
LPG Cylinder Price hike: ಆಯುಧಪೂಜೆಯ ದಿನದಂದೇ ತೈಲ ಮಾರುಕಟ್ಟೆ ಕಂಪನಿಗಳು ಗ್ರಾಹಕರಿಗೆ ದರ ಏರಿಕೆಯ ಆಘಾತ ನೀಡಿವೆ. ವಾಣಿಜ್ಯ ಬಳಕೆಯ 19 ಕೆಜಿ ಎಲ್ಪಿಜಿ (Commercial LPG cylinder) ಸಿಲಿಂಡರ್ ಬೆಲೆಯನ್ನು ₹15.50ರವರೆಗೆ ಏರಿಸಲಾಗಿದೆ. ಈ ಪರಿಷ್ಕೃತ ದರಗಳು ಇಂದಿನಿಂದಲೇ ಜಾರಿಯಾಗಿದ್ದು, ಹೋಟೆಲ್ ಹಾಗೂ ರೆಸ್ಟೋರೆಂಟ್ಗಳಿಗೆ ಇದೊಂದು ಆರ್ಥಿಕ ಬರೆ ಎಳೆದಂತಾಗಿದೆ. ಎಲ್ಲೆಲ್ಲಿ ಎಷ್ಟೇಷ್ಟು ಬೆಲೆ ಏರಿಕೆ ಆಗಿದೆ ಅಂತ ನೋಡೊದಾದರೆ.
| ನವದೆಹಲಿ | ₹15.50 | ₹1,595.50 |
| ಕೋಲ್ಕತ್ತಾ | ₹16.50 | ₹1,700.50 |
| ಮುಂಬೈ | ₹15.50 | ₹1,547.00 |
| ಚೆನ್ನೈ | ₹16.50 | ₹1,754.50 |
ದಿನಸಿ ಬಳಕೆಯ 14.2 ಕೆಜಿ ಗೃಹಬಳಕೆಯ ಎಲ್ಪಿಜಿ (Liquefied Petroleum) ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಅಡುಗೆ ಅನಿಲದ ದರವು ಸ್ಥಿರವಾಗಿರುವುದು ಕೆಲವರಿಗೆ ಸ್ವಲ್ಪ ಮಟ್ಟಿಗೆ Relief ಸಿಕ್ಕಂತಾಗಿದೆ. ಇನ್ನು ವಾಣಿಜ್ಯ ಬಳಕೆಯ ಗ್ಯಾಸ್ ದರ ಏರಿಕೆ ಮಾಡಿರುವುದು ಹೋಟೆಲ್ (hotel) ಹಾಗೂ ರೆಸ್ಟೋರೆಂಟ್ (Restaurant) ಮಾಲೀಕರಿಗೆ ಬರೆ ಎಳೆದಂತಾಗಿದೆ.




