
GOLD RATE: ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ನಿರಂತರ ಏರಿಕೆ ಕಾಣಿಸಿಕೊಂಡಿದ್ದು, ದೆಹಲಿ, ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಹೊಸ ದಾಖಲೆ ಬೆಲೆ ದಾಖಲಿಸಲಾಗಿದೆ. ಕಳೆದ ಎರಡು ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ₹200ಕ್ಕೂ ಅಧಿಕ ಜಿಗಿತವಾಗಿದ್ದು, ಮಂಗಳವಾರ (ಸೆಪ್ಟೆಂಬರ್ 30) ಕೂಡ ಬೆಲೆ ₹170ರಷ್ಟು ಏರಿಕೆ ಕಂಡಿದೆ.
ನಿನ್ನೆ ಸೋಮವಾರ ಚಿನ್ನದ ದರ ₹85 ಏರಿಕೆಯಾದ ಬೆನ್ನಲ್ಲೇ, ಇಂದಿನ ಬೆಲೆ ಏರಿಕೆಯಿಂದಾಗಿ ಎರಡು ದಿನದ ಒಟ್ಟು ಜಿಗಿತ ₹255 ರುಪಾಯಿಗೆ ತಲುಪಿದೆ. ತಮಿಳುನಾಡು, ಕೇರಳ ಮೊದಲಾದ ರಾಜ್ಯಗಳಲ್ಲಿ ಬೆಳ್ಳಿ ಬೆಲೆ ₹16,100 ರುಪಾಯಿಗೆ ತಲುಪಿದೆ.
- 22 ಕ್ಯಾರಟ್ ಚಿನ್ನ (10 ಗ್ರಾಂ): ₹1,08,450
- 24 ಕ್ಯಾರಟ್ ಚಿನ್ನ (10 ಗ್ರಾಂ): ₹1,18,310
- ಬೆಳ್ಳಿ ದರ (100 ಗ್ರಾಂ): ₹15,100
ಬೆಂಗಳೂರಿನಲ್ಲಿ ಇಂದಿನ ಬೆಲೆ:
- ಚಿನ್ನ (22 ಕ್ಯಾರಟ್, 10 ಗ್ರಾಂ): ₹1,08,450
- ಬೆಳ್ಳಿ (100 ಗ್ರಾಂ): ₹15,100




