ಹೈವೇ Dhaba ಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳ ದಾಳಿ – ಕಳಪೆ ಗುಣಮಟ್ಟದ ಆಹಾರ ಪೂರೈಕೆ

ಕಳಪೆ ಗುಣಮಟ್ಟದ ಆಹಾರ ಪೂರೈಕೆ ಬಗ್ಗೆ ಕೇಳಿ ಬಂದ ದೂರಿನ ಬೆನ್ನಲ್ಲೇ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ನೆಲಮಂಗಲ ತುಮಕೂರು ರಸ್ತೆಯಲ್ಲಿರುವ ಹೈವೇ ಡಾಬಾಗಳ ಮೇಲೆ ದಾಳಿ ನಡೆಸಿದ್ದಾರೆ.
ಕಳಪೆ ಗುಣಮಟ್ಟದ ಆಹಾರ ಪೂರೈಕೆ ಬಗ್ಗೆ ದೂರು!
ಹೌದು. ನೆಲಮಂಗಲ-ಕುಣಿಗಲ್, ನೆಲಮಂಗಲ-ತುಮಕೂರು ಹಾಗೂ ತುಮಕೂರು-ಚಿತ್ರದುರ್ಗ ಹೈವೇ ಮಾರ್ಗಗಳಲ್ಲಿರುವ ಡಾಬಾಗಳಿಗೆ ಫುಡ್ ಸೇಫ್ಟಿ ಅಧಿಕಾರಿಗಳು ಧಿಡೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳಪೆ ಗುಣಮಟ್ಟದ ಆಹಾರ ಪೂರೈಕೆ ಬಗ್ಗೆ ಕೇಳ ಬಂದ ದೂರಿನ ಬೆನ್ನಲ್ಲೇ ಅಧಿಕಾರಿಗಳು ಈ ದಾಳಿ ನಡೆಸಿದ್ದು, ಡಾಬಾಗಳಲ್ಲಿ ಸ್ವಚ್ಛತೆ ಮತ್ತು ಆಹಾರ ತಯಾರಿ ವಿಧಾನಗಳನ್ನ ಸೂಕ್ಷ್ಮವಾಗಿ ಪರಿಶೀಲಿಸಿದ್ದಾರೆ.
READ THIS : ಸಾಂಬಾರ್ ಮಾಡಿಲ್ಲ ಅಂತ ಅಪ್ಪ ಬೈದಿದ್ದಕ್ಕೆ ಯುವತಿ ಆತ್ಮಹತ್ಯೆ..!!

41 ಡಾಬಾಗಳಿಗೆ ಧಿಡೀರ್ ಭೇಟಿ
ಒಟ್ಟು 41 Dhaba ಗಳಿಗೆ ಏಕಾಏಕಿ ಭೇಟಿ ನೀಡಿದ ಅಧಿಕಾರಿಗಳು, ನಿಯಮಉಲ್ಲಂಘನೆಮಾಡಿದ ಹಲವಾರು ಡಾಬಾಗಳನ್ನು ಪತ್ತೆಹಚ್ಚಿದ್ದಾರೆ. ಈ ವೇಳೆ 16 ಆಹಾರ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಹಳೆಯ ಆಹಾರ ಸಂಗ್ರಹಣೆ, ಅಸ್ವಚ್ಛ ಪರಿಸರ ಸೇರಿದಂತೆ ಅನೇಕ ಲೋಪಗಳು ಬೆಳಕಿಗೆ ಬಂದಿವೆ.

ಆಹಾರ ಸುರಕ್ಷತೆ ಕೈಗೊಳ್ಳದ ಡಾಬಾಗಳ ವಿರುದ್ಧ ದಂಡ ಪ್ರಯೋಗ
ಇನ್ನು ಆಹಾರ ಸುರಕ್ಷತಾ ನಿಯಮಗಳನ್ನು ಪಾಲಿಸದ ಡಾಬಾಗಳಿಗೆ ದಂಡ ವಿಧಿಸಲಾಗಿದ್ದು, ಸುಮಾರು 1 ಲಕ್ಷ 45 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ಇನ್ನು ನೆಲಮಂಗಲ-ತುಮಕೂರು ರಸ್ತೆಯಲ್ಲಿರುವ ಸುಮಾರು 8 ಡಾಬಾಗಳಿಗೆ 30 ಸಾವಿರ ರೂಪಾಯಿ ದಂಡ ಹಾಕಲಾಗಿದೆ.

MUST WATCH : RAJANNA ಅವರೆಲ್ಲ ಸಚಿವರಾಗಿ ಹೋಗಿದ್ದಾರೆ – ನಮಗೂ ಮಂತ್ರಿಗಿರಿ ಕೊಡಲಿ ಎಂದ SHADAKSHARI




