
Garbage Problem in tumkur city : ನಮ್ಮ ತುಮಕೂರು ಸ್ಮಾರ್ಟ್ ಸಿಟಿ, ಶೈಕ್ಷಣಿಕ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗ್ತಿದೆ. ಆದರೆ, ನಗರದ ಸೌಂದರ್ಯವನ್ನು ಕಸದ ಸಮಸ್ಯೆ ಹಾಳುಮಾಡುತ್ತಿದೆ. ನಗರದ ಮೂಲೆ ಮೂಲೆಯಲ್ಲಿಯೂ ಕಸದ ಸಮಸ್ಯೆ ಬಗ್ಗೆ ಪ್ರಜಾಶಕ್ತಿ ಟಿವಿ ಸಾಲು ಸಾಲು ವರದಿ ಮಾಡಿದ್ರೂ ಕೂಡ, ನಗರದ ಚಿತ್ರಣ ಮಾತ್ರ ಅದ್ಯಾಕೋ ಬದಲಾಗುತ್ತಿಲ್ಲ.
ಹೌದು, ತುಮಕೂರಿನ ವಾರ್ಡ್ ನಂಬರ್ 4 ಸಂತೆಪೇಟೆಯಲ್ಲಿ ಕಸದ ಸಮಸ್ಯೆ ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗ್ತಾನೆ ಇದೆ. ಈ ಕಸದಿಂದ ನಾಯಿ ಹಂದಿಗಳ ಕಾಟ ಕೂಡ ಹೆಚ್ಚಾಗುತ್ತಿದೆ. ಆದರೆ , ಪಾಲಿಕೆಯವರು ಮಾತ್ರ ಅಲ್ಲಿ ಬಿದ್ದಿರುವ ಕಸ ತೆಗೆಯುತ್ತಿಲ್ಲ. ರಸ್ತೆಯಲ್ಲಿ ರಾಶಿ ರಾಶಿ ಕಸ ಬಿದ್ದಿರುವುದರಿಂದ ಸಾರ್ವಜನಿಕರು ಓಡಾಡಲು ಕಷ್ಟ ಪಡುವಂತಾಗಿದೆ. ಜನರು ರಸ್ತೆಯಲ್ಲೇ ಕಸವನ್ನು ಸುರಿದುಹೋಗ್ತಿದ್ದು, ಸುತ್ತಮುತ್ತಲು ಗಬ್ಬೆದ್ದು ನಾರುವಂತಾಗಿದೆ. ಇನ್ನು ಕಸದ ಸಮಸ್ಯೆಯಿಂದಾಗಿ ನಾಯಿ, ಹಂದಿಗಳ ಕಾಟವೂ ಹೆಚ್ಚಾಗಿದೆ. ಇದರಿಂದ ಮಕ್ಕಳು ರಸ್ತೆಯಲ್ಲಿ ಓಡಾಡಲು ಭಯಪಡುವಂತಾಗಿದೆ.
ಇನ್ನು ಒಂದು ಕಡೆ ಕಸದ ಸಮಸ್ಯೆಯಿಂದ ಸಾಕಷ್ಟು ತೊಂದ್ರೆ ಆಗ್ತಿದೆ ಎಂದು ಜನರಿಗೆ ಗೊತ್ತಿದ್ರು ಕೂಡ, ಜನರು ಕಸವನ್ನು ರಸ್ತೆ ಬದಿಯಲ್ಲಿ ಕಸ ಸುರಿದು ಹೋಗ್ತಿದ್ದಾರೆ. ಮನೆ ಮುಂದೆ ಕಸದ ಗಾಡಿಗಳು ಬಂದ್ರು ಕೂಡ ಜನರು ಕಸದ ಗಾಡಿಗೆ ಕಸವನ್ನು ಹಾಕದೇ, ರಸ್ತೆ ಬದಿಯೇ ಹಾಕ್ತಿದ್ದಾರೆ. ಇತ್ತ ರಾಶಿ ರಾಶಿ ಕಸ ಬಿದಿದ್ರು, ಪಾಲಿಕೆ ಸಿಬ್ಬಂದಿ ಕಸವನ್ನು ಎತ್ತುವ ಕೆಲಸ ಮಾಡ್ತಿಲ್ಲ. ಕರೆ ಮಾಡಿ ದೂರು ನೀಡಿದ್ರೆ ಬರ್ತೀವಿ, ತೆಗೆತಿವಿ ಅಂತ ಬೇಜವಾಬ್ದಾರಿ ಉತ್ತರ ನೀಡಿದ್ದಾರೆ ಅಂತಾ ಸಾರ್ವಜನಿಕರು ಆಕ್ರೋಶ ಹೊರ ಹಾಕ್ತಿದ್ದಾರೆ.
ಅದೇನೇ ಆಗಲಿ ರಾಶಿ ರಾಶಿ ಕಸ ಬಿದ್ದು , ಆ ಕಸದಿಂದ ನಾಯಿಗಳ ಕಾಟ ಹಾಗೂ ಹಂದಿಗಳ ಕಾಟ ಹೆಚ್ಚಾದ್ರೂ ಕೂಡ. ಪಾಲಿಕೆ ಸಿಬ್ಬಂದಿಗಳು ಕಸವನ್ನು ಎತ್ತದಿರೋದು ಮಾತ್ರ ದುರಂತವೇ ಸರಿ. ಇನ್ನಾದ್ರು ಅಧಿಕಾರಿಗಳು ಎಚ್ಚೆತ್ತುಕೊಂಡು ಜನರಿಗೆ ಕಸದ ಸಮಸ್ಯೆಯಿಂದ ಮುಕ್ತಿ ನೀಡುತ್ತಾರಾ ಎಂದು ಕಾದುನೋಡಬೇಕಿದೆ.




