
ಚಿಕ್ಕನಾಯಕನಹಳ್ಳಿ ತಾಲೂಕು ಹೇಳಿ ಕೇಳಿ ತುಮಕೂರು ಜಿಲ್ಲೆಯ ಗಡಿ ತಾಲೂಕು, ಬರದ ತಾಲೂಕು, ಇದ್ರ ಜೊತೆಗೆ ಇದೀಗ ಗಣಿ ಬಾಧಿತ ಪ್ರದೇಶ.. ಇಷ್ಟೆಲ್ಲಾ ಹಣೆಪಟ್ಟಿಕೊಂಡಿರೋ ಚಿಕ್ಕನಾಯಕನಹಳ್ಳಿ ತಾಲೂಕನ್ನು ಅಭಿವೃದ್ಧಿ ಮಾಡಲು ಅದ್ಯಾಕೋ ಜನಪ್ರತಿನಿಧಿಘಲು ಹಾಗೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸ್ತಿದ್ದಾರೆ.
ಹೌದು ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಹೋಬಳಿಯ ಕೆಂಕೆರೆ ಪಂಚಾಯ್ತಿ ವ್ಯಾಪ್ತಿಗೆ ಬರುವ ಗೌಡಗೆರೆ ಗ್ರಾಮವು ಗಣಿಬಾಧಿತ ಪ್ರದೇಶವಾಗಿದ್ದು, ವರ್ಷಗಳೂ ಕಳೆದ್ರು ಕೂಡ ಗ್ರಾಮ ಮಾತ್ರ ಅಭಿವೃದ್ಧಿ ಆಗ್ತಾ ಇಲ್ಲ., ಇದ್ರಿಂದ ಇಲ್ಲಿನ ಜನರು ಇದ್ದು ಇಲ್ಲದಂತೆ ಬದುಕುತ್ತಿದ್ದಾರೆ. ಸ್ವಾತಂತ್ರ ಬಂದು ಇಷ್ಟು ವರ್ಷವಾದ್ರು ಕೂಡ ಇಲ್ಲಿನ ಜನರಿಗೆ ಮೂಲಸೌಕರ್ಯವನ್ನು ಒದಗಿಸುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ. ಗೌಡಗೆರೆ ಗ್ರಾಮದಲ್ಲಿ ಚರಂಡಿ ಸಮಸ್ಯೆಯಿಂದ ಇಲ್ಲಿನ ಜನರು ನಿತ್ಯ ತೊಂದ್ರೆ ಅನುಭವಿಸ್ತಾ ಇದ್ದಾರೆ.
ಗೌಡಗೆರೆ ಗ್ರಾಮದಲ್ಲಿ ಕೆಲಷವು ಕಡೆ ಚರಂಡಿ ಏನೋ ಇದೆ, ಆದ್ರೆ ಆ ಚರಂಡಿಗಳನ್ನು ಸರಿಯಾಗಿ ಕ್ಲೀನ್ ಮಾಡಿಸದೇ ಇರೋದ್ರಿಂದ ಸೊಳ್ಳೆಗಳು ಹೆಚ್ಚಾಹಿದ್ದು ಗ್ರಾಮದ ಜನರು ರೋಗಕ್ಕೆ ತುತ್ತಾಗುತ್ತಿದ್ದಾರೆ. ಅಲ್ದೇ ಚರಂಡಿಗಳು ಕಟ್ಟಿಕೊಂಡಿದ್ದರಿಂದ ದುರ್ವಾಸನೆ ಬೀರ್ತಾ ಇದ್ದು, ಗ್ರಾಮದಲ್ಲಿ ವಾಸ ಮಾಡಲು ಜನರು ಭಯಪಡುವಂತಾಗಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ರು.
ಇನ್ನು ಈ ಬಗ್ಗೆ ಹಲವು ಬಾರಿ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ರು ಯಾರು ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ರು.
ಇನ್ನಾದ್ರು ಅಧಿಕಾರಿಗಳು ಎಚ್ಚೆತ್ತು ಗೌಡಗೆರೆಗ್ರಾಮದ ಜನರಿಗೆ ಮೂಲಭೂತ ಸೌಕರ್ಯವನ್ನು ಒದಗಿಸಿ, ಜನರ ಆರೋಗ್ಯವನ್ನು ಕಾಪಾಡಬೇಕಿದೆ.




