
ನವರಾತ್ರಿ ಹಬ್ಬಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ (PM Modi) ಅವರು ಕನ್ನಡದ ಜನಪ್ರಿಯ ಲಕ್ಷ್ಮೀ ಭಕ್ತಿಗೀತೆ – “ಕಮಲದ ಮೊಗದೋಳೆ, ಕಮಲದ ಕಣ್ಣೋಳೆ…” ಎಂಬ ಹಾಡನ್ನು ತಮ್ಮ X (ಹಳೆಯ ಟ್ವಿಟರ್) (TWEET) ಖಾತೆಯಲ್ಲಿ ಹಂಚಿಕೊಳ್ಳೋ(Share) ಮೂಲಕ ವಿಶ್ (Wish) ತಿಳಿಸಿದ್ದಾರೆ.
ಈ ಹಾಡು 1984ರಲ್ಲಿ ಬಿಡುಗಡೆಯಾದ ‘ಹೊಸ ಇತಿಹಾಸ’ ಸಿನಿಮಾದಿಂದ ಅಪಾರ ಜನಪ್ರಿಯತೆ ಗಳಿಸಿದ್ದ ಭಕ್ತಿಗೀತೆ. ಕನ್ನಡದ ಹಿರಿಯ ಚಿಂತನೆಗಾರ ಚಿ. ಉದಯಶಂಕರ್ ಈ ಗೀತೆಯ ಸಾಹಿತ್ಯ ಬರೆದು, ಎಸ್. ಜಾನಕಿ ಅವರು ಹೃದಯಸ್ಪರ್ಶಿಯಾಗಿ ಹಾಡಿದ್ದಾರೆ. ಇನ್ನು ಈ ಹಾಡನ್ನು ಹಂಚಿಕೊಂಡ ಪ್ರಧಾನಿ ಮೋದಿ, “ದೇವಿಯು ಭಕ್ತರಿಗೆ ಸುಖ, ಸಂತೋಷ, ಸಮೃದ್ಧಿ ಮತ್ತು ಅದೃಷ್ಟವನ್ನು ಕರುಣಿಸಲಿ”ಎಂದು ಪೋಸ್ಟ್ (Post) ಮಾಡುವ ಮೂಲಕ ಶುಭಾಶಯ ತಿಳಿಸಿದ್ದಾರೆ.
ನವರಾತ್ರಿ (Navaratri) ಸಂದರ್ಭದಲ್ಲಿ ಈ ಹಾಡು(Song) ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ಎಂದು ಪ್ರಧಾನಿ ಮೋದಿ (PM Modi) ಅವರಿಗೆ ಅನೇಕರು ಕಾಮೆಂಟ್ಸ್(Comments) ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.




