MANGO PACHCHA MOVIE TEASER RELEASE :ನಟ ಕಿಚ್ಚ ಸುದೀಪ್ ಅವರ ಅಕ್ಕನ ಮಗ ಸಂಚಿತ್ ಸಂಜೀವ್ ಅಭಿನಯದ ಬಹುನಿರೀಕ್ಷಿತ ಚೊಚ್ಚಲ ಚಿತ್ರ ʼಮ್ಯಾಂಗೋ ಪಚ್ಚʼ ಟೀಸರ್ ಬಿಡುಗಡೆಯಾಗಿದೆ. ವಿಶಿಷ್ಟವೆನಿಸುವ ಶೀರ್ಷಿಕೆಯ ಈ ಸಿನಿಮಾದ ಟೀಸರ್ನ್ನು ಕಿಚ್ಚ ಸುದೀಪ್ ಅವರು ಸ್ವತಃ ಆಯುಧ ಪೂಜೆಯ ದಿನ ಬಿಡುಗಡೆ ಮಾಡಿದ್ದಾರೆ.
ವಿವೇಕ ನಿರ್ದೇಶನ ಮಾಡುತ್ತಿರುವ ಈ ಸಿನಿಮಾ, 2001 ರಿಂದ 2011ರ ನಡುವೆ ಮೈಸೂರಿನಲ್ಲಿ ನಡೆದ ಘಟನೆಗಳನ್ನು ಆಧರಿಸಿದೆ. ಟೀಸರ್ನಲ್ಲಿರುವ ದೃಶ್ಯಗಳು ಮೈಸೂರು ಭಾಗದ ನೈಸರ್ಗಿಕ ಸೌಂದರ್ಯ, ರೆಟ್ರೋ ಲುಕ್ನಲ್ಲಿವೆ.
ಇದೀಗ ಬಿಡುಗಡೆಯಾಗಿರುವ ಟೀಸರ್ ಮಾತ್ರವಲ್ಲ, ಇದಕ್ಕೆ ಮುನ್ನ ಬಿಡುಗಡೆಯಾಗಿದ್ದ ಇಂಟ್ರೊಡಕ್ಷನ್ ಟೀಸರ್ದಲ್ಲಿಯೇ ಸಂಚಿತ್ ಅವರ ವಿಭಿನ್ನ ಶೈಲಿ ಹಾಗೂ ಅಭಿನಯದ ಝಲಕ್ ಅಭಿಮಾನಿಗಳ ಗಮನ ಸೆಳೆದಿತ್ತು.
ಸಂಚಿ ಮೊದಲ ಸಿನಿಮಾಗೆ ನಾಯಕಿಯಾಗಿ ನಟಿ ಕಾಜಲ್ ಕುಂದರ್ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಉಳಿದಂತೆ ಈ ಸಿನಿಮಾದಲ್ಲಿ ಈ ಸಿನಿಮಾದಲ್ಲಿ ನಟ ಮಯೂರ್ ಪಟೇಲ್, ವಿಜಯ ರಾಘವೇಂದ್ರ ಅವರ ಅಕ್ಕನ ಮಗ ಜೇಯ್, ಬಿಗ್ ಬಾಸ್ ಖ್ಯಾತಿಯ ನಟಿ ಹಂಸ, ಮಾಲಾಶ್ರೀ ಸೇರಿದಂತೆ ದೊಡ್ಡ ತಾರಾಬಳಗವೆ ಇದೆ.
Teaser release of Sanchit Sanjeev starrer 'Mango Pachcha'