
ASIA CUP FINAL 2025 : ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಏಷ್ಯಾಕಪ್ ಫೈನಲ್ಗೆ ಕೆಲವೇ ಗಂಟೆಗಳು ಬಾಕಿ ಉಳಿದಿರುವ ಈ ಸಂದರ್ಭದಲ್ಲಿ, ದುಬೈ ಪೊಲೀಸರು ಕಠಿಣ ಭದ್ರತಾ ಕ್ರಮಗ ಳನ್ನು ಜಾರಿಗೆ ತಂದಿದ್ದಾರೆ.
ಪಂದ್ಯಕ್ಕೆ ಟಿಕೆಟ್ಗಳೆಲ್ಲವೂ ಈಗಾಗಲೇ ಮಾರಾಟವಾಗಿದ್ದು, ಉಭಯ ದೇಶಗಳ ಕ್ರಿಕೆಟ್ ಅಭಿಮಾನಿಗಳು ಕ್ರೀಡಾಂಗಣದಲ್ಲಿ ಭರ್ಜರಿ ಕಾದಾಟದ ನಿರೀಕ್ಷೆಯಲ್ಲಿ ತುದಿಗಾಲಲ್ಲಿ ನಿಂತಿದ್ದಾರೆ.
ಭದ್ರತಾ ಕ್ರಮಗಳ ಪ್ರಮುಖ ಅಂಶಗಳು:
- ಪಂದ್ಯದ ಮೂರು ಗಂಟೆಗಳ ಮುಂಚಿತವಾಗಿ ಆಗಮಿಸುವುದು ಕಡ್ಡಾಯ.
- ಪ್ರತಿ ಮಾನ್ಯ ಟಿಕೆಟ್ಗೆ ಒಂದು ಪ್ರವೇಶ ಮಾತ್ರ; ಮರುಪ್ರವೇಶಕ್ಕೆ ಅವಕಾಶ ಇಲ್ಲ.
- ಪಟಾಕಿ, ಲೇಸರ್ ಪಾಯಿಂಟರ್, ಆಯುಧಗಳು, ರಿಮೋಟ್ ಸಾಧನಗಳು ನಿಷೇಧ.
- ಸೆಲ್ಫಿ ಸ್ಟಿಕ್, ಟ್ರೈಪಾಡ್, ದೊಡ್ಡ ಛತ್ರಿಗಳು ಮತ್ತು ಅನಧಿಕೃತ ಕ್ಯಾಮೆರಾ ಉಪಕರಣಗಳ ನಿರ್ಬಂಧ.
- ದ್ವೇಷ, ಜಾತಿ ಪ್ರಚೋದನೆ ಅಥವಾ ಸುವ್ಯವಸ್ಥೆಗೆ ಧಕ್ಕೆ ತಂದರೆ ಕಠಿಣ ಶಿಕ್ಷೆ ಎಚ್ಚರಿಕೆ.
ಇತ್ತೀಚೆಗಿನ ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಭಾರತ ನಡೆಸಿದ ಪ್ರತೀಕಾರಾತ್ಮಕ ‘ಆಪರೇಷನ್ ಸಿಂಧೂರ್’ ಹಿನ್ನೆಲೆ ಹಿನ್ನೆಲೆಯಲ್ಲಿ ಈ ಫೈನಲ್ಗೆ ಹೆಚ್ಚಿದ ಉದ್ವಿಗ್ನತೆ ಭದ್ರತಾ ಕ್ರಮಗಳನ್ನು ಗಂಭೀರವಾಗಿಸಿದೆ.
ಅಧಿಕಾರಿಗಳು ಪಂದ್ಯ ಸುರಕ್ಷಿತ ಹಾಗೂ ಶಿಸ್ತುಬದ್ಧವಾಗಿ ನಡೆಯಲು ಎಲ್ಲಾ ರೀತಿಯ ಮಾರ್ಗಸೂಚಿಗಳ ನ್ನು ಪ್ರಕಟಿಸಿದ್ದಾರೆ. ಅಭಿಮಾನಿಗಳ ಸಹಕಾರ ಹಾಗೂ ಜವಾಬ್ದಾರಿಯುತ ವರ್ತನೆ ಅವಶ್ಯಕವಾಗಿದೆ.




