್ತಾನಿ ಮಿಟ್ಟಿ – 1 ಟೇಬಲ್ ಚಮಚ
- ನಿಂಬೆ ರಸ – 1 ಟೀ ಚಮಚ
- ಸಕ್ಕರೆ – ಅರ್ಧ ಟೀ ಚಮಚ
- ಕಾಫಿ ಪೌಡರ್ – ಸ್ವಲ್ಪ
ತಯಾರಿಸುವ ವಿಧಾನ:
- ಆಲೂಗಡ್ಡೆಯನ್ನು ತುರಿದು ಹಿಂಡಿ ಅದರ ರಸವನ್ನು ತೆಗೆದುಕೊಳ್ಳಿ.
- ಆಲೂಗಡ್ಡೆ ರಸಕ್ಕೆ ನಿಂಬೆ ರಸ, ಸಕ್ಕರೆ, ಕಾಫಿ ಪೌಡರ್ ಸೇರಿಸಿ ಕಲಸು.
- ಮುಲ್ತಾನಿ ಮಿಟ್ಟಿಯನ್ನು ಬೇರೆ ಬಟ್ಟಲಿನಲ್ಲಿ ಮಿಶ್ರಣ ಮಾಡಿ.
- ಮೊದಲು ಆಲೂಗಡ್ಡೆ ರಸವನ್ನು ಮುಖಕ್ಕೆ ಹಚ್ಚಿ, ಮೇಲೆ ಟಿಶ್ಯೂ ಪೇಪರ್ ಇಟ್ಟು ಮುಲ್ತಾನಿ ಮಿಟ್ಟಿ ಪೇಸ್ಟ್ ಬಳಸಿ ಹಚ್ಚಿ.
- 15-20 ನಿಮಿಷ ಬಿಟ್ಟು ತಣ್ಣನೆಯ ನೀರಿನಿಂದ ಮುಖವನ್ನು ಸ್ವಚ್ಛಗೊಳಿಸಿ.
ಆಲೂಗಡ್ಡೆಯ ಪ್ರಯೋಜನಗಳು:
- ನೈಸರ್ಗಿಕ ಬ್ಲೀಚಿಂಗ್ ಗುಣಗಳು
- ಚರ್ಮದ ಕಲೆಗಳು, ವರ್ಣದ್ರವ್ಯ, ಟ್ಯಾನಿಂಗ್ ಕಡಿಮೆ ಮಾಡುತ್ತದೆ
- ಚರ್ಮವನ್ನು ಪ್ರಕಾಶಮಾನವಾಗಿ, ಸ್ಪಷ್ಟವಾಗಿ ತೋರಿಸುತ್ತದೆ
ನಿಂಬೆಹಣ್ಣಿನ ಪ್ರಯೋಜನಗಳು:
- ವಿಟಮಿನ್ C ಸಮೃದ್ಧ
- ಮುಖದ ಕಲೆಗಳು ಕಡಿಮೆ ಮಾಡುತ್ತದೆ
- ಸತ್ತ ಜೀವಕೋಶಗಳನ್ನು ತೆಗೆದುಹಾಕಿ ನೈಸರ್ಗಿಕ ಹೊಳಪನ್ನು ನೀಡುತ್ತದೆ




