
TUMKUR PROTEST : ತುಮಕೂರು ಜಿಲ್ಲೆ ಹೆಬ್ಬೂರು ಹೋಬಳಿಯ ರಾಮೇಗೌಡನ ಪಾಳ್ಯದ ಪ್ರಸಿದ್ಧ ಶ್ರೀ ಬೀರಲಿಂಗೇಶ್ವರ ಹಾಗೂ ಚಿಕ್ಕಮ್ಮ- ದೊಡ್ಡಮ್ಮ ದೇವಸ್ಥಾನಕ್ಕೆ ಸೇರಿದ ಸರ್ವೇ ನಂಬರ್ 102ರಲ್ಲಿ 5 ಎಕರೆ 39 ಕುಂಟೆ ಜಾಗ ಗೋಮಾಳ ಜಮೀನು ಇದ್ದು, ರಾತ್ರೋ ರಾತ್ರಿ ಗ್ರಾಮದ ಲಕ್ಷ್ಮೀಕಾಂತ್ ಎಂಬಾತ ಮನೆ ಕಟ್ಟಲು ಮುಂದಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ.
ಹೌದು ಹೆಬ್ಬೂರು ಹೋಬಳಿಯ ರಾಮೇಗೌಡನ ಪಾಳ್ಯದ ಇತಿಹಾಸ ಪ್ರಸಿದ್ಧವಾದ ಶ್ರೀ ಬೀರಲಿಂಗೇಶ್ವರ ಹಾಗೂ ಚಿಕ್ಕಮ್ಮ ದೊಡ್ಡಮ್ಮ ದೇವಸ್ಥಾನವನ್ನು ಈಗ ನವೀಕರಣ ಮಾಡಲಾಗಿದ್ದು, ಉದ್ಘಾಟನೆಗೆ ದಿನಗಣನೆ ಶುರುವಾಗಿದೆ. ಇನ್ನು ಈ ದೇಗುಲಕ್ಕೆ ಸೇರಿದ ಜಮೀನ ಸಂಬಂಧ ಕೋರ್ಟ್ ನಲ್ಲಿ ಇದ್ದರು ಕೂಡ ಲಕ್ಷ್ಮೀಕಾಂತ್ ಎಂಬಾತ ರಾತ್ರೋ ರಾತ್ರಿ ಮನೆ ನಿರ್ಮಾಣ ಮಾಡಲು ಮುಂದಾಗಿದ್ದ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಹೆಬ್ಬೂರು ನಾಡಕಚೇರಿಗೆ ಭೇಟಿ ನೀಡಿ ಆರ್ಐ ಅವರನ್ನು ಭೇಟಿ ಮಾಡಲು ಮುಂದಾದರು. ಆದರೆ ಕಚೇರಿಯಲ್ಲಿ ಆರ್ ಐ ಇರದ ಕಾರಣ ಗ್ರಾಮಸ್ಥರು ನಾಡಕಚೇರಿಯಲ್ಲಿದ್ದ ಸಿಬ್ಬಂದಿಯನ್ನು ಹೊರ ಕಳುಹಿಸಿ, ನಾಡಕಚೇರಿಗೆ ಬೀಗ ಜಡಿದು ಪ್ರತಿಭಟನೆ (Protest) ನಡೆಸಿ ಆಕ್ರೋಶ ಹೊರ ಹಾಕಿದರು.
ಇನ್ನು ಗ್ರಾಮಸ್ಥರ ಮನವಿ ಮೇರೆಗೆ ರಾನೇಗೌಡನಪಾಳ್ಯ ಗ್ರಾಮಕ್ಕೆ ಆರ್ಐ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ತಹಶೀಲ್ದಾರ್ ಬಳಿ ಕರೆದುಕೊಂಡು ಹೋಗಿ ಈ ಬಗ್ಗೆ ಚರ್ಚೆ ನಡೆಸಿದ್ರು. ಅಲ್ದೇ ದೇಗುಲದ ಒತ್ತುವರಿ ಜಾಗದ ಸಮಸ್ಯೆ ಇತ್ಯರ್ಥಗೊಳಿಸುವ ಭರವಸೆಯನ್ನು ಆರ್ಐ ನೀಡಿದ್ರು. ಅದೇನೆ ಆಗಲಿ ದೇವಸ್ಥಾನದ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳುತ್ತಿದ್ದ ಆರೋಪ ಇದ್ದು, ಮುಂದಿನ ದಿನಗಳಲ್ಲಿ ಅಧಿಕಾರಿಗಳು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂದು ಕಾದುನೋಡಬೇಕಿದೆ.




