
TUMAKURU : ತುಮಕೂರು ನಗರ ಬೆಂಗಳೂರಿನಂತೆ ಶರವೇಗದಲ್ಲಿ ಬೆಳೆಯುತ್ತಿದ್ದು, ಇಂಚಿಂಚೂ ಜಾಗವೂ ಕೋಟಿಗಟ್ಟಲೇ ಬೆಲೆ ಬಾಳುತ್ತಿದೆ. ಹೀಗಾಗಿ ಅಂಗೈಯಷ್ಟು ಜಾಗ ಸಿಕ್ಕರೂ ಜನ ಕಬಳಿಸಲು ಮುಂದಾಗ್ತಾರೆ. ಚರಂಡಿ ಜಾಗವನ್ನು ಬಿಡಲ್ಲ. ರಸ್ತೆಯ ಜಾಗವನ್ನು ಬಿಡೋದಿಲ್ಲ ಸದ್ದಿಲ್ಲದೇ ಜಾಗಕ್ಕೆ ಕೈ ಹಾಕಿ, ಕಟ್ಟಡ ಕಟ್ಟಿ ಬಿಡ್ತಾರೆ. ಈಗ ಜನರು ಓವರ್ ಹೆಡ್ ಟ್ಯಾಂಕ್ ಇದ್ದ ಜಾಗವನ್ನು ಕೆಲವರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಹೌದು, ತುಮಕೂರು ನಗರದ ದೇವರಾಯಪಟ್ಟಣದ ಓವರ್ ಹೆಡ್ ಟ್ಯಾಂಕ್(OVERHEAD TANK) ಇದ್ದ ಸರ್ಕಾರಿ ಜಾಗವನ್ನು ಅಕ್ರಮವಾಗಿ Encroachment ಮಾಡಿಕೊಂಡಿದ್ದಾರೆ ಎಂದು ಸಾರ್ವಜನಿಕರು ಗಂಭೀರ ಆರೋಪ ಮಾಡಿದ್ದಾರೆ. ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಲ್ಲದೇ, ಸದ್ದಿಲ್ಲದೇ ಮನೆ ಕಟ್ಟಲು ಮುಂದಾಗಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರಿ ಜಾಗದಲ್ಲಿ ಕೆಲವರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದು, ತಮ್ಮದೇ ಜಾಗವೆಂದು ಮನೆ ನಿರ್ಮಿಸಿಕೊಳ್ಳುತ್ತಿದ್ದಾರೆ. ಈ ಸಂಬಂಧ ಸಾಕಷ್ಟು ಬಾರಿ ಸಂಬಂದಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ರೂ ಯಾವುದೇ ಕ್ರಮ ತೆಗೆದುಕೊಳ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸ್ತಿದ್ದಾರೆ.
ಇನ್ನು ಓವರ್ ಹೆಡ್ ಇದ್ದ ಜಾಗದಲ್ಲಿ ಸಾರ್ವಜನಿಕ ಶೌಚಾಲಯವನ್ನು ನಿರ್ಮಾಣ ಮಾಡುವಂತೆ ಹಲವು ಬಾರಿ ಮನವಿ ಮಾಡಿಕೊಂಡ್ರು ಅಧಿಕಾರಿಗಳು ಕ್ಯಾರೆ ಅನ್ನಲಿಲ್ಲ. ಈಗ ಆ ಜಾಗವನ್ನು ಒತ್ತುವರಿ ಮಾಡಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಸ್ಥಳೀಯರು ಅಸಮಾಧಾನ ಹೊರ ಹಾಕಿದರು.
ಇನ್ನಾದ್ರು ಸಂಬಂಧಪಟ್ಟ ಅಧಿಕಾರಿಗಳು ದೇವರಾಯನಪಟ್ಟಣಕ್ಕೆ ಭೇಟಿ ನೀಡಿ ಒತ್ತುವರಿ ಮಾಡಿಕೊಂಡಿರುವ ಜಾಗವನ್ನು ತೆರವುಗೊಳಿಸಿ ಸೂಕ್ತ ಕ್ರಮ ತೆಗೆದುಕೊಂಡು ಗ್ರಾಮಸ್ಥರಿಗೆ ನ್ಯಾಯ ಒದಗಿಸಿಕೊಡಬೇಕಿದೆ. ಅಲ್ಲದೇ ಸರ್ಕಾರಿ ಜಾಗವನ್ನು ಸದ್ದಿಲ್ಲದೇ ಜನರು ಒತ್ತುವರಿ ಮಾಡಿಕೊಳ್ಳುತ್ತಿರೋದು ಹೆಚ್ಚಾಗಿದ್ದು, ಪಾಲಿಕೆ ಭೂಕಳ್ಳರ ವಿರುದ್ಧ ಕಠಿಣ ಕ್ರಮ ಜರುಗಿಸುವ ಮೂಲಕ ಒತ್ತುವರಿಗೆ ಬ್ರೇಕ್ ಹಾಕಬೇಕಿದೆ.




