Tiptur : ನಾಪತ್ತೆಯಾಗಿದ್ದ ದಲಿತ ಮಹಿಳೆ ಶವವಾಗಿ ಪತ್ತೆ – ಮಹಿಳೆಯ ಸಾವಿನ ಸುತ್ತ ಅನುಮಾನದ ಹುತ್ತ

ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಮಾರಗೊಂಡನಹಳ್ಳಿಯಲ್ಲಿ ಕಳೆದ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆ ಇಂದು ಶವವಾಗಿ ಪತ್ತೆಯಾಗಿದ್ದಾಳೆ. ಗ್ರಾಮದ ವ್ಯಕ್ತಿಯೋರ್ವರಿಗೆ ಸೇರಿದ ತೆಂಗಿನ ತೋಟದಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಪ್ರತ್ಯಕ್ಷವಾಗಿದ್ದು, ಗ್ರಾಮದ ಜನರು ಬೆಚ್ಚಿಬಿದ್ದಿದ್ದಾರೆ.
ತೋಟದಲ್ಲಿ ದಲಿತ ಮಹಿಳೆ ಶವ ಪತ್ತೆ
Tiptur ತಾಲೂಕಿನ ಮಾರಗೊಂಡನಹಳ್ಳಿ ಗ್ರಾಮದ ದಲಿತ ಮಹಿಳೆಯಾಗಿರುವ ಚೆನ್ನಮ್ಮ, ಗಂಡ ಹಾಗೂ ಮಕ್ಕಳೊಂದಿಗೆ ವಾಸವಾಗಿದ್ರು. ಆದ್ರೆ ಮೇ 7 ರಂದು ಸಂಜೆ 5:30ರ ಸುಮಾರಿಗೆ ಮನೆಯಿಂದ ಹೊರಹೋಗಿದ್ದ ಚೆನ್ನಮ್ಮ ವಾಪಸ್ ಮನೆಗೆ ಬರಲೇ ಇಲ್ಲ. ಕಳೆದ ಮೂರು ದಿನಗಳಿಂದಲೂ ಮಹಿಳೆಗಾಗಿ ಎಲ್ಲಾ ಕಡೆ ಹುಡುಕಾಟ ನಡೆಸಿದ್ರು ಆಕೆಯ ಸುಳಿವು ಮಾತ್ರ ಸಿಕ್ಕಿರಲಿಲ್ಲ. ಆದರೆ ಇಂದು ತೋಟವೊಂದರಲ್ಲಿ ಶವವವಾಗಿ ಪತ್ತೆಯಾಗಿದ್ದು, ಹಲವು ಅನುಮಾನವನ್ನು ಹುಟ್ಟುಹಾಕಿದೆ.
READ THIS : ಸಚಿವ ಡಿ.ಸುಧಾಕರ್ ಅಂತಿಮ ದರ್ಶನದ ವೇಳೆ ಬಿಕ್ಕಿ ಬಿಕ್ಕಿ ಅತ್ತ ಡಿಕೆಶಿ

ಉದ್ದೇಶಪೂರ್ವಕವಾಗಿ ಕೊಲೆ ಆರೋಪ
ಇನ್ನು ತೋಟದಲ್ಲಿ ಮಹಿಳೆಯ ಶವ ಕಂಡು ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದ್ರೆ ಮಹಿಳೆಯನ್ನು ಯಾರೋ ಉದ್ದೇಶಪೂರ್ವಕವಾಗಿ ಕೊಲೆ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಮೃತ ದಲಿತ ಮಹಿಳೆ ಚೆನ್ನಮ್ಮರನ್ನ ಯಾರೋ ಕೊಲೆ ಮಾಡಿದ್ದಾರಾ.? ಅಥವಾ ಜಮೀನಿನಲ್ಲಿ ಯಾವುದಾದ್ರು ವಿಷಜಂತು ಕಡಿದು ಸಾವನ್ನಪ್ಪಿದ್ದಾರಾ..? ಅಥವಾ ಕುಸಿದು ಬಿದ್ದು ಸಾವನ್ನಪ್ಪಿದ್ದಾರಾ ಎಂಬ ಹತ್ತಾರು ಅನುಮಾನಗಳು ಎದ್ದಿವೆ.
ಕೊಲೆಯೋ..? ಸಹಜ ಸಾವೋ?
ಸದ್ಯ ಈ ಸಂಬಂಧ ಕುಟುಂಬಸ್ಥರು ಹೊನ್ನವಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರ ತನಿಖೆ ಬಳಿಕ ದಲಿತ ಮಹಿಳೆಯ ಸಾವು ಕೊಲೆಯೋ ಅಥವಾ ಸಹಜ ಸಾವೋ ಅನ್ನೋದು ಬಯಲಾಗಲಿದೆ.

MUST WATCH : ವಿದ್ಯಾರ್ಥಿಗಳಿಂದ ಪೊಲೀಸರ ಮೇಲೆ ಹಲ್ಲೆ.! ಸೈಲೆನ್ಸರ್ ವಿಚಾರಕ್ಕೆ ನಡೆದ ಘಟನೆ




