
ನಾಡಹಬ್ಬ ದಸರಾ ಅಂದ್ರೆ ಜನರಿಗೆ ಥಟ್ ಅಂತಾ ನೆನಪಾಗೋದು ಮೈಸೂರು… ಸಾಂಸ್ಕೃತಿಕ ನಗರಿ ಮೈಸೂರಿನಂತೆ ತುಮಕೂರಿನಲ್ಲೂ ದಸರಾ ಆಚರಣೆ ಮಾಡಲಾಗ್ತಿದೆ. ಮೈಸೂರು ಮಾದರಿಯಲ್ಲೇ ಕಳೆದ ವರ್ಷದಿಂದ ತುಮಕೂರಿನಲ್ಲಿ ದಸರಾ ನಡೆಸಲಾಗುತ್ತಿದ್ದು, ಕಳೆದ ಬಾರಿಗಿಂತ ಈ ಬಾರಿಯೂ ಮತ್ತಷ್ಟು ಅದ್ಧೂರಿಯಾಗಿ ದಸರಾವನ್ನು ನಡೆಸಲಾಗ್ತಿದೆ. ಇನ್ನು ಕಳೆದ ಆರು ದಿನಗಳಿಂದಲೂ ತುಮಕೂರಿನಲ್ಲಿ ದಸರಾ ಅಂಗವಾಗಿ ನಾನಾ ಕಾರ್ಯಕ್ರಮಗಳನ್ನು ನಡೆಸಲಾಗ್ತಿದೆ.

ಇನ್ನು ಮೈಸೂರಿನಂತೆ ತುಮಕೂರಿನಲ್ಲಿ ದಸರಾ ಅಂಗವಾಗಿ ಮೊಟ್ಟ ಮೊದಲ ಬಾರಿಗೆ ಪಂಜಿನ ಕವಾಯತನ್ನು ಆಯೋಜನೆ ಮಾಡಲಾಗಿದೆ, ಇಂದು ಸಂಜೆ ನಗರದ ಮಹಾತ್ಮಗಾಂಧಿ ಸ್ಟೇಡಿಯಂನಲ್ಲಿ ಪಂಜಿನ ಕಾವಯತು ಆಯೋಜನೆ ಮಾಡಲಾಗಿದ್ದು, ಜಿಲ್ಲಾಡಳಿತ ಫುಲ್ ಅಲರ್ಟ್ ಆಗಿದೆ. ಸುಮಾರು 9 ಸಾವಿರ ಮಂದಿಗೆ ಪಂಜಿನ ಕವಾಯತು ವೀಕ್ಷಣೆ ಮಾಡಲು ಅವಕಾಶ ನೀಡಲಾಗಿದ್ದು, ಪಾಸ್ ಇದ್ದವರು ಮಾತ್ರ ಪಂಜಿನ ಕವಾಯತು ವೀಕ್ಷಣೆಗೆ ಎಂಟ್ರಿ ನೀಡಲಾಗುತ್ತಿದೆ, ಇನ್ನು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಗೃಹ ಸಚಿವ ಪರಮೇಶ್ವರ್, ಎಸ್ಪಿ ಅಶೋಕ್, ಡಿಸಿ ಶುಭಕಲ್ಯಾಣ್ ಹಾಗೂ ಜಿಲ್ಲಾ ಪಂಚಾಯ್ತಿ ಸಿಇಒ ಜಿ ಪ್ರಭು ಸೇರಿ ಅಧಿಕಾರಿಗಳು ಮಹಾತ್ಮ ಗಾಂಧಿ ಸ್ಟೇಡಿಯಂಗೆ ಭೇಟಿ ನೀಡಿ ವೀಕ್ಷಣೆ ನಡೆಸಿದ್ರು. ಈ ವೇಳೆ ಮಾತನಾಡಿದ ಸಚಿವ ಪರಮೇಶ್ವರ್, ಪಾಸ್ ಇದ್ದವರು ಮಾತ್ರ ಪಂಜಿನ ಕವಾಯತ ವೀಕ್ಷಿಸಲು ಬನ್ನಿ ಎಂದು ಕರೆ ನೀಡಿದ್ರು
ಇಂದು ಸಂಜೆ 7 ಗಂಟೆಯಿಂದ ಜಿಲ್ಲಾ ಪೊಲೀಸ್ ಇಲಾಖೆಯ ನೇತೃತ್ವದಲ್ಲಿ ಪಂಜಿನ ಕವಾಯತು ನಡೆಯಲಿದ್ದು, 250 ವಿದ್ಯಾರ್ಥಿಗಳಿಂದ ಪಂಜಿನ ಕವಾಯತು ಪ್ರದರ್ಶನ ಮಾಡಲಿದ್ದಾರೆ. ವಿದ್ಯಾರ್ಥಿಗಳಿಗೆ ಸುರಕ್ಷಿತ ಕ್ರಮವಾಗಿ ಟ್ರಯಲ್ ಶೂಟ್ & ಗಾಗಲ್ ವಿತರಣೆ ಮಾಡಲಾಗಿದೆ, ಪಂಜಿನ ಕವಾಯತು ವೀಕ್ಷಣೆಗೆ ತುಮಕೂರಿಗರು ಕಾತುರದಿಂದ ಕಾಯ್ತಾ ಇದ್ದು, ಸಾವಿರಾರು ಮಂದಿ ಭಾಗಿಯಾಗುವ ಸಾದ್ಯತೆ ಇದೆ. ಅಲ್ದೇ ಪಂಜಿನ ಕವಾಯತು ವೀಕ್ಷಣೆಗೆ ಬರುವರನ್ನು ಸ್ಟೇಡಿಯಂಗೆ ಒಳಗೆ ಬಿಡಲು ಮೂರು ಗೇಟ್ಗಳನ್ನು ತೆರೆಯಲಾಗಿದೆ. ಜೊತೆಗೆ ಪಂಜಿನ ಕಾಯತು ವೀಕ್ಷಣೆಗೆ ಬರುವ ಜನರ ವಾಹನ ಪಾರ್ಕಿಂಗ್ಗೆ ಪೊಲೀಸ್ ಇಲಾಖೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.




