
MITHUN MANHAS : ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಗೆ ನೂತನ ಅಧ್ಯಕ್ಷರಾಗಿ ಮಾಜಿ ದೆಹಲಿ ಕ್ರಿಕೆಟಿಗ ಮಿಥುನ್ ಮನ್ಹಾಸ್ ಅವರನ್ನು ಇಂದು ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ (AGM) ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಸೌರವ್ ಗಂಗೂಲಿ ಹಾಗೂ ರೋಜರ್ ಬಿನ್ನಿ ನಂತರ ಈ ಪದವಿಗೆ ಆಯ್ಕೆಯಾದ ಸತತ ಮೂರನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಮನ್ಹಾಸ್ ಪಾತ್ರರಾಗಿದ್ದಾರೆ.
ಇದಕ್ಕೂ ಹೆಚ್ಚಾಗಿ, ಜಮ್ಮು ಮತ್ತು ಕಾಶ್ಮೀರದಿಂದ ಬಿಸಿಸಿಐ ಅಧ್ಯಕ್ಷರಾಗಿರುವ ಪ್ರಥಮ ವ್ಯಕ್ತಿಎಂಬ ಗಮನಾರ್ಹ ಸಾಧನೆ ಕೂಡ ಮಿಥುನ್ ಮನ್ಹಾಸಾವರ ಪಾಲಾಗಿದೆ. ಎಸ್ಸಿಎ ಅಧ್ಯಕ್ಷ ರಘುರಾಮ್ ಭಟ್ ಅವರು ಖಜಾಂಜಿಯಾಗಿ ಹುದ್ದೆಗೆ ಅವಿರೋಧವಾಗಿ ಆಯ್ಕೆಯಾದರು.
ಅಕ್ಟೋಬರ್ 12, 1979 ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಜನಿಸಿದ ಮನ್ಹಾಸ್, ರಾಷ್ಟ್ರೀಯ ತಂಡಕ್ಕಾಗಿ ಒಂದೇ ಒಂದು ಪಂದ್ಯವನ್ನು ಆಡದಿದ್ದರೂ, ಭಾರತೀಯ ದೇಶೀಯ ಕ್ರಿಕೆಟ್ನಲ್ಲಿ ದಿಗ್ಗಜ ಎಂದು ಹೆಸರುವಾಸಿಯಾಗಿದ್ದರು.




