Summer Care : ತಿನ್ನೋದಷ್ಟೇ ಅಲ್ಲ, ಸುಡುವ ಬಿಸಿಲಲ್ಲಿ ಮುಖಕ್ಕೆ ಹಚ್ಚಿ ಕಲ್ಲಂಗಡಿ – ಹೀಗೆ ಬಳಸಿದ್ರೆ ನಿಮ್ಮ ತ್ವಚೆ ಚಂದ್ರನಂತೆ ಹೊಳೆಯುತ್ತೆ!

ಬೇಸಿಗೆ ಕಾಲದಲ್ಲಿ ದೇಹವನ್ನು ತಂಪಾಗಿಡುವುದರಲ್ಲಿ ಪ್ರಮುಖ ಪಾತ್ರ ವಹಿಸುವ ಕಲ್ಲಂಗಡಿ, ತ್ವಚೆ ಆರೈಕೆಯಲ್ಲಿಯೂ ಅಷ್ಟೇ ಪರಿಣಾಮಕಾರಿ. ನೀರಿನ ಪ್ರಮಾಣ ಹೆಚ್ಚಿರುವ ಈ ಹಣ್ಣು ವಿಟಮಿನ್ A, ವಿಟಮಿನ್ C ಹಾಗೂ ಆಂಟಿ ಆಕ್ಸಿಡೆಂಟ್ಗಳಿಂದ ಸಮೃದ್ಧವಾಗಿದ್ದು, ದೇಹವನ್ನು ಹೈಡ್ರೇಟ್ ಮಾಡುವುದರ ಜೊತೆಗೆ ತ್ವಚೆಗೆ ನೈಸರ್ಗಿಕ ಹೊಳಪು ನೀಡುತ್ತದೆ.
ಪಾರ್ಲರ್ಗೆ ಹೋಗದೇ ಮನೆಯಲ್ಲೇ ಸರಳವಾಗಿ ಕಲ್ಲಂಗಡಿ ಫೇಶಿಯಲ್ ಮಾಡಿ ಗ್ಲೋಯಿಂಗ್ ಸ್ಕಿನ್ ಪಡೆಯಬಹುದು. ಅದಕ್ಕಾಗಿ ಇಲ್ಲಿದೆ ಸುಲಭ ವಿಧಾನ
READ THIS : ಇಂದಿನ RCB vs LSG ಹೈ ವೋಲ್ಟೇಜ್ ಮ್ಯಾಚ್ನಲ್ಲಿ ಕೊಹ್ಲಿ ಆಡೋದು ಡೌಟ್!

1. ಕಲ್ಲಂಗಡಿ ರಸದಿಂದ ಕ್ಲೆನ್ಸಿಂಗ್
ಮೊದಲು ಮುಖವನ್ನು ತೊಳೆಯಿರಿ. ಕಲ್ಲಂಗಡಿ ರಸವನ್ನು ಹತ್ತಿ ಸಹಾಯದಿಂದ ಮುಖಕ್ಕೆ ಹಚ್ಚಿ. ಇದು ಚರ್ಮದ ಮೇಲಿರುವ ಕೊಳಕು ಹಾಗೂ ಹೆಚ್ಚುವರಿ ಎಣ್ಣೆಯನ್ನು ತೆಗೆದು ಹಾಕುತ್ತದೆ.
2. ಕಲ್ಲಂಗಡಿ + ಅಕ್ಕಿ ಹಿಟ್ಟು ಸ್ಕ್ರಬ್
ಕಲ್ಲಂಗಡಿ ರಸಕ್ಕೆ ಸ್ವಲ್ಪ ಅಕ್ಕಿ ಹಿಟ್ಟು ಬೆರೆಸಿ ಮುಖಕ್ಕೆ ಹಚ್ಚಿ ಸ್ಕ್ರಬ್ ಮಾಡಿ. ಇದು ಸತ್ತ ಚರ್ಮದ ಕೋಶಗಳನ್ನು ತೆಗೆದು ಹಾಕಿ ಚರ್ಮವನ್ನು ಮೃದುವಾಗಿಸುತ್ತದೆ.
3. ಕಲ್ಲಂಗಡಿ ತಿರುಳಿನಿಂದ ಮಸಾಜ್
ಸ್ಕ್ರಬ್ ನಂತರ ಕಲ್ಲಂಗಡಿ ತಿರುಳನ್ನು ಮುಖಕ್ಕೆ ಹಚ್ಚಿ 5–10 ನಿಮಿಷ ಮೃದುವಾಗಿ ಮಸಾಜ್ ಮಾಡಿ. ಇದರಿಂದ ರಕ್ತ ಸಂಚಾರ ಉತ್ತಮವಾಗಿ, ಮುಖಕ್ಕೆ ನೈಸರ್ಗಿಕ ಹೊಳಪು ಬರುತ್ತದೆ.
4. ಫೇಸ್ ಪ್ಯಾಕ್ – ಕಲ್ಲಂಗಡಿ + ಮೊಸರು/ಜೇನುತುಪ್ಪ
ಕಲ್ಲಂಗಡಿ ರಸವನ್ನು ಮೊಸರು ಅಥವಾ ಜೇನುತುಪ್ಪದೊಂದಿಗೆ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ. 10–15 ನಿಮಿಷಗಳ ನಂತರ ತಣ್ಣೀರಿನಿಂದ ತೊಳೆಯಿರಿ. ಇದು ತ್ವಚೆಯನ್ನು ತಾಜಾವಾಗಿ ಹಾಗೂ ಕಾಂತಿಯುತವಾಗಿಸುತ್ತದೆ.
5. ಕಲ್ಲಂಗಡಿ ಐಸ್ ಟೋನರ್
ಕೊನೆಗೆ ಕಲ್ಲಂಗಡಿ ರಸದಿಂದ ತಯಾರಿಸಿದ ಐಸ್ ಕ್ಯೂಬ್ಗಳನ್ನು ಮುಖಕ್ಕೆ ಬಳಸಿ. ಇದು ಚರ್ಮದ ರಂಧ್ರಗಳನ್ನು ಬಿಗಿಗೊಳಿಸಿ, ತಾಜಾತನ ನೀಡುತ್ತದೆ.

ಈ ರೀತಿಯಾಗಿ ಮನೆಯಲ್ಲಿರುವ ಸಾಮಗ್ರಿಗಳಿಂದ ಕಲ್ಲಂಗಡಿ ಫೇಶಿಯಲ್ ಮಾಡಿ, ಯಾವುದೇ ರಾಸಾಯನಿಕಗಳಿಲ್ಲದೇ ನೈಸರ್ಗಿಕವಾಗಿ ಹೊಳೆಯುವ ತ್ವಚೆ ಪಡೆಯಬಹುದು.
MUST WATCH : WEATHER | ಆಚೆ ಬರುವ ಮುನ್ನ ಹುಷಾರ್ ರಾಜ್ಯದಲ್ಲಿ ಇನ್ನಷ್ಟು ಹೆಚ್ಚಾಗಲಿದೆ ಬಿಸಿಲು





