
ನಮ್ಮ ಧರ್ಮದ ಆಚರಣೆ ಜೊತೆಗೆ ಎಲ್ಲಾ ಧರ್ಮದ ಆಚರಣೆಗಳನ್ನು ನಾವು ಗೌರವಿಸಬೇಕು. ಪರಸ್ಪರ ಸಹಭಾಳ್ವೆಯ ಜೀವನ ನಡೆಸಬೇಕು. ಆಗಲೇ ಸದೃಢ ದೇಶ ನಿರ್ಮಾಣ ಸಾಧ್ಯವಾಗುವುದು ಎಂದು ಚಿತ್ರದುರ್ಗದ ಶ್ರೀ ಗುರುಬಸವಮೂರ್ತಿ ಮಾದಾರ ಚೆನ್ನಯ್ಯ ಮಹಾಸ್ವಾಮಿಗಳು ತಮ್ಮ ಅಭಿಪ್ರಾಯಪಟ್ಟರು
ಅವರು ಶಿರಾ ನಗರದ ದರ್ಗಾ ಮುಂಭಾಗದ ಆಸಿಂ ಲೇಔಟ್ ನಲ್ಲಿ Hazrat Syed Qadir Shah Qadri ಅವರ ನೇತೃತ್ವದಲ್ಲಿ ನಡೆದ 20ನೇ ಉರುಸ್ ಮಹೋತ್ಸವ ಹಾಗೂ ಸರ್ವಧರ್ಮ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಪಹಲ್ಗಾಂ ದಾಳಿಯ ನಂತರ ನಡೆದ ಆಪರೇಷನ್ ಸಿಂಧೂರ ಸಮಯದಲ್ಲಿ ಬೆಳಗಾಂ ಮೂಲದ ಮುಸ್ಲಿಂ ಯೋದೆ ಯುದ್ಧ ವಿಮಾನದ ಮೂಲಕ ನೆರೆ ರಾಷ್ಟ್ರ ಪಾಕಿಸ್ತಾನದ ಮೇಲೆ ಬಾಂಬ್ ದಾಳಿ ಮಾಡಿದ್ದರು. ಇಲ್ಲಿ ಎಲ್ಲಾ ಧರ್ಮಗಳು ಒಂದೆ ಎಂದರು.
ಕರ್ನಾಟಕ ಸರ್ಕಾರದ Delhi ವಿಶೇಷ ಪ್ರತಿನಿಧಿ ಹಾಗೂ ಶಾಸಕ T.B. Jayachandra ಮಾತನಾಡಿ, ಸರ್ವ ಧರ್ಮಗಳಿಗೂ ಸೃಷ್ಟಿಕರ್ತ ದೇವರು ಒಬ್ಬನೇ, ಆಯಾಯ ಧರ್ಮದ ಆಚರಣೆಗೆ ಅನುಗುಣವಾಗಿ ದೇವರನ್ನು ಪೂಜಿಸುತ್ತಿದ್ದಾರೆ. ನಾವೆಲ್ಲ ಮನುಷ್ಯರೇ ನಮ್ಮಲ್ಲಿ ಹರಿಯುತ್ತಿರುವ ರಕ್ತ ಒಂದೆ ಎಂದರು.
ಈ ಸಂದರ್ಭದಲ್ಲಿ ಮಾಜಿನಗರ ಸಭಾ ಅಧ್ಯಕ್ಷ ಅಮಾನುಲ್ಲಾ ಖಾನ್, ನಗರಸಭಾ ಸದಸ್ಯರಾದ ಅಬ್ದುಲ್ಲಾ ಖಾನ್ ಮತ್ತು ಫರ್ಮಾನ್, ಹಾಜರಿದ್ರು.




