
NATIONAL HIGHWAY ACCIDENT: ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ (national highway) ಸೋಮವಾರ ಬೆಳಗ್ಗೆ ಭೀಕರ ಅಪಘಾತ (Accident)ಸಂಭವಿಸಿದ್ದು, ಇನ್ನು ಈ ಅಪಘಾತದಿಂದಾಗಿ ಭಾರೀ ಟ್ರಾಫಿಕ್ ಜಾಮ್ (Heavy Traffic Jam) ಉಂಟಾಗಿದೆ. ತುಮಕೂರು ಕಡೆಯಿಂದ ಬರುತ್ತಿದ್ದ ಕಂಟೇನರ್ ಲಾರಿಯು(container) ನೆಲಮಂಗಲ ಟೋಲ್ ಗೇಟ್ (Tollgate) ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು ಈ ಅಪಘಾತ (ACCIDENT) ಸಂಭವಿಸಿದೆ.
ಇನ್ನು ಈ ಅಪಘಾತದಿಂದಾಗಿ ಒಂದು ಕಿಲೋ ಮೀಟರ್ ವರೆಗೆ ವಾಹನಗಳು ಸಾಲಾಗಿ ನಿಂತಿದ್ದು, ಟ್ರಾಫಿಕ್ ಜಾಮ್(Traffic Jam) ಉಂಟಾಗಿ ಕೆಲಕಾಲ ಪ್ರಯಾಣಿಕರು ತೊಂದರೆಗೆ ಒಳಗಾಗಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ತಕ್ಷಣವೇ ಸಂಚಾರಿ ಪೊಲೀಸರು (traffic police) ಮತ್ತು ಟೋಲ್ ಸಿಬ್ಬಂದಿ (toll workers) ದೌಡಾಯಿಸಿ, ಲಾರಿಯನ್ನ ತೆರವುಗೊಳಿಸಲು ಹರಸಾಹಸ ಪಟ್ಟಿದ್ದಾರೆ. ಸದ್ಯ ಅಪಘಾತದಲ್ಲಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯಾವುದೇ ಪ್ರಾಣಾಹಾನಿ ಆಗಿಲ್ಲ ಎಂದು ತಿಳಿದುಬಂದಿದೆ.




