
Bengaluru Traffic Police New Rules : ಬೆಂಗಳೂರು ನಗರದ ರಸ್ತೆಗಳಲ್ಲಿ ನಂಬರ್ ಪ್ಲೇಟ್ ಇಲ್ಲದ ವಾಹನಗಳ ಓಡಾಟವನ್ನು ತಡೆಯಲು ಪೊಲೀಸರು ಕಠಿಣ ಕ್ರಮ ಕೈಗೆತ್ತಿಕೊಂಡಿದ್ದಾರೆ. ನಂಬರ್ ಪ್ಲೇಟ್ ಇಲ್ಲದ ವಾಹನಗಳನ್ನು ಬಳಸುವವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420 (ವಂಚನೆ) ಅಡಿಯಲ್ಲಿ ಕ್ರಿಮಿನಲ್ ಕೇಸ್ ದಾಖಲಿಸಲು ಮುಂದಾಗಿದ್ದಾರೆ.
ಇನ್ನು ರಸ್ತೆಗಳಲ್ಲಿ ಓಡಾಡುವ ಕೆಲವರು ನಂಬರ್ ಪ್ಲೇಟ್ ತೆಗೆದುಹಾಕಿ ಅಥವಾ ಸುತ್ತಿಟ್ಟು ಮರೆಮಾಚುವ ಮೂಲಕ ಸಂಚಾರಿ ನಿಯಮ ಉಲ್ಲಂಘನೆಗಳಿಂದ ಪಾರಾಗಲು ಯತ್ನಿಸುತ್ತಿದ್ದು, ಇತರರು ಅದನ್ನು ಅಪರಾಧ ಕೃತ್ಯಗಳಿಗೆ ಬಳಸುತ್ತಿರುವುದು ಕಂಡುಬಂದಿದ್ದು, ಬೆಂಗಳೂರು ನಗರ ಟ್ರಾಫಿಕ್ ಪೊಲೀಸ್ ಇಲಾಖೆ ಈಗ ವಾಹನದ ನಂಬರಿಲ್ಲದಿದ್ದರೆ ಅಥವಾ ನಕಲಿ ಪ್ಲೇಟ್ ಇದ್ದರೆ, ಆ ವಾಹನವನ್ನು ತಕ್ಷಣವೇ ಸೀಜ್ ಮಾಡಲಿ ಮುಂದಾಗಿದ್ದು, ವಾಹನದ ಮಾಲೀಕರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲಾಗುತ್ತಿದೆ ಮತ್ತು ಕೆಲವರೆಗೂ ನೋಟಿಸ್ ಕೂಡ ಜಾರಿಗೊಳ್ಳುತ್ತಿದೆ.
ಇನ್ನು ಕಾನೂನು ಪ್ರಕಾರ, ಎಲ್ಲ ವಾಹನಗಳು ನೋಂದಣಿ ಸಂಖ್ಯೆ ಹೊಂದಿರಬೇಕು ಮತ್ತು ಅದು ಪಾರದರ್ಶಕವಾಗಿ ಪ್ರದರ್ಶಿತವಾಗಿರಬೇಕು. ಇನ್ನು ಪ್ರಕರಣ ದಾಖಲಾದವರ ವಿರುದ್ಧ ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗುತ್ತದೆ. ವಾಹನ ಸವಾರರು ಕೋರ್ಟ್ ಮುಖಾಂತರವೇ ತಮ್ಮ ತಮ್ಮ ವಾಹನಗಳನ್ನು ಬಿಡಿಸಿಕೊಳ್ಳುವಂತೆ ಪೊಲೀಸರು ಮಾಡುತ್ತಿದ್ದಾರೆ.




