ಚಿಕ್ಕನಾಯಕನಹಳ್ಳಿ ತಾಲೂಕಿನ ಮಾಳಿಗೆಹಳ್ಳಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಶಾಲೆಯ 111ನೇ ಶತಮಾನೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮವನ್ನ ಅದ್ದೂರಿಯಾಗಿ ಆಚರಿಸಲಾಯ್ತು. ಈ ವೇಳೆ ಹಳೆ ವಿದ್ಯಾರ್ಥಿಗಳು ತಮ್ಮ ಗುರುಗಳಿಗೆ ಪಾದಪೂಜೆ ಮಾಡುವ ಮೂಲಕ, ಪುಷ್ಪಮಳೆಗರೆದು ಆತ್ಮೀಯವಾಗಿ ಸ್ವಾಗತ ಸಲ್ಲಿಸಿದ್ರು.
ಸರ್ಕಾರಿ ಶಾಲೆಯಲ್ಲಿ ವಿದ್ಯಾಬ್ಯಾಸ ಮಾಡಿದ ಹಳೆ ವಿದ್ಯಾರ್ಥಿಗಳು ತಮ್ಮ ಗುರುಗಳಿಗೆ ಪಾದಪೂಜೆ ಸಲ್ಲಿಸಿ, ಪುಷ್ಪಮಳೆಯನ್ನ ಸುರಿಸೋದರ ಮೂಲಕ ಗೌರವವನ್ನ ಸಲ್ಲಿಸಿದ್ರು. ಇನ್ನ ಗುರುಶಿಷ್ಯರ ಈ ಭಾವನಾತ್ಮಕ ಸಮಾಗಮ ಎಲ್ಲರ ಮನಸ್ಸನ್ನ ಸ್ಪರ್ಶಿಸಿದ್ದು, ಕೆಲ ಶಿಕ್ಷಕರ ಕಣ್ಣು ತುಂಬಿ ಬಂದಿದ್ದು, ಭಾವನಾತ್ಮಕ ಸನ್ನಿವೇಶವನ್ನ ಮೂಡಿಸಿತ್ತು. ಅಲ್ದೇ ಕಾರ್ಯಕ್ರಮ ದಲ್ಲಿ ವಿದ್ಯಾರ್ಥಿಗಳು ಗುರುಗಳ ತ್ಯಾಗ, ಸೇವೆ ಹಾಗೂ ಮಾರ್ಗದರ್ಶನವನ್ನ ಸ್ಮರಿಸಿ ಕೃತಜ್ಞತೆ ಸಲ್ಲಿಸಿದ್ರು.
ಇನ್ನು ಈ ವೇಳೆ ಮುಖ್ಯ ಶಿಕ್ಷಕರಾದ ರಂಗಯ್ಯ ಸೇರಿದಂತೆ,ದ್ರಾಕ್ಷಾಯಣಮ್ಮ, ಮಂಜುನಾಥ, ಲೋಕೇಶ್, ವಿಜಯಕುಮಾರಿ, ವಿಜಯ, ಜ್ಯೋತಿ, ಪದ್ಮಾವತಿ, ಲತಾ ಮಣಿ ಹಾಗೂ ರಂಗಮ್ಮರನ್ನು ಗೌರವಿಸಲಾಯ್ತು. ಈ ವೇಳೆ ನೂರಾರು ವಿದ್ಯಾರ್ಥಿಗಳು ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ರು.