
ರುಚಿಕರವಾದ Fish Pakoda..!
👉 ಬೇಕಾಗುವ ಪದಾರ್ಥಗಳು:
- ಮೀನು ಮಾಂಸ – 250 ಗ್ರಾಂ (ಮೂಳೆಗಳಿಲ್ಲದದ್ದು)
- ಅಚ್ಚ ಖಾರದಪುಡಿ – 1 ಚಮಚ
- ದನಿಯಾ ಪುಡಿ – 1 ಚಮಚ
- ಅರಿಶಿನ ಪುಡಿ – ಅರ್ಧ ಚಮಚ
- ಜೀರಿಗೆ ಪುಡಿ – ಅರ್ಧ ಚಮಚ
- ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಚಮಚ
- ಕಾರ್ನ್ ಫ್ಲೋರ್ – 1 ಚಮಚ
- ಕಡಲೆ ಹಿಟ್ಟು – 2 ಚಮಚ
- ಸಣ್ಣಗೆ ಹೆಚ್ಚಿದ ಕರಿಬೇವಿನ ಸೊಪ್ಪು – ಸ್ವಲ್ಪ
- ಉಪ್ಪು – ರುಚಿಗೆ ತಕ್ಕಷ್ಟು
- ಎಣ್ಣೆ – ಡೀಪ್ ಫ್ರೈ ಮಾಡಲು
👉 ಮಾಡುವ ವಿಧಾನ:
1️⃣ ಮೊದಲಿಗೆ ಮೀನನ್ನು ಚೆನ್ನಾಗಿ ತೊಳೆದು, ಮೂಳೆಗಳನ್ನು ಬೇರ್ಪಡಿಸಿ ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಿ.
2️⃣ ಒಂದು ಬೌಲ್ನಲ್ಲಿ ಎಣ್ಣೆಯನ್ನು ಹೊರತುಪಡಿಸಿ ಉಳಿದ ಎಲ್ಲಾ ಪದಾರ್ಥಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
3️⃣ ಇದಕ್ಕೆ ಮೀನಿನ ತುಂಡುಗಳನ್ನು ಸೇರಿಸಿ ಮಿಶ್ರಣ ಮಾಡಿ, ಕನಿಷ್ಠ 20 ನಿಮಿಷ ಮ್ಯಾರಿನೇಟ್ ಆಗಲು ಬಿಡಿ.
4️⃣ ಈಗ ಬಿಸಿ ಎಣ್ಣೆಯಲ್ಲಿ ಮಿಶ್ರಣವನ್ನು ಸ್ವಲ್ಪ ಸ್ವಲ್ಪವಾಗಿ ಕೈಯಿಂದ ಬಿಟ್ಟು, ಪಕೋಡಾ ರೀತಿಯಲ್ಲಿ ಹಾಕಿ.
5️⃣ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಹಾಗೂ ಗರಿಗರಿಯಾಗುವವರೆಗೆ ಫ್ರೈ ಮಾಡಿ.
🔥 ಇದೋ ಗರಿಗರಿಯಾದ, ರುಚಿಕರವಾದ Fish Pakoda ಸವಿಯಲು ಸಿದ್ಧ..! 🍽️




