
BIGG BOSS SEASON 12 : ರಿಯಾಲಿಟಿ ಶೋಗಳ (Reality Show) ರಾಜ ಎಂಬ ಹೆಗ್ಗಳಿಕೆ ಪಡೆದ ಬಿಗ್ಬಾಸ್ ಕನ್ನಡ (Bigg Boss Kannada) ಈಗ ತನ್ನ 12ನೇ ಆವೃತ್ತಿಗೆ ಕಾಲಿಟ್ಟಿದೆ. ಇನ್ನು ಕೆಲವೇ ಕ್ಷಣಗಳಲ್ಲಿ ಬಿಗ್ಬಾಸ್ ಸೀಸನ್ 12ಗೆ ಅದ್ದೂರಿ ಚಾಲನೆ ಸಿಗಲಿದೆ. ಈ ಬಾರಿ ಶೋ ಅತ್ಯಂತ ವಿಶಿಷ್ಟವಾಗಿದ್ದು, ಪ್ರಾರಂಭಕ್ಕೂ ಮುನ್ನವೇ ಬಿಗ್ಬಾಸ್ ಮನೆಯ ವಿನ್ಯಾಸದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗಿವೆ.
ಇನ್ನು ಬಿಗ್ಬಾಸ್ ಮನೆ ಈ ಬಾರಿ ಸಂಪೂರ್ಣವಾಗಿ ಮೈಸೂರು ಅರಮನೆ ಥೀಮ್ (Mysuru Palace theme )ನಲ್ಲಿ ವಿನ್ಯಾಸಗೊಂಡಿದ್ದು, ಕನ್ನಡಿಗರ ಹೆಮ್ಮೆ, ಪರಂಪರೆ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಬಿಗ್ಬಾಸ್ ಮನೆಯಲ್ಲಿ ಈ ಬಾರಿ ಮೈಸೂರು ಅರಮನೆಯ ವೈಭವದ ಥೀಮ್, ಅಂಬಾರಿ ಹೊತ್ತ ಆನೆಗಳ ಭಿತ್ತಿ ಚಿತ್ರಣ, ವಿಜಯನಗರ ಸಾಮ್ರಾಜ್ಯದ ಕಲ್ಲಿನ ರಥ, ಕರಾವಳಿಯ ಕಂಬಳ ರೇಸ್ ಚಿತ್ರಣ, ಚನ್ನಪಟ್ಟಣ ಬೊಂಬೆಗಳ ಅಲಂಕರಣ, ಭರತನಾಟ್ಯ, ಡೊಳ್ಳುಕುಣಿತ ಮತ್ತು ನಾಡಿನ ಕಲಾ ಸಂಸ್ಕೃತಿಯ ಪ್ರತೀಕಗಳು ಬಗ್ಗೆ ಚಿತ್ರಗಳನ್ನ ಬಿಡಿಸಲಾಗಿದೆ.
ಈ ಬಾರಿಗೆ ಬಿಗ್ಬಾಸ್ ಸೆಟ್ ಡಿಸೈನ್ (SET Design) ಆಧುನಿಕತೆಯೊಂದಿಗೆ ಸಾಂಪ್ರದಾಯಿಕ ಸೊಗಡನ್ನು ಮೆರೆಯುತ್ತದೆ. ಬಿಗ್ಬಾಸ್(BIGG BOSS) ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ಮಟ್ಟಿಗೆ ಕನ್ನಡ ಸಂಸ್ಕೃತಿ, ಪರಂಪರೆ, ಭಾಷೆಗೆ ಆದ್ಯತೆ ನೀಡಿದ ವಿನ್ಯಾಸ ನೋಡಿ, ಅಭಿಮಾನಿಗಳು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ. ಈಗಿನ ಸೀಸನ್ಗೂ ಕೂಡ ಕಿಚ್ಚ ಸುದೀಪ್ (Kiccha Sudeep) ನಿರೂಪಣೆಯಲ್ಲಿ ಶೋ ನಡೆಯಲಿದ್ದು, ಅವರ ನಿರೂಪಣೆಯೂ ಶೋಗೆ ಮತ್ತಷ್ಟು ಬಣ್ಣ ಸೇರ್ಪಡಿಸುತ್ತದೆ. ಒಟ್ನಲ್ಲಿ ಈ ಬಾರಿ ಹೊಸ ರೀತಿಯ ಬಿಗ್ಬಾಸ್ ಮನೆಯನ್ನ ಕಣ್ತುಂಬಿಕೊಳ್ಳಬಹುದು




