
ಜನನಾಯಕ, ಅಪ್ಪಟ ಜನನಾಯಕ.. ಬಡವರ ಪಾಲಿನ ಭಾಗ್ಯದಾತ, ತಾಯಿ ಹೃದಯಿ ಕ್ಷೇತ್ರ ಪಾಲಕ, ತುಮಕೂರು ಗ್ರಾಮಾಂತರ ಕ್ಷೇತ್ರದ ಧಣಿ ಅದು ಡಿ.ಸಿ ಗೌರಿಶಂಕರ್ ಅವರು.. ಅಪ್ಪಟ ರಾಜಕಾರಣಿ, ಗ್ರಾಮಾಂತರ ಕ್ಷೇತ್ರದ ಮನೆ ಮಗನಾಗಿ ಕ್ಷೇತ್ರದ ಜನಕ್ಕಾಗಿ ಸದಾ ದುಡಿಯುವ ಮನಸ್ಸಿರೋ ನಿಶ್ಚಕ್ಮಶ ಸಹೃದಯಿ ಅಂದ್ರೆ ಅದು ಡಿ.ಸಿ ಗೌರಿಶಂಕರ್..
ಮಾಜಿ ಸಚಿವ ಸಿ.ಚೆನ್ನಿಗಪ್ಪ ಅವರ ಪುತ್ರ ಡಿ.ಸಿ ಗೌರಿಶಂಕರ್ ಓದಿದ್ದು ಬಿ.ಎಸ್ಸಿ ಆಗಿದ್ರು ಕೂಡ, ಚಿಕ್ಕ ವಯಸ್ಸಿನಲ್ಲೇ ರಾಜಕೀಯ ರಂಗ ಪ್ರವೇಶ ಮಾಡಿದ್ರು… ಆರಂಭದಲ್ಲಿ ಉದ್ಯಮಿಯಾಗಿ,ಕೃಷಿಕರಾಗಿದ್ದ ಗೌರಿಶಂಕರ್ ಅವರು ರಾಜಕೀಯ ರಂಗ ಪ್ರವೇಶಿಸಿದ್ದೇ ರೋಚಕವಾಗಿದೆ. ತಂದೆಯ ಒತ್ತಾಸೆಯೋ, ಭಲವಂತವೋ… ರಾಜಕೀಯ ರಂಗದ ಮೇಲಿನ ವ್ಯಾಮೋಹವೋ ಏನೋ ಬಿಎಸ್ಸಿ ವ್ಯಾಸಾಂಗ ಮಾಡಿದ ಗೌರಿಶಂಕರ್ ಅವರು ರಾಜಕೀಯ ರಂಗ ಪ್ರವೇಶಿಸಿದ್ರು. ಆರಂಭದಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯರಾಗುವ ಮೂಲಕ ಗೌರಿಶಂಕರ್ ಅವರು ರಾಜಕೀಯ ರಂಗ ಪ್ರವೇಶ ಮಾಡಿದ್ದು, ಪಕ್ಷ ಸಂಘಟನೆ ಹಾಗೂ ಜನರಿಗಾಗಿ ಮಾಡುವ ಕೆಲಸದಿಂದಲೇ ಶಾಸಕರಾಗಿ ಆಯ್ಕೆಯಾದರು.

ಇನ್ನು 2004ರಲ್ಲಿ ತ್ಯಾಮಗೊಂಡಲ ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ಸ್ಪರ್ಧಿಸಿದ ಗೌರಿಶಂಕರ್ ಅವರು ಭಾರೀ ಅಂತರದಲ್ಲಿ ಜಯಗಳಿಸಿದ್ರು. ಇದಾದ ಬಳಿಕ 2008ರಲ್ಲಿ ಮಧುಗಿರಿ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಮೊಟ್ಟ ಮೊದಲ ಬಾರಿ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿ ವಿಧಾನಸಭೆಯನ್ನು ಪ್ರವೇಶಿಸಿದ್ರು. ಬಳಿಕ 2013ರಲ್ಲಿ ನಡೆದ ವಿಧಾನಸಭಾ ಚುನಾವಣೆ ವೇಳೆ ಮಧುಗಿರಿ ಬಿಟ್ಟು ಸ್ವಕ್ಷೇತ್ರ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡ್ತಾರೆ.. ಆದ್ರೆ ಕೇವಲ 750 ಮತಗಳ ಅಂತರದಿಂದ ಗೌರಿಶಂಕರ್ ಸೋಲನ್ನು ಅನುಭವಿಸಿದ್ರು. ಆದ್ರೆ ಈ ಸೋಲಿಗೆ ಸವಾಲೆಸೆದ ಗೌರಿಶಂಕರ್ ಪುನಃ 2018ರಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಸ್ಪರ್ಧಿಸಿ ಬರೋಬ್ಬರಿ 82 ಸಾವಿರದ 740 ಮತಗಳನ್ನು ಪಡೆದು ಭರ್ಜರಿ ಜಯಭೇರಿ ಗಳಿಸಿದ್ರು. ಆದ್ರೆ 2023ರಲ್ಲಿ ಮತ್ತೆ ತುಮಕೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಿದ ಅವರು ದುರಾದೃಷ್ಟವಶಾತ್ ಜನರು ಕೈಹಿಡಿಯಲಿಲ್ಲ… ಶಾಸಕ ಸುರೇಶ್ ಗೌಡ ಅವರ ಮುಂದೆ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದ್ರು. ಸೋಲನ್ನು ಕೂಡ ಗೌರಿಶಂಕರ್ ಅವರು ನಗುಮೊಗದಿಂದಲೇ ಸ್ವೀಕರಿಸಿದ್ರು. ಸೋತಿದ್ರು ಕೂಡ ಇಂದು ಕೂಡ ಗ್ರಾಮಾಂತರ ಕ್ಷೇತ್ರ ಮನೆ ಮಗ ಅಂತಾನೇ ಜನರು ಈಗಲೂ ಕರೆಯುತ್ತಾರೆ… ಅಂದ್ರೆ ಜನರು ಗೌರಿಶಂಕರ್ ಮೇಲೆ ಅದೆಷ್ಟು ಅಭಿಮಾನ ಇದೆ ಅಂತಾ ಇದ್ರಲ್ಲೇ ಗೊತ್ತಾಗುತ್ತೆ…

ಗೌರಿಶಂಕರ್ ಅವರು ಮಾಡುತ್ತಿರೋ ಜನ ಸೇವೆಗಾಗಿ ಕ್ಷೇತ್ರದ ಜನರು ಪ್ರಜಾಶಕ್ತಿ ಟಿವಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು ಹೀಗೆ..1
ನಿಕಟಪೂರ್ವ ಶಾಸಕರಾದ ಗೌರಿಶಂಕರ್ ಅವರು ಚುನಾವಣೆಯಲ್ಲಿ ಸೋತಿದ್ರು ಕೂಡ ಎಂದಿಗೂ ಜನರ ಮೇಲೆ ಪ್ರೀತಿ, ಕಾಳಜಿ ಮಾತ್ರ ಕಡಿಮೆ ಆಗೇ ಇಲ್ಲ… ಸದಾ ಜನರಿಗಾಗಿಯೇ ತಮ್ಮ ಜೀವನವನ್ನು ಮುಡಿಪಿಟ್ಟಿರೋ ಗೌರಿಶಂಕರ್ ಅವರು ಮನೆ ಬಳಿ ಯಾರೇ ಬಂದ್ರು ಎಂದಿಗೂ ಬರೀ ಕೈ ಯಿಂದ ಹೋಗಿದ ದಿನವೇ ಇಲ್ಲ… ಬಡವರ ಬಂಧು, ದೀನ ದಲಿತರ ನಾಯಕ, ಕ್ಷೇತ್ರದ ಜನರ ಕಾಯೋ ಕ್ಷೇತ್ರಪಾಲಕರಾಗಿ ಗೌರಿಶಂಕರ್ ಅವರು ಸದಾ ನಗುತ್ತಲೇ ಜನರಿಗಾಗಿ ದುಡಿಯುತ್ತಾ ಬಂದಿದ್ದಾರೆ. ಕ್ಷೇತ್ರದ ಜನರಿಗಾಗಿ ಮಾಡಿದ ಕೆಲಸದಿಂದಾಗಿ ಕ್ಷೇತ್ರದ ಜನರೇ ಜನ ನಾಯಕ ಅಂತಾ ಕರೆಯುತ್ತಿದ್ದಾರೆ… ಗೌರಿಶಂಕರ್ ಅವರ ಸಹನೆ, ತ್ಯಾಗ, ತಂದೆ ಚೆನ್ನಿಗಪ್ಪ ಅವರ ಕನಸು, ಕ್ಷೇತ್ರದ ಜನರ ಬಯಕೆಯಂತೆ ಮುಂದಿನ ದಿನಗಳಲ್ಲಿ ಬರುವ ಚುನಾವಣೆಯಲ್ಲಿ ಗೌರಿಶಂಕರ್ ಸೋಲಿಲ್ಲದ ಸರದಾರರಾಗಿ ಜಯಶೀಲರಾಗಿ ಕ್ಷೇತ್ರದ ಜನರಿಗಾಗಿ ಮತ್ತಷ್ಟು ಕೆಲಸ ಮಾಡುವಂತಾಗಲಿ ಎಂಬುದು ಜನರ ಹಾಗೂ ಪ್ರಜಾಶಕ್ತಿ ಟಿವಿಯ ಆಶಯವಾಗಿದೆ.




