VAIBHAV SURYAVANSHI : TEAM INDIA ಅಂಡರ್-19 ತಂಡದ ಯುವ ತಾರೆ VAIBHAV SURYAVANSHI ಅವರ ಸಿಡಿಲಬ್ಬರ ಆಸ್ಟ್ರೇಲಿಯಾದ ಪಿಚ್ನಲ್ಲಿಯೂ ಮುಂದುವರೆದಿದ್ದು, YOUTH TEST ನಲ್ಲಿ ಭರ್ಜರಿ ಶತಕ ಬಾರಿಸಿ ಮತ್ತೆ ಗಮನ ಸೆಳೆದಿದ್ದಾರೆ.
ಬ್ರಿಸ್ಬೇನ್ನ ಹಿಯಾನ್ ಹೀಲಿ ಓವಲ್ನಲ್ಲಿ ನಡೆಯುತ್ತಿರುವ AUSTRALIA UNDER-19 ವಿರುದ್ಧದ ಯೂತ್ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ವೈಭವ್ ಮಿಂಚಿನ ಆಟವಾಡಿದರು. ಮೊದಲ ಓವರ್ನಿಂದಲೇ ಆತ ವಿಸ್ಫೋಟಕ ಶೈಲಿಯ ಬ್ಯಾಟಿಂಗ್ ಆರಂಭಿಸಿ, ಮೈದಾನದಲ್ಲಿ ಬೌಂಡರಿಗಳ ಸುರಿಮಳೆಗೈದರು.
ಆಸೀಸ್ ತಂಡ ಮೊದಲು ಬ್ಯಾಟ್ ಮಾಡಿ 243 ರನ್ಗೆ ALLOUT ಆಯಿತು. ಬಳಿಕ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡಕ್ಕೆ ವೈಭವ್ ಭರ್ಜರಿ ಆರಂಭ ಒದಗಿಸಿದರು. ಕೇವಲ 78 ಎಸೆತ ಗಳಲ್ಲಿ ಶತಕ ಸಿಡಿಸಿದ ವೈಭವ್, 86 ಎಸೆತಗಳಲ್ಲಿ 8 ಸಿಕ್ಸ್ ಮತ್ತು 9 ಫೋರ್ಗಳ ಸಹಿತ 113 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಅವರ ಈ ಧಾಡಿತ INNINGS ನಿಂದ ಭಾರತ ಅಂಡರ್-19 ತಂಡ 300ಕ್ಕೂ ಹೆಚ್ಚು ರನ್ ಗಳಿಸಿ ಹಿರಿದಾದ ಮುನ್ನಡೆ ಪಡೆದುಕೊಂಡಿದೆ. ಇದಕ್ಕೂ ಮುನ್ನ, IPL ನಲ್ಲಿ RAJASTHAN ROYALS ಪರ ಆಡಿದ ವೈಭವ್ ಸೂರ್ಯವಂಶಿ, GUJRATH TITANS ವಿರುದ್ಧ ಕೇವಲ 35 ಎಸೆತಗಳಲ್ಲಿ ಶತಕ ಸಿಡಿಸಿ ಎಲ್ಲರ ಗಮನ ಸೆಳೆದಿದ್ದರು. ಆ ಪಂದ್ಯದಲ್ಲಿ ಅವರು 11 ಸಿಕ್ಸ್ ಮತ್ತು 7 ಫೋರ್ಗಳೊಂದಿಗೆ 101 ರನ್ ಬಾರಿಸಿದ್ದರು.