
Bangalore Traffic : ಸಂಚಾರ ದಟ್ಟಣೆ, ಗುಂಡಿಗಳ ಸಮಸ್ಯೆ, ವಾಹನಗಳ ಹೆಚ್ಚಳ ಇತ್ಯಾದಿ ಚಿಂತೆಗೂಂಡಿರುವ ಬೆಂಗಳೂರುನಲ್ಲಿ, ಸರ್ಕಾರ ಒಂದು ವಿವಾದಾತ್ಮಕ ಮತ್ತು ಮಹತ್ವದ ನಿರ್ಧಾರದತ್ತ ಮುಂದಾಗುವ ಸಾಧ್ಯತೆ ಇದೆ. ಲಂಡನ್, ಸಿಂಗಾಪುರ್, ನ್ಯೂಯಾರ್ಕ್ ಮಾದರಿಯಲ್ಲಿ “Congestion Tax” (ಸಂಚಾರ ದಟ್ಟಣೆ ತೆರಿಗೆ) ಪ್ರಸ್ತಾಪ ಸರ್ಕಾರಿ ಮಟ್ಟದಲ್ಲಿ ಚರ್ಚೆಯಲ್ಲಿದೆ.
ಸೆಪ್ಟೆಂಬರ್ 24ರಂದು ನಡೆದ ವಿವಿಧ ಇಲಾಖೆಗಳ ಸಮನ್ವಯ ಸಭೆಯಲ್ಲಿ, ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ, ಖಾಸಗಿ ಕ್ಷೇತ್ರದ ವ್ಯಕ್ತಿಗಳ ಜೊತೆಗಿನ ಸಭೆಯಲ್ಲಿ ಈ ಸಂಚಾರ ದಟ್ಟಣೆ ತೆರಿಗೆ ಪ್ರಸ್ತಾಪವನ್ನ ತಜ್ಞರು ಮಂಡಿಸಿದ್ದಾರೆ. ಪೀಕ್ ಅವರ್ ನಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿರುವ ನಿರ್ದಿಷ್ಟ ರಸ್ತೆಗಳಲ್ಲಿ ಜಾರಿ. ಒಬ್ಬರೇ ಕಾರು ಓಡಿಸಿದರೆ ಸಂಚಾರ ದಟ್ಟಣೆ ತೆರಿಗೆ ಕಟ್ಟಬೇಕು. ಫಾಸ್ಟ್ ಟ್ಯಾಗ್ ಮೂಲಕ ಸಂಚಾರ ದಟ್ಟಣೆ ತೆರಿಗೆ ಕಡಿತ ಮಾಡಲು ಪ್ರಸ್ತಾಪ ಇಡಲಾಗಿದೆ.




