Anekal : ಇಬ್ಬರ ಜೊತೆ ಮದುವೆ, ಒಬ್ಬಳ ಜೊತೆ ಎಂಗೇಜ್ಮೆಂಟ್ – ಸಿಕ್ಕಿಬಿದ್ದ ಚಪಲಚನ್ನಿಗರಾಯನಿಗೆ ಪೆಟ್ಟೋ ಪೆಟ್ಟು!

ಇಬ್ಬರ ಜೊತೆಗೆ ಮದುವೆಯಾಗಿ ಮತ್ತೊಬ್ಬಳ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡು ಸಿಕ್ಕಿ ಬಿದ್ದ ಕಾಮುಕನಿಗೆ ಹುಡುಗಿಯ ಮನೆಯವರು ಹಾಗೂ ಮೊದಲ ಪತ್ನಿ ಧರ್ಮದೇಟು ನೀಡಿದ ಘಟನೆ ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮದುವೆ ನೆಪದಲ್ಲಿ ವಂಚನೆ!
ತುಮಕೂರಿನ ಚಿಕ್ಕನಾಯಕನಹಳ್ಳಿ ಮೂಲದ ರವಿ ಈತನೇ ಕಳ್ಳಾಟವಾಡಿ ಸಿಕ್ಕಿಬಿದ್ದಿರೂ ಭೂಪ. ಈತ ವೃತ್ತಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ, ಆದರೆ ಅವನ ನಿಜವಾದ ವೃತ್ತಿ ಮದುವೆ ನೆಪದಲ್ಲಿ ಹೆಣ್ಣುಮಕ್ಕಳನ್ನು ವಂಚಿಸುವುದು ಆಗಿತ್ತು.
“ನಿನ್ನ ಸ್ನೇಹಿತೆಯರನ್ನು ಮನೆಗೆ ಕರೆಸು”
2024ರ ಜನವರಿಯಲ್ಲಿ ರವಿ ವಿವಾಹವಾಗಿದ್ದ. ಆದರೆ ಮದುವೆಯಾದ ಕೆಲವೇ ವಾರಗಳಲ್ಲಿ ಅವನ ನಿಜಸ್ವರೂಪ ಹೊರಬಂದಿತು. ತನ್ನ ಪತ್ನಿಯ ಎದುರಲ್ಲೇ ಇತರ ಮಹಿಳೆಯರ ಬಗ್ಗೆ ಅಶ್ಲೀಲವಾಗಿ ಮಾತನಾಡುತ್ತಿದ್ದ ರವಿ, “ನಿನ್ನ ಸ್ನೇಹಿತೆಯರನ್ನು ಮನೆಗೆ ಕರೆಸು” ಎಂದು ಒತ್ತಾಯಿಸುತ್ತಿದ್ದ. ಇದರ ಜೊತೆಗೆ ವರದಕ್ಷಿಣೆಗಾಗಿ ಹಣ ತರಬೇಕೆಂದು ಒತ್ತಡ ಹಾಕುತ್ತಿದ್ದರಿಂದ ಮೊದಲ ಪತ್ನಿ ಮಾನಸಿಕವಾಗಿ ನರಳುತ್ತಿದ್ದಳು ಎಂದು ಹೇಳಲಾಗಿದೆ.
READ THIS : ಇಂದು ರಾಜಸ್ಥಾನ್ ರಾಯಲ್ಸ್ – ಸನ್ರೈಸರ್ಸ್ ಹೈದರಾಬಾದ್ ನಡುವೆ ಹಣಾಹಣಿ
ರವಿ ರಾಸಲೀಲೆ ಒಂದೆರಡಲ್ಲ
ಮೊದಲ ಪತ್ನಿ ಗರ್ಭಿಣಿಯಾದಾಗಲೂ ರವಿ ತನ್ನ ಚಟವನ್ನು ಬಿಟ್ಟಿಲ್ಲ ತನಗೆ ಮದುವೆಯೇ ಆಗಿಲ್ಲ ಎಂದು ಸುಳ್ಳು ಹೇಳಿಕೊಂಡು, ತನ್ನ ಕುಟುಂಬದವರ ಜೊತೆ ಸುತ್ತಾಡುತ್ತಾ ಹೊಸ ಹುಡುಗಿಯರನ್ನು ಹುಡುಕತೊಡಗಿದ. ರವಿ ಕಳೆದ ಅಕ್ಟೋಬರ್ನಲ್ಲಿ ಮತ್ತೊಬ್ಬ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆ. ಈ ವಿಷಯ ತಿಳಿದ ಮೊದಲ ಪತ್ನಿ ಧೈರ್ಯವಾಗಿ ಆ ಯುವತಿಯ ಮನೆಯವರಿಗೆ ಸತ್ಯವನ್ನು ಹೇಳಿದ್ದಾಳೆ. ಹುಡುಗಿಯ ಮನೆಯವರು ರವಿ ಮನೆಗೆ ನುಗ್ಗಿ, “ನಿನಗೆ ಈಗಾಗಲೇ ಮದುವೆಯಾಗಿದೆಯಲ್ಲ? ನಮ್ಮ ಮಗಳ ಬದುಕು ಹಾಳು ಮಾಡಬೇಡ” ಎಂದು ಥಳಿಸಿದರು.
ಇಬ್ಬರ ಜೊತೆ ಮದುವೆ, ಒಬ್ಬಳ ಜೊತೆ ಎಂಗೇಜ್ಮೆಂಟ್
ಇಷ್ಟಾದರೂ ರವಿಯ ಕಳ್ಳಾಟ ಕಡಿಮೆಯಾಗಿಲ್ಲ. 2025 ಡಿಸೆಂಬರ್ನಲ್ಲಿ ಮತ್ತೊಬ್ಬ ಯುವತಿಯೊಂದಿಗೆ ಮದುವೆಯಾಗಿದ್ದಾನೆ. ‘ನನಗೆ ಮದುವೆಯಾಗಿಲ್ಲ’ ಎಂದು ಸುಳ್ಳು ಹೇಳಿ ಮದುವೆ ಮಾಡಿಕೊಂಡಿದ್ದಾನೆ. ಈ ವಿಚಾರ ತಿಳಿದ ಮೊದಲ ಪತ್ನಿ ತನ್ನ ಕುಟುಂಬದ ವರೊಂದಿಗೆ ರವಿ ಮನೆಗೆ ಹೋಗಿ, ಸ್ಥಳೀಯರ ಸಹಾಯದಿಂದ ಅವನನ್ನು ಹಿಡಿದು ಹಿಗ್ಗಾಮುಗ್ಗವಾಗಿ ಥಳಿಸಿದ್ದಾರೆ. ಪೆಟ್ಟು ತಿಂದ ರವಿ ಪ್ರಾಣ ಬೇಡಿ ಬೇಡಿಕೊಂಡ.
ವಿವಿಧ ಕಾಯ್ದೆಗಳಡಿ ಪ್ರಕರಣ ದಾಖಲು
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿ ಜಿಗಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ರವಿ ಹಾಗೂ ಅವನ ಕುಟುಂಬದ ಕೆಲವರ ವಿರುದ್ಧ ಮೋಸ, ವಂಚನೆ ಮತ್ತು ಮಹಿಳಾ ದೌರ್ಜನ್ಯ ಸೇರಿದಂತೆ ವಿವಿಧ ಕಾಯ್ದೆಗಳಡಿ ಪ್ರಕರಣ ದಾಖಲಿಸಲಾಗಿದೆ. ಘಟನೆ ನಂತರ ರವಿ ತಲೆಮರೆಸಿಕೊಂಡಿದ್ದು, ಪೊಲೀಸರು ಆತನ ಬಂಧನಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ.
MUST WATCH : ಸಚಿವ ಸ್ಥಾನಕ್ಕೆ ದೆಹಲಿ ದಂಡಯಾತ್ರೆ – ಶಾಸಕರ ಬಗ್ಗೆ ಪರಂ ಹೀಗ್ಯಾಕಂದ್ರು..?




