
KSRTC BUS Ticket PRICE HIKE : ಜನಪರ ಗ್ಯಾರಂಟಿ ಯೋಜನೆಗಳ ಸರ್ಕಾರ ಎನ್ನುತ್ತಿರುವ ರಾಜ್ಯ ಸರ್ಕಾರ, ದಸರಾ ಹಬ್ಬದ ಪ್ರಯುಕ್ತ ರಾಜ್ಯದ ಜನತೆಗೆ ಮತ್ತೊಂದು ‘ಗಿಫ್ಟ್’ ನೀಡಿದೆ. ಹೌದು, ಮೈಸೂರಿನ ದಸರಾ (MYSURU DASARA) ಉತ್ಸವ ವೀಕ್ಷಿಸಲು ಸಾವಿರಾರು ಮಂದಿ ಬಯಸುತ್ತಿರುವ ಸಂದರ್ಭದಲ್ಲಿ, ಕೆಎಸ್ಆರ್ಟಿಸಿ (KSRTC) ಬಸ್ ಟಿಕೆಟ್ ದರವನ್ನು ಬರೋಬ್ಬರಿ ₹20 ರಷ್ಟು ಏರಿಕೆ ಮಾಡಲಾಗಿದೆ. ಈ ನಿರ್ಧಾರ ಇದೀಗ ಪ್ರಯಾಣಿಕರ ಕೆಂಗಣ್ಣಿಗೆ ಕಾರಣವಾಗಿದೆ.
| ಬಸ್ ಸೇವೆ (BUS) | ಹಳೆ ದರ (OLD PRICE) | ಹೊಸ ದರ (NEW PRICE) |
| ವೇಗದೂತ (Karnataka Sarige) | ₹170 | ₹190 |
| ತಡೆರಹಿತ ಸಾರಿಗೆ (Non-Stop) | ₹210 | ₹240 |
| ರಾಜಹಂಸ (Rajahamsa) | ₹270 | ₹290 |
| ಐರಾವತ (Airavat) | ₹430 | ₹450 |
| ಐರಾವತ ಕ್ಲಬ್ ಕ್ಲಾಸ್ | ₹440 | ₹460 |
ದಸರಾ ವೇಳೆ ಮೈಸೂರು (MYSURU) ಮಾರ್ಗದಲ್ಲಿ ಬಸ್ ಸೇವೆಗೆ ಹೆಚ್ಚು ಬೇಡಿಕೆ ಇರುವುದನ್ನು ನೆಪವಾಗಿ ಬಳಸಿಕೊಂಡಿರುವ ಸಾರಿಗೆ ಇಲಾಖೆ (TRANSPORT DEPARTMENT ), ಈ ದರ ಏರಿಕೆಯನ್ನು ದಸರಾ ಮುಗಿಯುವವರೆಗೂ ಮುಂದುವರಿಸಲು ನಿರ್ಧರಿಸಿದೆ. ಸರ್ಕಾರ ಸಾಲು ಸಾಲು ರಜೆ, ದಸರಾ ಹಬ್ಬದ ಸಮಯದಲ್ಲಿ ಸಾರ್ವಜನಿಕರ ಜೇಬಿಗೆ ಹೊಡೆತ ನೀಡುತ್ತಿರುವುದು ವಿಪರ್ಯಾಸ.




