`RCB’ ಅಭಿಮಾನಿಗಳಿಗೆ ಬಿಗ್ ಶಾಕ್ – ಇಂದಿನ ಲಕ್ನೋ ವಿರುದ್ಧದ ಪಂದ್ಯಕ್ಕೆ `ವಿರಾಟ್ ಕೊಹ್ಲಿ’ ಡೌಟ್.!

ಐಪಿಎಲ್ 2026ರಲ್ಲಿ ಉತ್ತಮ ಫಾರ್ಮ್ನಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ದೊಡ್ಡ ಆತಂಕ ಎದುರಾಗುವ ಸಾಧ್ಯತೆಯಿದೆ. ಲಕ್ನೋ ಸೂಪರ್ ಜೈಂಟ್ಸ್ (LSG) ವಿರುದ್ಧ ಪಂದ್ಯಕ್ಕೂ ಮುನ್ನ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಗಾಯದ ಸಮಸ್ಯೆಗೆ ತುತ್ತಾಗಿದ್ದಾರೆ ಎಂಬ ಸುದ್ದಿ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.
RCB vs LSG ಪಂದ್ಯದಿಂದ ಹೊರಗುಳಿಯುತ್ತಾರಾ ವಿರಾಟ್ ಕೊಹ್ಲಿ?
ಏಪ್ರಿಲ್ 12 ರಂದು ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರ ಪಾದದ ಕೀಲು (ಅಂಕಲ್) ಗಾಯಕ್ಕೆ ಒಳಗಾಗಿದ್ದಾರೆ ಎಂದು ವರದಿಯಾಗಿದೆ. ಇಂದು (ಏಪ್ರಿಲ್ 15) ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಪಂದ್ಯ ನಡೆಯಲಿದ್ದು, ಈ ಪಂದ್ಯದಲ್ಲಿ ಕೊಹ್ಲಿ ಆಡುವುದು ಅನುಮಾನವಾಗಿದೆ ಎನ್ನಲಾಗುತ್ತಿದೆ.
READ THIS : ಕಾಂಗ್ರೆಸ್ನಿಂದ ಎಂಎಲ್ಸಿ ಅಬ್ದುಲ್ ಜಬ್ಬಾರ್ ವಜಾ – D. K. Shivakumar ಆದೇಶ

ಉತ್ತಮ ಪ್ರದರ್ಶನದ ನೆರವಿನಿಂದ 18 ರನ್ಗಳ ಜಯ
ಇನ್ನು ಮುಂಬೈ ಇಂಡಿಯನ್ಸ್ ವಿರುದ್ಧದ ಹಿಂದಿನ ಪಂದ್ಯದಲ್ಲಿ ಕೊಹ್ಲಿ 38 ಎಸೆತಗಳಲ್ಲಿ 50 ರನ್ ಗಳಿಸಿ ಗಮನಸೆಳೆದಿದ್ದರು. ಅವರ ಈ ಉತ್ತಮ ಪ್ರದರ್ಶನದ ನೆರವಿನಿಂದ ಆರ್ಸಿಬಿ 18 ರನ್ಗಳ ಜಯ ಸಾಧಿಸಿತ್ತು.
ಸತತ ಗೆಲುವಿನ ಹಾದಿಯಲ್ಲಿ RCB
ಒಂದು ವೇಳೆ ಕೊಹ್ಲಿ ಈ ಪಂದ್ಯಕ್ಕೆ ಅಲಭ್ಯರಾದರೆ, ಆರ್ಸಿಬಿ ತಂಡದ ಬ್ಯಾಟಿಂಗ್ ವಿಭಾಗಕ್ಕೆ ದೊಡ್ಡ ಹೊಡೆತವಾಗಲಿದೆ. ಪಂದ್ಯ ಆರಂಭಕ್ಕೂ ಮುನ್ನ ಅವರ ಫಿಟ್ನೆಸ್ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಸತತ ಗೆಲುವಿನ ಹಾದಿಯಲ್ಲಿರುವ ಆರ್ಸಿಬಿಗೆ ಕೊಹ್ಲಿಯ ಅಲಭ್ಯತೆ ಎಷ್ಟು ಪರಿಣಾಮ ಬೀರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
MUST WATCH : ತುಮಕೂರಿನಲ್ಲಿ ಖಾಸಗಿ ಬಸ್ ಗಳ ದರ್ಬಾರ್ – ಖಾಸಗಿ ಬಸ್ ಗಳಿಂದ ಟ್ರಾಫಿಕ್ ಸಮಸ್ಯೆ..!





